ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಬಾವ ಕಂಬನಿ

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಗಣ್ಯಣತಿಗಣ್ಯರು ಕಂಬನಿ ಮಿಡಿದಿದ್ದಾರೆ.

ಪತ್ರಿಕೋದ್ಯಮ ರಂಗದಲ್ಲಿ ನಿಷ್ಟುರ ವರದಿಗಾರಿಕೆ ಮೂಲಕ ತಮ್ಮದೇ ಆದ ಖ್ಯಾತಿ ಹಾಗೂ ಪ್ರತಿಷ್ಠೆ ಉಳಿಸಿಕೊಂಡವರು ರವಿಬೆಳಗೆರೆ. ಪತ್ತರಕರ್ತರಾಗಿ ಹಲವಾರು ಪ್ರಕರಣಗಳತ್ತ ಬೆಳಕು ಚೆಲ್ಲಿರುವ ರವಿ ಬೆಳಗೆರೆ ಅವರ ಬರಹಗಳು ಪೊಲೀಸ್ ತನಿಖೆಗೂ ವರದಾನವಾಗುತ್ತಿತ್ತು ಎಂದು ನಿವೃತ್ತ ಎಸ್ಪಿ ಜಿ.ಎ.ಬಾವ ನೆನಪಿಸಿಕೊಂಡಿದ್ದಾರೆ.

ಪತ್ರಿಕೋದ್ಯಮಿಯಾಗಿದ್ದರೂ ರವಿ ಬೆಳಗೆರೆಯವರು ಸಾಮಾಜಿಕ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದರು. ಇದಕ್ಕೆ ಅವರ ಶಿಕ್ಷಣ ಸಂಸ್ಥೆ ಸಾಕ್ಷಿಯಾಗಿದೆ ಎಂದು ಜಿ.ಎ.ಬಾವಾ ಹೇಳಿದ್ದಾರೆ.

ಪತ್ರಕರ್ತರಾಗಿ, ಲೇಖಕರಾಗಿ, ಕಥೆಗಾರರಾಗಿ, ಸಿನಿಮಾ ನಟರಾಗಿಯೂ ಜನಮಾನಸಕ್ಕೆ ಚಿರಪರಿಚಿತರಾಗಿರುವ ರವಿ ಬೆಳಗೆರೆಯವರ ನಿಧನದಿಂದ ರಾಜ್ಯದ ಜನ ಅಪೂರ್ವ ಮಾಣಿಕ್ಯವನ್ನು ಕಳೆದುಕೊಂಡಂತಾಗಿದೆ ಎಂದು ಬಾವಾ ಕಂಬನಿ ಮಿಡಿದ್ದಾರೆ.

Related posts