ಗಣರಾಜ್ಯೋತ್ಸವ ಸರಳ ಆಚರಣೆ; ಕೇಂದ್ರ ಸ್ಥಾನಗಳಲ್ಲಷ್ಟೇ ಅದ್ಧೂರಿ ಕ್ಷಣ

ದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ. ಆದರೆ ಈ ಬಾರಿ ಸರಳ ಆಚರಣೆ. ಬಹುತೇಕ ಕಡೆ ತ್ರಿವರ್ಣ ಧ್ವಜಾರೋಹಣ ಹಾಗೂ ಶುಭಾಷಯ ವಿನಿಮಯಗಳಿಗಷ್ಟೇ ಈ ಪ್ರಜಾಪ್ರಭುತ್ವದ ಹಬ್ಬವನ್ನು ಸೀಮಿತಗೊಳಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಸಮಸ್ತ ಜನತೆಗೆ ಶುಭಾಶಯ ಕೋರಿದ್ದಾರೆ. ಭಾರತದ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು, ಜೈ ಹಿಂದ್ ಎಂದು ಮೋದಿಯ ಟ್ವೀಟ್ ಮಾಡಿದ್ದಾರೆ.

ಈ ನಡುವೆ ದೇಶದ ಕೇಂದ್ರ ಸ್ಥಾನ ದೆಹಲಿಯ ರಾಜಪಥದಲ್ಲಿ ಎಂದಿನಂತೆ ಸೇನಾ ಶಕ್ತಿ ಪ್ರದರ್ಶಿಸುವ ಪೆರೇಡ್ ಗಮನಸೆಳೆದಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಗ್ರೌಂಡ್​ ಕೂಡಾ ಗಣರಾಜ್ಯೋತ್ಸವದ ಆಚರಣೆಯ ಅನನ್ಯ ಸಡಗರಕ್ಕೆ ಸಾಕ್ಷಿಯಾಯಿತು.

Related posts