ಖ್ಯಾತ ಉದ್ಯಮಿ ಆರ್​.ಎನ್​. ಶೆಟ್ಟಿ ವಿಧಿವಶ

ಬೆಂಗಳೂರು: ಖ್ಯಾತ ಉದ್ಯಮಿ ಆರ್​.ಎನ್​. ಶೆಟ್ಟಿ ವಿಧಿವಶರಾಗಿದ್ದಾರೆ. ಆರ್​.ಎನ್​.ಎಸ್​ ಮೋಟಾರ್ಸ್, ಆರ್​.ಎನ್​.ಎಸ್​ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಆರ್​.ಎನ್. ಶೆಟ್ಟಿ ಇಂದು ಮುಂಜಾನೆ ಹೃದಯಾಘಾತಕ್ಕೊಳಗಾದರೆನ್ನಲಾಗಿದೆ.

92 ವರ್ಷ ವಯಸ್ಸಿನ ಅವರು ಮುರುಡೇಶ್ವರ ದೇವಾಲಯದ ಅಭಿವೃದ್ಧಿ ಮೂಲಕ ದೇಶವಿದೇಶಗಳ ಗಮನಸೆಳೆದಿದ್ದರು.

ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆರ್​ಎನ್​ಎಸ್​ ತಾಂತ್ರಿಕ ವಿದ್ಯಾಲಯ ಕಾಲೇಜಿನ ಆವರಣದಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಕುಟುಂಬ ಸದ್ಸ್ಯರು ತಿಳಿಸಿದ್ದಾರೆ.

Related posts