ಬಿಜೆಪಿ ಪರ ಚಿತ್ರ ನಟಿ ಖುಷ್ಬೂ ಪ್ರಚಾರ; ಭರ್ಜರಿ ರೋಡ್ ಶೋ

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಅಖಾಡ ರಂಗೇರಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದ್ದಾರೆ, ಬಿಜೆಪಿ ಹುರಿಯಾಳು ಮುನಿರತ್ನ ಅವರನ್ನು ಪುನರಾಯ್ಕೆ ಮಾಡಲು ಕಮಲ ನಾಯಕರು ಶತಪ್ರಯತ್ನದಲ್ಲಿ ತೊಡಗಿದ್ದಾರೆ. ಜೆಡಿಎಸ್ ನಾಯಕರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಈ ನಡುವೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಪರವಾಗಿ ತಮಿಳುನಾಡಿನ ಬಿಜೆಪಿ ನಾಯಕಿ, ಚಿತ್ರ ನಟಿ ಖುಷ್ಬೂ ಸುಂದರ್ ಪ್ರಚಾರ ಕೈಗೊಂಡಿದ್ದಾರೆ.

ಲಗ್ಗೆರೆಯ ಕೆಂಪೇಗೌಡ ಆರ್ಚ್ ಸ್ಥಳದಿಂದ ಲಕ್ಷ್ಮಿದೇವಿ ನಗರ ಮತ್ತು ಯಶವಂತಪುರದಲ್ಲಿ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು.

Related posts