ಭೀಕರ ಅಪಘಾತದಲ್ಲಿ ಆರೆಸ್ಸೆಸ್ ನಾಯಕ ಸುಧಾಕರ್ ದುರ್ಮರಣ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಸುಧಾಕರ ದೇಶಪಾಂಡೆ ವಿಧಿವಶರಾಗಿದ್ದಾರೆ. ಬೀದರ್ ಜಿಲ್ಲೆ, ಭಾಲ್ಕಿ ಸಮೀಪ ಭಾತಂಬ್ರಾ ರಸ್ತೆಯಲ್ಲಿ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸುಧಾಕರ ದೇಶಪಾಂಡೆ ಅವರು ವಿಧಿವಶರಾಗಿದ್ದಾರೆ.

ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಸಹಿತ ಸಂಘದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಇವರು ಬೈಕ್’ನಲ್ಲಿ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಸುಧಾಕರ್ ದೇಶಪಾಂಡೆ ಅವರು ಸ್ಥಳದಲ್ಲೇ ಕೊಂಯುಸಿರೆಳೆದಿದ್ದಾರೆ. ಅವರ ಜೊತೆಗಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Related posts