ಅರೆಸ್ಸೆಸ್ ಹಿರಿಯ ಕಾರ್ಯಕರ್ತ ಮಾ.ಮಾಧವ ಗೋವಿಂದ ವೈದ್ಯ ವಿಧಿವಶ

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಮಾನನೀಯ ಮಾಧವ ಗೋವಿಂದ ವೈದ್ಯ ಅವರು ವಿಧಿವಶರಾಗಿದ್ದಾರೆ. 97 ವರ್ಷ ಹರೆಯದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಶನಿವಾರ ವೈದ್ಯಾ ಅವರು ನಾಗಪುರದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಂಘದ ಹಿರಿಯ ಕಾರ್ಯಕರ್ತರಾಗಿರುವ ಇವರು ಅರೆಸ್ಸೆಸ್’ನ ಆದ್ಯ ಸರಸಂಘಚಾಲಕ್ ಕೇಶವ ಬಲಿರಾಮ್ ಹೆಡಗೇವಾರ್ ಸಹಿತ ಈವರೆಗಿನ ಎಲ್ಲಾ ಸರಸಂಘಚಾಲಕರೊಂದಿಗೆ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡವರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ವಕ್ತಾರರಾಗಿ, ಬೌದ್ಧಿಕ ಪ್ರಮುಖರಾಗಿ ತಮ್ಮ ಭಾಷಣಕಾರರಾಗಿ ಎಲ್ಲರ ಗಮನಸೆಳೆಯುತ್ತಿದರು.

1923ರಲ್ಲಿ ಜನಿಸಿದ ಅವರು ಆರೆಸ್ಸೆಸ್ ನ ಪ್ರಾರಂಭದ ದಿನಗಳಿಗೆ ಸಾಕ್ಷಿಯಾದವರು.ಮರಾಠಿ ದೈನಿಕ ’ತರುಣ ಭಾರತ’ದ ಮಾಜೀ ಸಂಪಾದಕರಾಗಿರುವ ಮಾಧವ ಗೋವಿಂದ ವೈದ್ಯ ಅವರ ಮಗ ಮನಮೋಹನ ವೈದ್ಯ ಈಗ ಸಹಸರಕಾರ್‍ಯವಾಹರಾಗಿ ಸಂಘದ ಜವಾಬ್ಧಾರಿ ಹೊಂದಿದ್ದಾರೆ.

Related posts