‘ಸಮುದಾಯ ಬೆಂಗಳೂರು’; ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಮಹಿಳೆ ಆಯ್ಕೆ

ಬೆಂಗಳೂರು: ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾರ್ಯದರ್ಶಿಯಾಗಿ ಮಹಿಳೆ ಆಯ್ಕೆಯಾಗಿದ್ದಾರೆ. ಸಂಘದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಾವ್ಯ ಅಚ್ಯುತ್ ಅವರನ್ನು ರಂಗಕರ್ಮಿಗಳು, ಸಾಹಿತಿಗಳು ಅಭಿನಂದಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮತ್ತು ವಹಿಸುತ್ತಿರುವ ‘ಸಮುದಾಯ ಬೆಂಗಳೂರು’ ಇದರ ಸರ್ವಸದಸ್ಯರ ಸಭೆ ಬೆಂಗಳೂರಿನ ಕೆಂಪೇಗೌಡ ನಗರ ಬಡಾವಣೆಯಲ್ಲಿರುವ ಉದಯಭಾನು ಕಲಾಸಂಘದಲ್ಲಿ ನಡೆಯಿತು. ಪ್ರಸಕ್ತ ಸಾಂಸ್ಕೃತಿಕ, ರಾಜಕಾರಣ ಮತ್ತು ಕರ್ನಾಟಕದಾದ್ಯಂತ ನಡೆದ “ಒಳಿತು ಮಾಡು ಮನುಸ” ಬೀದಿ ರಂಗ ನಮನ ಕಾರ್ಯಕ್ರಮದ ವಿಮರ್ಷೆ ನಡೆಯಿತು. ಜೊತೆಗೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗಮನಸೆಳೆಯಿತು. ಸಮುದಾಯ ಬೆಂಗಳೂರು ಅಧ್ಯಕ್ಷರಾಗಿಅಗ್ರಹಾರ ಕೃಷ್ಣ ಮೂರ್ತಿ, ಉಪಾಧ್ಯಕ್ಷರಾಗಿ ಪದ್ಮ‌ ಶಿವಮೊಗ್ಗ ಹಾಗೂ ಕೀರ್ತಿ ತೊಂಡಗೆರೆ, ಕಾರ್ಯಾಧ್ಯಕ್ಷರಾಗಿ ಜೆ.ಸಿ.ಶಶಿಧರ, ಕಾರ್ಯದರ್ಶಿಯಾಗಿ ಕಾವ್ಯ ಅಚ್ಯುತ್ ಆಯ್ಕೆಯಾದ್ದರು. ಜಂಟಿ ಕಾರ್ಯದರ್ಶಿಗಳಾಗಿ ಗಣೇಶ ಶೆಟ್ಟಿ ಹಾಗೂ ನಾಗ ಲಕ್ಷ್ಮೀ, ಖಜಾಂಚಿಯಾಗಿ ಲವನಿಕ ವಿ ಯವರನ್ನು ಆಯ್ಕೆ ಮಾಡಲಾಯಿತು. ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕಾರ್ಯದರ್ಶಿಯಾಗಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದು ಸಮುದಾಯದ ರಂಗಕರ್ಮಿಗಳು, ಸಾಹಿತಿಗಳು, ಸಂಘಟಕರು ಅಭಿನಂದನೆ ವ್ಯಕ್ತಪಡಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ವೆಂಕಟೇಶ್ ಮೂರ್ತಿ, ರವೀಂದ್ರನಾಥ ಸಿರಿವರ, ನಾಚೇಗೌಡ ಬಿ.ಹೆಚ್., ದೀಲಿಪ್ ಎಸ್.ಪಿ, ಪೈರೋಜ್ ಕೆ, ಎಂ.ಎಸ್ ಇಂದಿರಾ, ರಾಜು ಡಿ.ವಿ, ಪ್ರಣವ್ ಭಾರದ್ವಾಜ್, ಕಿಶನ್ ರಾಮಮೂರ್ತಿ, ಎಂ.ವಿ ಸುರೇಶ್, ಮದನ್ ಶೆಟ್ಟಿ, ಶರತ್ ಕುಮಾರ್, ದೀಪಕ್ ರಾಜ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಸಮುದಾಯ ಕಾರ್ಯಕಾರಿ ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯವಿರುವುದು ಗಮನಾರ್ಹ. ಸಮುದಾಯ ಬೆಂಗಳೂರು ಸರ್ವ ಸದಸ್ಯರು ಹಾಗೂ ಸಮುದಾಯ ಕರ್ನಾಟಕ ಅಧ್ಯಕ್ಷರಾದ ಅಚ್ಚುತ ಮತ್ತು ಸಮುದಾಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಉಪಸ್ಥಿತರಿದ್ದರು.

Related posts