ರಾಜ್ಯದಲ್ಲಿ ‘ಸಪ್ತಪದಿ’ ಕಾರ್ಯಕ್ರಮ ಸದ್ಯಕ್ಕಿಲ್ಲ

ಬೆಂಗಳೂರು: ಕೊರೋನಾ ವೈರಾಣು ಹಾವಳಿ ರಾಜ್ಯ ಸರ್ಕಾರದ ‘ಸಪ್ತಪದಿ’ ಕಾರ್ಯಕ್ರಮಕ್ಕೂ ಅಡ್ಡಿಯಾಗಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಎ’ ದರ್ಜೆ ದೇವಸ್ಥಾನಗಳ ವತಿಯಿಂದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳ ‘ಸಪ್ತಪದಿ’ ಯೋಜನೆ ಪರಿಪೂರ್ಣವಾಗಿಲ್ಲ. ಹಾಗಾಗಿ ವಿವಾಹ ದಿನಾಂಕಗಳನ್ನು ಸರ್ಕಾರ ಮುಂದೂಡಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳ ಶುಭ ಮುಹೂರ್ತದಲ್ಲಿ ‘ಸಪ್ತಪದಿ’ ನಿರ್ಧರಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿರುವ ಮಂದಿಗೆ ಮಾಹಿತಿ ನೀಡಿ ಮುಂದಿನ ಸಾಮೂಹಿಕ ವಿವಾಹ ಕಾರ್ಯಕ್ರಮ ದಿನಾಂಕ ಸೂಚಿಸುವ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Related posts