‘ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’; ಪೋಷಕರಿಗೆ ಸಚಿವರಿಂದ ಧೈರ್ಯ

ಬೆಂಗಳೂರು: ಕೊರೋನಾ ಹಾವಳಿ ಸಂದರ್ಭದಲ್ಲೇ ಶಾಲೆಗಳ ಆರಂಭ ಬಗ್ಗೆ ಸಾರ್ವಜನಿಕವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಮಕ್ಕಳ ಪೋಷಕರಿಗೆ ಧೈರ್ಯ ತುಂಬುವ ಪ್ರಯತ್ನ ಸಚಿವರ ಕಡೆಯಿಂದ ಸಾಗಿದೆ.

SSLC ಪರೀಕ್ಷೆ ಸಂದರ್ಭದಲ್ಲೂ ಇದೇ ರೀತಿ ಆತಂಕ ಇದ್ದದ್ದು ಸಹಜ. ಆದರೆ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸುವ ಮೂಲಕ ಸರ್ಕಾರ ತನ್ನ ಬದ್ಧತೆ ನಿರೂಪಿಸಿತ್ತು. ಈಗಲೂ ಸಹ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ‘ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’ ಎಂಬುದೇ ಸರ್ಕಾರದ ಧ್ಯೇಯ ಎಂದು ಹೇಳಿದ್ದಾರೆ.

ಪೋಷಕರಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಪೋಷಕರಲ್ಲಿ ನನ್ನ ಮನವಿ. ಮಕ್ಕಳನ್ನು ಯಾವುದೇ ಆತಂಕವಿಲ್ಲದೆ ಶಾಲೆಗೆ ಕಳುಹಿಸಿ. ಮಕ್ಕಳ ಆಗಮನಕ್ಕೆ ಅವರ ಶಾಲೆ ಕಾಯುತ್ತಿದೆ, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ. ಸರ್ಕಾರ ಸದಾ ನಿಮ್ಮೊಂದಿಗಿದೆ. ಬನ್ನಿ, ಕೊರೊನಾ ಓಡಿಸೋಣ, ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ ಎಂದು ಡಾ ಸುಧಾಕರ್ ಹೇಳಿದ್ದಾರೆ.

Related posts