ಬಸ್ಯಾ ಪತ್ನಿ ಈಗ ಗ್ರಾ.ಪಂ. ಸದಸ್ಯೆ; ಯಾರು ಈ ಶಿಗ್ಲಿ ಬಸ್ಯಾ ಗೊತ್ತಾ?

ರಾಜ್ಯದ ಹಲವು ಕಡೆ 200ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ಅವುಗಳಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟು, ಅವುಗಳಿಗೆ ವಕೀಲರನ್ನಿಡದೇ ತಾನೇ ನಿಬಾಯಿಸಿ ಗೆಲ್ಲುತ್ತಿದ್ದ ಶಿಗ್ಲಿ ಬಸ್ಯಾ ಅಲಿಯಾಸ್ ಬಸವರಾಜ ಗಡ್ಡಿ ಇದೀಗ ಗ್ರಾಮ ಪಂಚಾಯತಿ ಮೆಂಬರ್’ನ ಪತಿ.

ತನ್ನ ಬೇಡಿಕೆಗಾಗಿ ಕಂಡ ಕಂಡಲ್ಲಿ ಟವರ್ ಗಳನ್ನ ಏರುತ್ತಿದ್ದವನ ಮಡದಿ ಗುಲ್ಜಾರಭಾನು ಶಿಗ್ಲಿ, ಲಕ್ಷ್ಮೀಶ್ವರ ಪಟ್ಟಣದ ಸಮೀಪದ ಶಿಗ್ಲಿ ಗ್ರಾಮ ವಾರ್ಡ್ ನಂಬರ 1ರಿಂದ ಕಣಕ್ಕೆ ಇಳಿದಿದ್ದರು. ಇದೀಗ ಶಿಗ್ಲಿ ಬಸುನ ಮಡದಿ 2 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಬ್ಬಿನ ರೈತನ ಚಿತ್ರದಡಿ ಚುನಾವಣೆ ಎದುರಿಸಿದ್ದ ಗುಲ್ಜಾರಭಾನುಗೆ ಮೂವರು ಮಹಿಳೆಯರು ಸ್ಪರ್ಧೆಯೊಡ್ಡಿದ್ದರು. ತೀವ್ರ ಪೈಪೋಟಿ ಏರ್ಪಟ್ಟಿದ್ದ ಅಖಾಡದಲ್ಲಿ ಚುನಾವಣೆಯಲ್ಲಿ ಕೊನೆಗೂ ಶಿಗ್ಲಿ ಬಸ್ಯಾನ ಪತ್ನಿ ಗೆದ್ದು ಬೀಗಿದ್ದಾರೆ.

Related posts