ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ​ ಸೆಂಚುರಿ ಸ್ಟಾರ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸೆಂಚುರಿ ಸ್ಟಾರ್​ ಶಿವರಾಜ್ ಕುಮಾರ್​ಗೆ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಈ ಬಾರಿ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ಆಚರಿಸಿಕೊಂಡರು.

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಯಾರೂ ತಮ್ಮ ಮನೆಯತ್ತ ಬರಬೇಡಿ ಎಂದು ಕೆಲವು ದಿನಗಳ ಹಿಂದೆಯೇ ಅಭಿಮಾನಿಗಳಿಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಶಿವಣ್ಣ ಮನೆ ಮುಂದೆ ಜನ ಜಮಾವಣೆಯ ಸನ್ನಿವೇಶ ಕಂಡುಬಂದಿಲ್ಲ. ಅಭಿಮಾನಿಗಳು ವೀಡಿಯೊ ಕಾಲ್ ಶಿವರಾಜ್ ಕುಮಾರ್ ಜೊತೆ ಮಾತನಾಡಿ ಶುಭಾಷಯ ಹಂಚಿಕೊಂಡರು.

 

 

Related posts