ಸ್ವಾರ್ಥ ರಾಜಕಾರಣ; ಸಿದ್ದರಾಮಯ್ಯ ವಿರುದ್ಧ ಹೊರಟ್ಟಿ ಆಕ್ರೋಶ

ಬೆಂಗಳೂರು: ಜೆಡಿಎಸ್ ಬಗ್ಗೆ ಟೀಕೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಬಸವರಾಜ ಹೊರಟ್ಟಿ ಆಕ್ರೋಶ ಹೊರಹಾಕಿದ್ದಾರೆ.

ಅವಕಾಶವಾದಿತನ ಸ್ವಾರ್ಥ ರಾಜಕಾರಣದಿಂದ ಹೊರತಾಗದ ಆತ್ಮೀಯ ಸ್ನೇಹಿತರೂ ಆದ ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯರೂ ಆದ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್’ನ ದಿಡ್ಡಿ ಬಾಗಿಲು ತೆಗೆಯಲು ಜೆಡಿಎಸ್ ನಲ್ಲಿ ಅವರಿಗೆ ಸಿಕ್ಕ ಸ್ಥಾನಮಾನ ಮನ್ನಣೆಗಳು ಕಾರಣ. ಇಲ್ಲದಿದ್ದರೆ ಪಕ್ಷಾಂತರ ಮಾಡಿದ ಪಕ್ಷದಲ್ಲಿ ಎಲ್ಲಿ ಕಳೆದು ಹೋಗುತ್ತಿದ್ದರೋ? ಎಂದು ಹೊರಟ್ಟಿ ಲೇವಡಿಮಾಡಿದ್ದಾರೆ.

ಜೆಡಿಎಸ್ ವಿರುದ್ಧ ಮುಗಿಬೀಳುವ ಮುನ್ನ ತಾವು ರಾಜಕಾರಣದಲ್ಲಿ ಮಾಗಿದ್ದು ಎಲ್ಲಿ ಎಂಬುದನ್ನು ಆತ್ಮಸಾಕ್ಷಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿಕೊಳ್ಳಲಿ ಎಂದು ಹೊರಟ್ಟಿ ಕುಟುಕಿದ್ದಾರೆ.

Related posts