ಪತಿಯಿಂದ ಡೈವೋರ್ಸ್ ಪಡೆಯಲು ಈ ತಾರೆ ಕೊಟ್ಟಿದ್ದು 1248 ಕೋಟಿ ರೂ.

ವಿಚ್ಛೇದನ ಪ್ರಕ್ರಿಯೆ ಸಂದರ್ಭದಲ್ಲಿ ಪತಿಯು ಪತ್ನಿಗೆ ಪರಿಹಾರ ಅಥವಾ ಜೀವನಾಂಶ ಕೊಡಬೇಕಾದದ್ದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಆ ರೀತಿ ಅಲ್ಲ. ಇಲ್ಲಿ ಪತ್ನಿಯೇ ತನ್ನ ಪತಿಗೆ ದಾಂಪತ್ಯದಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅಂದರೆ ಡೈವೋರ್ಸ್ ವೇಳೆ ಬರೋಬ್ಬರಿ 1248 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ.

ಈಕೆ ಹಾಲಿವುಡ್​ ಖ್ಯಾತ ಗಾಯಕಿ ಅಡೆಲೆ. ತನ್ನ ಪತಿ ಸೈಮೆನ್​ ಕನ್ಕಿಗೆ ವಿಚ್ಛೇದನ ನೀಡಿದ್ದಾರೆ. ಈ ವಿಚ್ಛೇದನಕ್ಕಾಗಿ 1248 ಕೋಟಿ ರೂಪಾಯಿ ಪರಿಹಾರ ನೀಡಿ ವಿಶ್ವದ ಗಮನಸೆಳೆದಿದ್ದಾರೆ.

ಹಾಲಿವುಡ್ ಸಿಂಗರ್ ಅಡೆಲೆ ಮತ್ತು ಮತ್ತು ಸೈಮನ್​​ 2011ರಲ್ಲಿ ಡೇಟಿಂಗ್​ ಆರಂಭಿಸಿದ್ದರಂತೆ. ಅನಂತರ ಒಂದು ವರ್ಷದಲ್ಲಿ ಈ ಜೋಡಿಗೆ ಗಂಡು ಮಗು ಜನಿಸಿದೆ. ಆದರೂ ಇವರಿಬ್ಬರು ವಿವಾಹವಾಗಿದ್ದು 2016ರಲ್ಲಿ. ಕೆಲ ಸಮಯ ಸಂತಸದಿಂದ ಇದ್ದ ಈ ದಂಪತಿ ಮಧ್ಯೆ ಅನಂತರ ಅದೇನಾಯಿತೋ ಗೊತ್ತಿಲ್ಲ. ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಆಗಾಗ್ಗೆ ಜಗಳ ಏರ್ಪಡುತ್ತಿತ್ತು.

ಅಡೆಲೆಗೆ ಕಬ್ಬಿಣದ ಕಡಲೆಯಂತಾದ ಡೈವೋರ್ಸ್

ವಿವಾಹವಾದ ಕೆಲವೇ ವರ್ಷಗಳಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಈ ಜೋಡಿ ವಿಚ್ಛೇದನದ ಹಾದಿಯಲ್ಲಿ ಸಾಗುತ್ತದೆ. ಇದೀಗ 32ರ ಹರೆಯದ ಈ ಸುಂದರಿ ತನ್ನ ಪತಿಯಿಂದ ದೂರವಾಗಲು ಬಯಸಿದ್ದ ವಿಚ್ಛೇದನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ಈ ಡೈವೋರ್ಸ್ ಸಂದರ್ಭದಲ್ಲಿ ಅಡೆಲೆ ಪತಿಗೆ ಬರೋಬ್ಬರಿ 171 ಮಿಲಿಯನ್ ಡಾಲರ್ ಪರಿಹಾರ ನೀಡಬೇಕಾಯಿತು. ಗ್ರ್ಯಾಮಿ ಮತ್ತು ಆಸ್ಕರ್​ ಪ್ರಶಸ್ತಿ ಪುರಸ್ಕೃತ ಈ ಗಾಯಕಿಯ ಈ ಸ್ಥಿತಿ ಅಭಿಮಾನಿಗಳಿಗೆ ಬೇಸರ ತಂದಿದೆಯಾದರೂ ಈ ಪರಿಸ್ಥಿತಿ ಎದುರಿಸದೆ ಅಡೆಲೆಗೆ ಬೇರೆ ದಾರಿಯೇ ಇರಲಿಲ್ಲವಂತೆ.

Related posts