ಸೊಲಬಕ್ಕನವರ್ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ‌ ಸಂತಾಪ

ಬೆಂಗಳೂರು: ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಟಿ. ಬಿ. ಸೊಲಬಕ್ಕನವರ್ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಸೊಲಬಕ್ಕನವರ್ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾಗಿದ್ದರು. ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಎಂಬ ಗ್ರಾಮದಲ್ಲಿ ಶಿಲ್ಪಕಲಾ ಕುಟೀರ ಉತ್ಸವ ರಾಕ್ ಗಾರ್ಡನ್ ನಿರ್ಮಿಸಿ, ದೇಶೀ ಕಲೆಯ ಪ್ರಚಾರಕರಾಗಿದ್ದರು ಎಂದು ತಿಳಿಸಿರುವ ಸಚಿವ ರಮೇಶ್ ಜಾರಕಿಹೊಳಿ‌, ಇವರ ಕಲಾಪ್ರತಿಭೆಯನ್ನು ಗಮನಿಸಿ ಬಯಲಾಟ ಅಕಾಡೆಮಿ ಗೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Related posts