ಊರಿಗೆ ಹೋಗಬೇಕೆ..? ಸರ್ಕಾರದಿಂದ ಕೊನೆಗೂ ಗ್ರೀನ್ ಸಿಗ್ನಲ್

ದೆಹಲಿ: ಕೊರೋನಾ ಕಂಟಕದಿಂದ ಪಾರಾಗಲು ದೇಶವ್ಯಾಪಿ ಲಾಕ್’ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಯಾರು ಎಲ್ಲಿದ್ದಾರೋ ಅಲ್ಲೇ ಲಾಕ್.. ಈ ವರೆಗೂ ಆ ರೀತಿ ಪರಿಸ್ಥಿತಿ ಇತ್ತು. ಇದೀಗ ಸಂಕಷ್ಟದಲ್ಲಿರುವ ಮಂದಿ ಬಗ್ಗೆ ಕೇಂದ್ರ ಸರ್ಕಾರ ಅನುಕಂಪ ತೋರಿದೆ. ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ತವರಿಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೊರೋನಾ ವೈರಾಣು ಹರಡುವಿಕೆಯ ವೇಗ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಿರುವ ಸರ್ಕಾರ ಆರ್ಥಿಕ ಪರಿಸ್ಥಿತಿಗೆ ಬೀಳುತ್ತಿರುವ ಹೊಡೆತ ತಪ್ಪಿಸುವ ಪ್ರಯತ್ನ ಮಾಡಿದೆ. ಹಾಗಾಗಿ ಐಟಿ ಸಹಿತ ಉತ್ಪಾದನಾ ವಲಯಗಳ ಕಾರ್ಯಾಚರಣೆಗೆ ಬಾಗಶಃ ಅವಕಾಶ ನೀಡಿದೆ. ಅದರ ಜೊತೆಯಲ್ಲೇ ಇದೀಗ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿದೆ.

ಸಂದಿಗ್ದತೆಯಲ್ಲಿರುವವರು ತಮ್ಮ ಊರಿಗೆ ತೆರಳಲು ಅನುಕೂಲವಾಗುವ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆ ತಲುಪಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ವಲಸೆ ಕಾರ್ಮಿಕರು ಅಥವಾ ವಿದ್ಯಾರ್ಥಿಗಳು ಹೊರ ರಾಜ್ಯಗಳಲ್ಲಿದ್ದರೆ ಅವರು ಸ್ವಂತ ಊರಿಗೆ ತೆರಳಲು ಅನುಕೂಲವಾಗುವ ರೀತಿಯಲ್ಲಿ ಉಭಯ ರಾಜ್ಯಗಳು ಸಹಮತದ ನಿರ್ಧಾರ ತೆಗೆದುಕೊಳ್ಳಬೇಕೆಂದೂ ಕೇಂದ್ರ ಸರ್ಕಾರ ಸಲಹೆ ಮಾಡಿದೆ.

Related posts