ನಾಡೋಜ ಡಾ.ಸುಭದ್ರಮ್ಮ ಮನ್ಸೂರು ನಿಧನಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸಂತಾಪ

ಕನ್ನಡ ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ಸಂಗೀತ ಲೋಕದ ಅನರ್ಘ್ಯ ರತ್ನ, ನಾಡೋಜ ಪ್ರಶಸ್ತಿ ಪುರಸ್ಕೃತ, ಡಾ|| ಸುಭದ್ರಮ್ಮ ಮನ್ಸೂರು ನಿಧನಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ಸುಭದ್ರಮ್ಮ ಮನ್ಸೂರು ಅವರ ಆತ್ಮಸ್ಥೈರ್ಯ ಮತ್ತು ಆತ್ಮಭಿಮಾನ‌ ಇಡೀ ಸ್ತ್ರೀ ಸಮಾಜವೇ ಅಭಿಮಾನ ಪಡುವಂತದ್ದು. ಇಡೀ ಸ್ತ್ರೀ ಸಮುದಾಯಕ್ಕೆ ಅವರು ಆದರ್ಶಪ್ರಾಯರಾಗಿದ್ದು ಅವರ ಕಲಾ ಸೇವೆ ಅಪಾರ ಎಂದು ಪ್ರಮೀಳಾ ನಾಯ್ಡು ಸ್ಮರಿಸಿದ್ದಾರೆ.

ಡಾ.ಸುಭದ್ರಮ್ಮ ಮನ್ಸೂರು ಇವರ ಅಭಿನಯಕ್ಕೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ಇವರಿಗೆ ಸಂದಿದ್ದು, ರಂಗಭೂಮಿಯ ‘ಅಭಿನಯ ಶಾರದೆ’ ಎಂದೇ ಖ್ಯಾತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಭಗವಂತ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಆರ್. ಪ್ರಮೀಳಾ ನಾಯ್ಡು ಪ್ರಾರ್ಥಿಸಿದ್ದಾರೆ.

Related posts