ಬೇಸಿಗೆಯ ಬೇಗೆಗೆ ಪಾನೀಯಾ ತಂಪು.. ಹಲಸಿನ ಬೀಜದ ಮಿಲ್ಕ್ ಶೇಕ್..

ಬೇಸಿಗೆಯ ಬೇಗೆ.. ಬಿಸಿಲ ಧಗೆ.. ಸುಸ್ತು-ಆಯಾಸ ಅಂತಾ ಹೇಳುವ ಮಂದಿಗೆ ಇಲ್ಲಿದೆ ಚೈತನ್ಯದಾಯಕ ಪಾನೀಯ.. ಹಳ್ಳಿ ಸೊಗಡಿನ ಈ ಪಾಣಿಯಾದ ಆಹ್ಲಾದ ಹೇಗಿದೆ ಗೊತ್ತಾ? ಹಲಸಿನ ಬೀಜವನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ, ಸ್ವಲ್ಪ ನೀರನ್ನು ಹಾಕಿ 4 -5 ವಿಸಿಲ್ ಹಾಕಿಸಬೇಕು. ಅದು ಬೆಂದ ನಂತರ ಅದರ ಸಿಪ್ಪೆಯನ್ನು ತೆಗೆಯಬೇಕು. ಆಮೇಲೆ ಒಂದು ಜಾರಿಗೆ ಸಿಪ್ಪೆ ತೆಗೆದ ಹಲಸಿನ ಬೀಜ, ಬೆಲ್ಲ , ಇಸ್ ಕ್ಯೂಬ್ ಹಾಕಿ ರುಬ್ಬಿಕೊಳ್ಳಬೇಕು. ಒಂದು ಬಾರಿ ರುಬ್ಬಿ ಆದ ಮೇಲೆ ಕೋಲ್ಡ್ ಹಾಲನ್ನು ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಬೇಕು. ಮತ್ತೆ ಬೇಕಾದ ಹಾಗೆ ಹಾಲು ಹಾಕಿಕೊಂಡು ಹದ ಮಾಡಿಕೊಂಡರೆ ಹಲಸಿನ ಬೀಜದ ಮಿಲ್ಕ್ ಶೇಕ್ ಸವಿಯಲು ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಫ್ರಿಜ್’ನಲ್ಲಿಟ್ಟು ಸ್ವಲ್ಪ ಹೊತ್ತಿನ ಬಳಿಕ ಸವಿಯಬಹುದು. ವೀಡಿಯೋ ನೋಡಿ ನೀವೂ ಮಾಡಿ..    Detailed…