ಟಿಕ್ ಟಾಕ್ ಕ್ರೇಜ್.. ಯುವಕರಿಗೆ ಜೈಲ್..

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಹಾಗಾಗಿ ಪಟ್ಟಣಕ್ಕೆಹೋಗುವಂತಿಲ್ಲ. ಆದರೆ ಕಾಡಿಗೆ?

ಈ ರೀತಿ ಪ್ರಶ್ನೆಗಳನ್ನು ಹಾಕುತ್ತಲೇ ಹುಡುಗರು ಟಿಕ್’ಟಾಕ್ ಮಾಡಿದ್ದಾರೆ. ಇದೀಗ ಅರೆಸ್ಟ್ ಆಗಿದ್ದಾರೆ.

ಟಿಕ್ ಟಾಕ್ ಮಾಡಿದ ಮಾತ್ರಕೆ ಅರೆಸ್ಟ್ ಆಗಿದ್ದಾರೆಂದು ಪೊಲೀಸರು ಹೇಳುತ್ತಿಲ್ಲ. ಇವರ ಟಿಕ್’ಟಾಕ್ ಅಪರಾಧವೊಂದರ ಸುಳಿವು ನೀಡಿತ್ತಂತೆ. ಹಾಗಾಗಿ ಬಂಧಿತರಾಗಿದ್ದಾರೆ.

ಏನಿದು ಪ್ರಕರಣ?

ತುಮಕೂರು ಜಿಲ್ಲೆ ಮಧುಗಿರಿಯ ಯುವಕರಿಬ್ಬರು ಲಾಕ್’ಡೌನ್ ನಡುವೆ, ಜೋಜಿಗಾಗಿ ಬೇಟೆಗೆ ಮುಂದಾಗಿದ್ದರು. ಬೇಟೆ ಸಂದರ್ಭದಲ್ಲಿ ಕಾಡು ಮೊಲ ಸಿಕ್ಕಿದೆ. ಈ ಖುಷಿಯಲ್ಲೇ ಇವರು ಅದನ್ನು ಬೇಟೆಯಾಡಿ ಟಿಕ್‌ಟಾಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇದನ್ನೂ ಓದಿ.. ರಾಜ್ಯದಲ್ಲಿ ಕಿಲ್ಲರ್ ಕೊರೋನಾಗೆ ಮತ್ತೆ ಮೂವರು ಬಲಿ

ಬೇಟೆ ವೇಳೆ ಸಿಕ್ಕಿದ ಮೊಲವನ್ನು ಕತ್ತರಿಸುತ್ತಿದ್ದ ಟಿಕ್’ಟಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದೇ ತಡ, ಬೇಟೆಗಾರರ ಹೆಜ್ಜೆ ಜಾಡು ಬೆನ್ನತ್ತಿದ ತುಮಕೂರು ಉಪ ಅರಣ್ಯ ಸಂರಕ್ಷಾಣಾಧಿಕಾರಿ ಹೆಚ್.ಸಿ.ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಏನೋ ಮಾಡಲು ಹೋದ ಇವರನ್ನು ಟಿಕ್ ಟಾಕ್ ಇಷ್ಟೆಲ್ಲಾ ಅವಾಂತರಕ್ಕೆ ತಳ್ಳುತ್ತೆ ಎಂದು ಆಗಷ್ಟೇ ಈ ಯುವರಿಗೆ ತಿಳಿಯಿತೋ ಏನೋ..

ಇದನ್ನೂ ಓದಿ.. ಕುತೂಹಲ ಕೆರಳಿಸಿದ ಸಚಿವ ಶ್ರೀರಾಮುಲು ದುಬಾರಿ ಮಾಸ್ಕ್.. 

ಶ್ರೀರಾಮುಲು ಧರಿಸಿರುವ ಮಾಸ್ಕ್ ಯಾವುದು ಗೊತ್ತಾ? ಸ್ನೇಹಿತ ಕೊಟ್ಟ ಗಿಫ್ಟ್..

 

 

Related posts