ಟ್ರಂಪ್ ವಿರುದ್ಧ ಸಿಡಿದೆದ್ದಿತೇ ಟ್ವಿಟರ್, ಫೇಸ್’ಬುಕ್?

ವಾಷಿಂಗ್ಟನ್: ಅಮೆರಿಕ ರಾಜಧಾನಿ ವಾಷಿಂಗ್ಟನ್ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ನಡುವೆೇ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ ನೂರಾರು ಟ್ರಂಪ್ ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಗಿಳಿದು ಹಿಂಸಾಚಾರದಲ್ಲಿ ಭಾಗಿಯಾಗಿದ್ದರು. ಟ್ರಂಪ್ ಬೆಂಬಲಿಗರ ಈ ದಾಂಧಲೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನೀಡಿದ ಪ್ರಚೋಧನಾತ್ಮಕ ಭಾಷಣದ ಹಿನ್ನಲೆಯಲ್ಲಿ ಟ್ರಂಪ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಟ್ರಂಪ್ ಅವರ, ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಖಾತೆಯನ್ನು ತಾತ್ಕಾಲಿಕ ಅಮಾನತಿನಲ್ಲಿಡಲಾಗಿದೆ. ಟ್ವಿಟರ್‌ನಲ್ಲಿ ಸುಳ್ಳು ಆರೋಪಗಳನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಟ್ರಂಪ್ ಖಾತೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಟ್ವಿಟರ್ ಎಚ್ಚರಿಸಿದೆ. ಟ್ರಂಪ್ ಪೋಸ್ಟ್ ಮಾಡಿರುವ ವಿಡಿಯೊವನ್ನು ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸಹ ತೆಗೆದು ಹಾಕಿದೆ ಎನ್ನಲಾಗಿದೆ.

Related posts