ದಕ್ಷಿಣಕನ್ನಡ ಜಿಲ್ಲೆ ಸಜಿಪದಲ್ಲಿ ಅಮ್ರಾ ಪ್ಲೋರ್ & ಆಯಿಲ್ ಮಿಲ್ ಅಸ್ತಿತ್ವಕ್ಕೆ

ಮಂಗಳೂರು: ರೈತರನ್ನು ಉತ್ತೇಜಿಸಲು ಹಾಗೂ ಉದ್ಯೋಗ ಸೃಷ್ಟಿಯ ಮಹತ್ವಾಕಾಂಕ್ಷೆಯೊಂದಿಗೆ ದಕ್ಷಿಣಕನ್ನಡ ಜಿಲ್ಲೆ ಸಜಿಪದಲ್ಲಿ ಅಮ್ರಾ ಪ್ಲೋರ್ & ಆಯಿಲ್ ಮಿಲ್ ಅಸ್ತಿತ್ವಕ್ಕೆ ಬಂದಿದೆ.

ಬಂಟ್ವಾಳ ಸಜೀಪದಲ್ಲಿ ಸ್ಥಾಪನೆಯಾಗಿರುವ ಅಮ್ರಾ ಪ್ಲೋರ್ & ಆಯಿಲ್ ಮಿಲ್’ನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್’ರವರು ಉದ್ಘಾಟಿಸಿದರು.

ಕಂಪೆನಿಯ ಮಾಲಕರಾದ ರಹ್ಮತುಲ್ಲಾ ರವರು ಹಾಗೂ ದಾರುನ್ನೂರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಕೋಶಾಧಿಕಾರಿ ಮುಹಮ್ಮದ್ ಹನೀಫ್ ಹಾಜಿ, ಕಾರ್ಯದರ್ಶಿಗಳಾದ ಸಮದ್ ಹಾಜಿ, ಅದ್ದು ಹಾಜಿ,ಹುಸೈನಬ್ಬ ಸಹಿತ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts