ಮತ್ತೊಬ್ಬರು ಖ್ಯಾತ ಸಿನಿಮಾ ತಾರೆ ಬಿಜೆಪಿಗೆ

ದಕ್ಷಿಣದ ರಾಜ್ಯಗಳಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಮುಂದುವರಿದಿದ್ದು, ದಕ್ಷಿಣ ಭಾರತದ ಮತ್ತೊಬ್ಬರು ಖ್ಯಾತ ಸಿನಿಮಾ ನಟಿ ಬಿಜೆಪಿ ಸೇರಲು ಸಿದ್ದರಾಗಿದ್ದಾರೆ.

ಕೆಲ ಸಮಯದ ಹಿಂದಷ್ಟೇ ಬಹುಭಾಷಾ ತಾರೆ ಖುಷ್ಬೂ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದ್ದರು. ಇದೀಗ ಮತ್ತೊಬ್ಬರು ಬಹುಭಾಷಾ ತಾರೆ ವಿಜಯಶಾಂತಿ ಕೂಡಾ ಕಮಲ ಹಿಡಿಯಲಿದ್ದಾರೆ.

ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ. ಅಮಿತ್ ಷಾ ಸಮ್ಮುಖದಲ್ಲಿ ವಿಜಯಶಾಂತಿ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ. ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಸಂದರ್ಭದಲ್ಲೇ ವಿಜಯಶಾಂತಿ ಬಿಜೆಪಿ ಸೇರುತ್ತಿರುವುದು ತೀವ್ರ ಕುತೂಹಲಕಾರಿ ಬೆಳವಣಿಗೆಯಾಗಿದೆ.

Related posts