ಪೊಲೀಸ್ ಎನ್ಕೌಂಟರ್’ನಲ್ಲಿ ಪಾತಕಿ ವಿಕಾಸ್‌ ದುಬೆ ಹತ್ಯೆ

ಲಕ್ನೋ: ಖಾಕಿ ಕಾರ್ಯಾಚರಣೆ ವೇಳೆ ಎಂಟು ಮಂದಿ ಪೊಲೀಸರ ನರಮೇಧಕ್ಕೆ ಕಾರಣನಾಗಿದ್ದ ಕುಖ್ಯಾತ ರೌಡಿ‌ ವಿಕಾಸ್‌ ದುಬೆ ಕೊನೆಗೂ ಶವವಾಗಿ ಪೊಲೀಸರ ವಶವಾಗಿದ್ದಾನೆ. ಹಲವು ದಿನಗಳಿಂದ ಉತ್ತರ ಪ್ರದೇಶ ಪೊಲೀಸರು ಈತನಿಗಾಗಿ ಬೇಟೆ ಕೈಗೊಂಡಿದ್ದರು. ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಬಂಧನಕ್ಕೊಳಗಾಗಿದ್ದ ವಿಕಾಸ್‌ ದುಬೆ ನನ್ನು ಕಾನ್ಪುರಕ್ಕೆ ಕರೆದೊಯ್ಯುವ ವೇಳೆ ನಡೆದ ಎನ್ಕೌಂಟರ್’ನಲ್ಲಿ ಆತ ಸಾವನ್ನಪ್ಪಿದ್ದಾನೆ.

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಗುರುವಾರ ವಿಕಾಸ್ ದುಬೆಯನ್ನು ಸ್ಥಳೀಯ ಪೊಲೀಸರು ಬಂಧಿಸಿ ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಆತನನ್ನು ಕಾನ್ಪುರಕ್ಕೆ ಕರೆದೊಯ್ಯುವ ವೇಳೆ ಪೊಲೀಸರ ವಾಹನ ಮಗುಚಿದೆ.

ಭಾರೀ ಮಳೆಯ ನಡುವೆ ವಾಹನ ಪಲ್ಟಿಯಾಗಿದ್ದು, ಆವೇಳೆ ಭಾರೀ ಸದ್ದು ಕೇಳಿಸಿಕೊಂಡಿದೆ. ಆ ವೇಳೆಗಾಗಲೇ ವಿಕಾಸ್ ದುಬೆ ಪೊಲೀಸರ ರಿವಾಲ್ವರ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ನಡೆದ ಎನ್ಕೌಂಟರ್’ನಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ.. ಯೋಗಿಯ ನಾಡಲ್ಲಿ ಭೀಕರ ನರಮೇಧ; ರೌಡಿಯ ಬೇಟೆಗಿಳಿದ 8 ಪೊಲೀಸರ ಹತ್ಯೆ 

 

Related posts