ಸಿಲಿಕಾನ್ ಸಿಟಿ ಇನ್ನು ಮುಂದೆ ವೈಫೈ ಸಿಟಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮುಂದಿನ 9 ತಿಂಗಳ ಒಳಗಾಗಿ ಉಚಿತ ವೈಫೈ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ವೈಫೈ ಹಾಟ್ ಸ್ಪಾಟ್‌ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಈ ಕ್ರಮದಿಂದಾಗಿ ಪ್ರತಿದಿನ ಒಂದು ಗಂಟೆ ಅತ್ಯಂತ ವೇಗದ ಇಂಟರ್ ನೆಟ್ ಸೌಲಭ್ಯ ದೊರೆಯಲಿದೆ.

ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಟೆಕ್ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರದ ಈ ನೂತನ ಯೋಜನೆಯನ್ನು ಪ್ರಕಟಿಸಿದರು. ನಾಲ್ಕು ವರ್ಷಗಳಿಂದ ವೈಫೈ ಸೌಲಭ್ಯಕ್ಕೆ ಬೇಡಿಕೆ ಇದೆ. ಬೆಂಗಳೂರು ಡಿಜಿಟಲ್ ನಗರ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಾಮರ್ಥ್ಯದ ಇಂಟರ್ ನೆಟ್ ಕಲ್ಪಿಸಲು ಆಕ್ಟ್ ಸಂಸ್ಥೆ ಮುಂದಾಗಿದೆ. ಈ ಯೋಜನೆಯನ್ನು ೯ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಬೆಂಗಳೂರು ನಗರದ 800 ಕಿ.ಮೀ. ವ್ಯಾಪ್ತಿಯಲ್ಲಿ ಕ್ಷಿಪ್ರ ವೇಗದ ಅಂತರ್ಜಾಲ ಸಂಪರ್ಕ ಕಲ್ಪಿಸಲು ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ ಅವರು ಈ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ.

Related posts

Leave a Comment