ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರ ಯಶ್ ದಂಪತಿ? ಹಣೆ ಮೇಲೆ ಮೂರು ಬೆರಳಿನ ರಹಸ್ಯವೇನು ಗೊತ್ತಾ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ? ಇಂಥದ್ದೊಂದು ಮಾತು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ.

ಈ ಸುದ್ದಿ ಹರಿದಾಡಲು ಕಾರಣ ಯಶ್​ ಇತ್ತೀಚೆಗಷ್ಟೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವ ಪೋಸ್ಟ್. ಲಾಕ್​ಡೌನ್​ನ ನಿಯಮ ನನ್ನ ಪತ್ನಿಗೆ ತುಂಬಾ ಇಷ್ಟವಾಗಿದೆ. ರಾತ್ರಿ 8ಕ್ಕೆ ಮನೆಗೆ ಬರುವುದು ಹಾಗೂ ಭಾನುವಾರ ಇಡೀ ದಿನ ಜೊತೆಗಿರುವುದು ನನ್ನ ಹೆಂಡತಿಗೂ ಬೇಕಿತ್ತು ಎಂದು ಹಾಕಿರುವ ಪೋಸ್ಟ್ ಕುತೂಹಲ ಕೆರಳುವಂತೆ ಮಾಡಿದೆ. ಅಷ್ಟೇ ಅಲ್ಲ ಹಣೆಯ ಮೇಲೆ ಮೂರು ಬೆರಳು ಇಟ್ಟುಕೊಂಡಿರುವ ಫೋಟೋ ಮತ್ತಷ್ಟು ಕುತೂಹಲಕಾರಿ ವಿಚಾರಗಳತ್ತ ಬೊಟ್ಟು ಮಾಡಿದೆ. ಈ ತಾರಾ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಹಲವಾರು ಪ್ರಶ್ನಿಸಿದ್ದಾರೆ.

ಅಭಿಮಾನಿಗಳ ಕುತೂಹಲಕಾರಿ ಕಾಮೆಂಟ್ ಕುರಿತಂತೆ ಪ್ರತಿಕ್ರಿಯಿಸಿರುವ ರಾಧಿಕಾ ಪಂಡಿತ್, ಆ ರೀತಿಯ ಯಾವುದೇ ಸುದ್ದಿ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ.. ಟಿಕ್ ಟಾಕ್ ಸಹಿತ ನಿಷೇಧಿತ ಆಪ್ ಬಳಕೆ ಮುಂದುವರಿಸಬಹುದೇ? ಮುಂದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ 

 

Related posts