ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ಬಳಿಯ ಟೊಯೋಟಾ ಕಾರ್ಖಾನೆಯ ಸ್ನಾನಗೃಹದ ಗೋಡೆಗಳ ಮೇಲಿನಪಾಕಿಸ್ತಾನ ಪರವಾದ ಬರಹಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು 24 ವರ್ಷದ ಹೈಮದ್ ಹುಸೇನ್ ಮತ್ತು 20 ವರ್ಷದ ಸಾದಿಕ್ ಎಂದು ಗುರುತಿಸಲಾಗಿದೆ, ಇಬ್ಬರೂ ಟೊಯೋಟಾ ಬೊಶೋಕು ಆಟೋಮೋಟಿವ್ ಇಂಡಿಯಾ ಕಂಪನಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಾಗಿದ್ದು ಅವರು ಉತ್ತರ ಕರ್ನಾಟಕ ಮೂಲದವರೆನ್ನಲಾಗಿದೆ. ಹಸಿರು ಬಣ್ಣವನ್ನು ಬಳಸಿ ಕನ್ನಡದಲ್ಲಿ ಬರೆಯಲಾದ ಈ ಬರಹದಲ್ಲಿ ‘ಪಾಕಿಸ್ತಾನಕ್ಕೆ ವಿಜಯ’ ಮುಂತಾದ ಪಾಕಿಸ್ತಾನ ಪರ ಘೋಷಣೆಗಳು ಮತ್ತು ಕರ್ನಾಟಕದ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿವೆ. ಕಾರ್ಖಾನೆಯು ಮೂರು ಪಾಳಿಗಳಲ್ಲಿ ಕೆಲಸ ಮಾಡುವ 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು, ಪ್ರತಿ ಪಾಳಿಯಲ್ಲಿ 600 ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಮಾರ್ಚ್ 16 ರಂದು ಮೊದಲ ಪಾಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.…
Day: March 20, 2025
ರಾಜ್ಯದ ವಿದ್ಯಾರ್ಥಿಗಳಿಗೆ AI ತರಬೇತಿ; NIELIT ಜೊತೆ GTTC ಒಪ್ಪಂದ
ಬೆಂಗಳೂರು: ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC) ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸುಧಾರಿತ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ಕೌಶಲ್ಯ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದೆ. GTTC ಕ್ಯಾಂಪಸ್‌ನಲ್ಲಿ NIELIT ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಲು ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ನೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ (MoU) ಬುಧವಾರ ಸಹಿ ಹಾಕಲಾಯಿತು. ಈ ಸಹಯೋಗವು ವಿದ್ಯಾರ್ಥಿಗಳಿಗೆ – ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಅಂಚಿನಲ್ಲಿರುವ ಸಮುದಾಯಗಳವರಿಗೆ – ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಡೇಟಾ ವಿಶ್ಲೇಷಣೆ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಅತ್ಯಾಧುನಿಕ ತರಬೇತಿ ಒದಗಿಸಲು ನೆರವಾಗಲಿದೆ. ವಿಕಾಸ ಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ GTTC ವ್ಯವಸ್ಥಾಪಕ ನಿರ್ದೇಶಕ ವೈ.ಕೆ. ದಿನೇಶ್ ಕುಮಾರ್ ಮತ್ತು NIELIT…
ಮಲ್ಪೆಯಲ್ಲಿ ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ
ಉಡುಪಿ: ಮೀನು ಅಳ್ಳತನ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ಮಾರ್ಚ್ 18 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಹಲ್ಲೆ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು ಎಂದಿರುವ ಸಿಎಂ, ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧ ಎಂದಿದ್ದಾರೆ. ಇಂತಹ…
ಠಾಣೆಯೊಳಗೆ ಇಸ್ಪೀಟ್ ಆಟ; ಅಗತ್ಯ ಕಾನೂನು ಕ್ರಮಕ್ಕೆ ಸಚಿವ ಖರ್ಗೆ ಸೂಚನೆ
ಬೆಂಗಳೂರು: ಪೊಲೀಸ್ ಠಾಣೆಯೊಳಗೆ ಇಸ್ಪೀಟ್ ಆಡಿದ ಆರೋಪದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಠಾಣೆಯ ಐವರು ಪೊಲೀಸರನ್ನು ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ, ವೈರಲ್ ಆಗಿರುವ ವೀಡಿಯೋ ಹಲವು ತಿಂಗಳ ಹಿಂದೆ ನಡೆದ ಘಟನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಇಸ್ಪೀಟ್ ಆಡುತ್ತಿರುವ ವಿಡಿಯೋ ಗಮನಕ್ಕೆ ಬಂದ ತಕ್ಷಣವೇ ಈ ಕುರಿತು ವಿಚಾರಣೆ ನಡೆಸಿ ಅಗತ್ಯ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಇದು ಹಲವು ತಿಂಗಳ ಹಿಂದೆ ನಡೆದ ಘಟನೆ ಎನ್ನುವುದು ತಿಳಿದು ಬಂದಿರುತ್ತದೆ. ಇಸ್ಪೀಟ್ ಆಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದವರು ಸಾಮಾಜಿಕ…
ಠಾಣೆಯೊಳಗೆ ಇಸ್ಪೀಟ್ ಆಟ; ಐವರು ಪೊಲೀಸರ ಅಮಾನತು
ಬೆಂಗಳೂರು: ಪೊಲೀಸ್ ಠಾಣೆಯೊಳಗೆ ಇಸ್ಪೀಟ್ ಆಡಿದ ಆರೋಪದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಠಾಣೆಯ ಐವರು ಪೊಲೀಸರನ್ನು ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೊಹಮ್ಮದ್ ಮಿಯಾ, ಹೆಡ್ ಕಾನ್‌ಸ್ಟೆಬಲ್‌ಗಳಾದ ಇಮಾಮ್, ನಾಗರಾಜ್, ಸಾಯಿಬಣ್ಣ, ಕಾನ್‌ಸ್ಟೆಬಲ್ ನಾಗಭೂಷಣ್ ಎಂಬವರು ಅಮಾನತುಗೊಂಡಿರುವ ಪೊಲೀಸರು. ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು ಈ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮುಂಬಯಿ: ‘Bunts Premier League-2025’ ವಿಜೇತರಿವರು
ಮುಂಬಯಿ: ಬಂಟ್ಸ್ ಸಂಘ ಮುಂಬೈ – ಯೂಥ್ ವಿಂಗ್ ಆಯೋಜಿಸಿದ್ದ ಬಂಟ್ಸ್ ಪ್ರೀಮಿಯರ್ ಲೀಗ್ (Bunts Premier League) ಕ್ರಿಕೆಟ್ ಪಂದ್ಯಾವಳಿ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿತ್ತು. ನವಿ ಮುಂಬಯಿ ವಾಶಿಯ ಸೆಕ್ಟರ್ 1ರಲ್ಲಿರುವ ನವಿ ಮುಂಬಯಿ ಸ್ಪೋರ್ಟ್ಸ್ ಎಸೋಸಿಯೆಶನ್ ಮೈದಾನದಲ್ಲಿ ಈ ‘ಬಂಟ್ಸ್ ಪ್ರೀಮಿಯರ್ ಲೀಗ್ 2025’ ಆಯೋಜಿತವಾಗಿತ್ತು. ಮಾ.16ರಂದು ಬೆಳಿಗ್ಗೆ ಆರಂಭವಾದ ಪಂದ್ಯಾವಳಿಗಳಲ್ಲಿ ಬಂಟರ ಸಂಘದ 9 ಪ್ರಾದೇಶಿಕ ಸಮಿತಿಗಳು, ಮುಲುಂಡ್ ಬಂಟ್ಸ್, ಥಾಣೆ ಬಂಟ್ಸ್, ಬೋಂಬೆ ಬಂಟ್ಸ್ ಎಸೋಸಿಯೇಶನ್ ಸೇರಿದಂತೆ 12 ತಂಡಗಳು ಸೆಣಸಾಡಿದವು. ಅದರಲ್ಲೂ ವನಿತೆಯರ ವಿಭಾಗದ ಪಂದ್ಯಾವಳಿಗಳು ಭರ್ಜರಿ ಕಾದಾಟಕ್ಕೆ ಸಾಕ್ಷಿಯಾದವು. ಡೊಂಬಿವಲಿ ಪ್ರಾದೇಶಿಕ ಸಮಿತಿ ತಂಡವು ಪುರುಷರ ವಿಭಾಗದಲ್ಲಿ ಚಾಂಪಿಯನ್’ಷಿಪ್ ಗೆದ್ದುಕೊಂಡರೆ, ಥಾಣೆ ಬಂಟ್ಸ್ (ರನ್ನರ್ ಅಪ್) ಪ್ರಶಸ್ತಿ ಪಡೆಯಿತು. ಮಹಿಳಾ ವಿಭಾಗದಲ್ಲಿ ‘ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ’ ತಂಡ ಗೆದ್ದು ಬೀಗಿದೆ. ಈ ವನಿತೆಯರ ತಂಡವು ರೋಮಾಂಚಕಾರಿ ಪಂದ್ಯದಲ್ಲಿ…