ಮಳೆಯಿಂದ ಅಧ್ವಾನ; ಸರ್ಕಾರದ ವಿರುದ್ಧ ಬೆಂಗಳೂರು ಜನರ ಆಕ್ರೋಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಅನೇಕ ಕಡೆ ಕೃತಕ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ರಾತ್ರಿಯ ಮಳೆಯಿಂದಾಗಿ ಉದ್ಯಾನ ನಗರಿಯಲ್ಲಿ ಅಧ್ವಾನ ಸೃಷ್ಟಿಯಾಗಿದ್ದು, ಬೆಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶಗಳನ್ನು ಪ್ರಕಟಿಸಿ ವಿವರಗಳನ್ನು ನೀಡಿದ್ದಾರೆ. ಸೋಮವಾರ ಮುಂಜಾನೆ ವರೆಗೂ ಸುರಿದಿದ್ದರಿಂದಾಗಿ ಮಾಗಡಿ ರಸ್ತೆ, ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಗುಡುಗು ಸಹಿತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಬೆಳಗಿನ ಹೊತ್ತಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಅನೇಕ ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಯಿತು. ಬಹುತೇಕ ಕಡೆ ಸರ್ಕಾರದ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಮಳೆ ನೀರು ಸುಗಮವಾಗಿ ಹರಿದು ಹೋಗದೆ ಅವಾಂತರ ಸೃಷ್ಟಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೇವಲ ಒಂದೆರಡು ದಿನಗಳ…

ಬೆಂಗಳೂರಿನಲ್ಲಿ ಭಾರೀ ಮಳೆ; ಜನ ಜೀವನ ಏರುಪೇರು

ಕ್ರಿಕೆಟ್’ನಲ್ಲೂ ಪಾಕಿಸ್ತಾನಕ್ಕೆ ಹೊಡೆತ ಕೊಟ್ಟ ಭಾರತ; ಏಷ್ಯಾಕಪ್ ಟೂರ್ನಿಯಿಂದ ದೂರ?

ನವದೆಹಲಿ: ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಬರುವ ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ಹೊರಗುಳಿಯಲಿದೆ. ಈ ಕುರಿತಂತೆ ಏಷ್ಯಾನ್ ಕ್ರಿಕೆಟ್ ಕೌನ್ಸಿಲ್​ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪತ್ರ ಬರೆದಿದೆ. ಭಾರತ-ಪಾಕಿಸ್ತಾನ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಶ್ರೀಲಂಕಾದಲ್ಲಿ ಮಹಿಳಾ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಭಾರತ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಏಷ್ಯಾನ್ ಕ್ರಿಕೆಟ್ ಕೌನ್ಸಿಲ್​ಗೆ ಪಾಕಿಸ್ತಾನದ ಸಚಿವರು ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಪ್ರತಿಪಾದಿಸಿದೆ. ಹಾಗಾಗಿ ಈ ವರ್ಷದ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಭಾಗವಹಿಸಲ್ಲ. ಈ ನಡುವೆ, ಏಷ್ಯಾಕಪ್ ಟೂರ್ನಿಯ ಪ್ರಾಯೋಜಕತ್ವದಲ್ಲಿ ಭಾರತದ್ದೇ ಬಹುಪಾಲು. ಅಷ್ಟೇ ಅಲ್ಲ, ಈ ಬಾರಿಯ…