GST ಪರಿಷ್ಕೃತ ಸ್ಲ್ಯಾಬ್ 5% & 18%: ಗ್ರಾಹಕರೂ ಖುಶ್, ವರ್ತಕರೂ ಜೋಶ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಸಂಕೀರ್ಣ ತೆರಿಗೆ ಸ್ಲ್ಯಾಬ್‌ಗಳನ್ನು ಸರಳಗೊಳಿಸಿ ಈಗ ಕೇವಲ 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳನ್ನು ಮಾತ್ರ ಜಾರಿಗೆ ತಂದಿದೆ. ಸರ್ಕಾರದ ಈ ಕ್ರಮವು ದೇಶದ ಅಭಿವೃದ್ಧಿಗೆ ಬರೆದ ಮುನ್ನುಡಿಯಾಗಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ವ್ಯಾಪಾರಿಗಳಿಗೆ ಸೌಲಭ್ಯ, ಗ್ರಾಹಕರಿಗೆ ರಿಯಾಯಿತಿ, ಕೈಗಾರಿಕೆಗಳಿಗೆ ಉತ್ಸಾಹ ನೀಡುವುದು ಈ ನಿರ್ಧಾರದ ಉದ್ದೇಶ ಇದರಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಗತಿಯ ಶಕೆ ಆರಂಭವಾದಂತಾಗಿದೆ. ವ್ಯಾಪಾರ ವಲಯದಲ್ಲಂತೂ ಸಂತಸ ಮನೆಮಾಡಿದೆ. ಕರ್ನಾಟಕ: ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಹೊಸ ಚೈತನ್ಯ ಕರ್ನಾಟಕದ ಮೈಸೂರು ರೇಷ್ಮೆ, ಚನ್ನಪಟ್ಟಣ ಆಟಿಕೆಗಳು, ಧಾರವಾಡ ಪೇಡಾ, ಮೈಸೂರು ಪಾಕ್ ಮೊದಲಾದ ಉತ್ಪನ್ನಗಳು ಈಗ ಕಡಿಮೆ ತೆರಿಗೆ ದರಕ್ಕೆ ಒಳಪಟ್ಟಿವೆ. ಇದರಿಂದ ಸಾಂಪ್ರದಾಯಿಕ ಉದ್ಯಮಗಳು ಸ್ಪರ್ಧಾತ್ಮಕ ಬೆಲೆಗೆ ಉತ್ಪಾದನೆ ಮಾಡಬಹುದಾಗಿದೆ. ನಂಜನಗೂಡು…

ಜಾತಿ ಗಣತಿ ದಿನೇ ದಿನೇ ಗೊಂದಲ; ವಿಜಯೇಂದ್ರ ಟೀಕೆ

ಮೈಸೂರು: “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ದಿನೇ ದಿನೇ ಗೊಂದಲ ಸೃಷ್ಟಿಸುತ್ತಿದೆ. ಇದು ಎಲ್ಲಾ ಸಮುದಾಯಗಳಲ್ಲಿಯೂ ಅಶಾಂತಿ ಉಂಟುಮಾಡಿದೆ,” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರವು ಯಾವುದೇ ಸೂಕ್ತ ಸಿದ್ಧತೆ ಇಲ್ಲದೆ ಆತುರದಲ್ಲಿ ಈ ಸಮೀಕ್ಷೆ ಪ್ರಾರಂಭಿಸಿರುವುದು ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ ಜನರಲ್ಲಿ ಗೊಂದಲ ಹೆಚ್ಚಾಗಿದೆ,” ಎಂದರು. “ಕಾಂಗ್ರೆಸ್ ಪಕ್ಷದೊಳಗೆ ಅಕ್ಟೋಬರ್ ಅಥವಾ ನವೆಂಬರ್ ಕ್ರಾಂತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಸಂಭವನೀಯ ರಾಜಕೀಯ ಕ್ರಾಂತಿ ಮತ್ತು ಈ ಜಾತಿ ಗಣತಿಯ ನಡುವೆ ಯಾವುದೇ ಸಂಬಂಧವಿದೆಯೇ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ,” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು. ಗಣತಿ ಕಾರ್ಯದಲ್ಲಿ ವಿಕಲಚೇತನರನ್ನು ಸೇರಿಸಿರುವ ಬಗ್ಗೆ ಟೀಕೆ ವ್ಯಕ್ತಪಡಿಸಿದ ಅವರು, “ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಏಕೆ ಇಷ್ಟೊಂದು ಆತುರದಲ್ಲಿದ್ದಾರೆ ಎಂಬುದು…

ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ

ನವದೆಹಲಿ: “ಈ ದೀಪಾವಳಿಯಲ್ಲಿ ವಿದೇಶಿ ಸರಕುಗಳ ಬದಲು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಬಳಸಿ” ಎಂದು ದೇಶದ ಜನತೆಗೆ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “140 ಕೋಟಿ ಭಾರತೀಯರ ಸ್ವದೇಶಿ ಮನೋಭಾವ ದೇಶವನ್ನು ವಿಶ್ವದ ಸರ್ವೋನ್ನತ ರಾಷ್ಟ್ರವನ್ನಾಗಿ ಮಾಡಲಿದೆ” ಎಂದರು. ಗೋವದಲ್ಲಿ ಮಜೇ ಘರ್ ಯೋಜನೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನಂತರ ಪಣಜಿಯ ಸಮೀಪದ ಸಾರ್ವಜನಿಕ ಸಭೆಯಲ್ಲಿ ಶನಿವಾರ ಪಾಲ್ಗೊಂಡ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಸುಧಾರಣಾ ಕ್ರಮಗಳನ್ನು ಜಾಗರೂಕತೆಯಿಂದ ಜಾರಿಗೆ ತರುತ್ತಿದೆ. ಈ ಯೋಜನೆಯಿಂದ ಜನರಲ್ಲಿ ಹೆಮ್ಮೆಯ ಭಾವ ಮೂಡಲಿದೆ — ‘ಇದು ನನ್ನ ಮನೆ’ ಎಂದು ಹೇಳುವ ಗೌರವ ದೊರೆಯಲಿದೆ’ ಎಂದರು. Kharge Ji wants to falsify the equal rights among citizens enshrined in the…

EDಯಿಂದ ಓಜೋನ್ ಅರ್ಬಾನಾ ಕಂಪನಿಯ 423 ಕೋ.ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002 ರ ಅಡಿಯಲ್ಲಿ ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸಿದ್ದು, ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರ 423.38 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ಇಡಿ ಶನಿವಾರ ಅಧಿಕೃತ ಹೇಳಿಕೆಯ ಪ್ರಕಾರ, ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧದ ಪ್ರಮುಖ ಆರೋಪವೆಂದರೆ ಅದು ಸಮಯಕ್ಕೆ ಸರಿಯಾಗಿ ಪ್ರೊಜೆಕ್ಷನ್ ನಿರ್ಮಾಣವನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ ಮತ್ತು ಗ್ರಾಹಕರಿಗೆ ಸ್ವಾಧೀನವನ್ನು ಹಸ್ತಾಂತರಿಸುವಲ್ಲಿ ವಿಫಲವಾಗಿದೆ. ಫ್ಲಾಟ್ ಅನ್ನು ಮನೆ ಖರೀದಿದಾರರಿಗೆ ಹಸ್ತಾಂತರಿಸುವವರೆಗೆ ನಿರ್ಮಾಣ ಪೂರ್ವ ಇಎಂಐಗಳನ್ನು ಪಾವತಿಸಲು ಆಫರ್ ನೀಡುವ ಮೂಲಕ ಕಂಪನಿಯು ವಂಚಿಸಿದೆ ಎಂದು ಆರೋಪಿಸಲಾಗಿದೆ ಎಂದು ಇಡಿ ತಿಳಿಸಿದೆ. ಆದಾಗ್ಯೂ, ಅದು ತನ್ನ ಬದ್ಧತೆಗಳನ್ನು ಪೂರೈಸಲು ವಿಫಲವಾಗಿದೆ ಮತ್ತು ಯೋಜನೆ/ಫ್ಲಾಟ್‌ಗಳನ್ನು ಪೂರ್ಣಗೊಳಿಸಲಿಲ್ಲ. ಬಿಲ್ಡರ್ ವಸತಿ…