ಬೆಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತರ ಸೌಲಭ್ಯಕ್ಕಾಗಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿಗೆ (ರೈಲು ಸಂಖ್ಯೆ 10215/10216) ಬೈಂದೂರಿನ ಮೂಕಾಂಬಿಕಾ ರೋಡ್ನಲ್ಲಿ ನೂತನ ನಿಲ್ದಾಣ ಒದಗಿಸಲಾಗಿದೆ.
ಗೋವಾದ ಮಡಗಾಂವ್ನಿಂದ ಕೇರಳದ ಎರ್ನಾಕುಲಂವರೆಗೆ ಸಂಚರಿಸುವ ಈ ರೈಲು ಇದೀಗ ಬೈಂದೂರಿನಲ್ಲಿ ನಿಲುಗಡೆ ಮಾಡಲಿದೆ. ಈ ಕುರಿತಂತೆ ಮಹತ್ವದ ಆದೇಶ ಹೊರಬಿದ್ದಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
“ಆ ಭಾಗದ ಪ್ರಯಾಣಿಕರು, ವಿಶೇಷವಾಗಿ ಮೂಕಾಂಬಿಕಾ ದೇವಾಲಯದ ಭಕ್ತಾದಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಜನತೆಗೆ ರೈಲು ಸೇವೆ ಹೆಚ್ಚು ಅನುಕೂಲವಾಗಲಿದೆ” ಎಂದು ಸೋಮಣ್ಣ ಹೇಳಿದರು.