ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಮಹಾಕುಂಭ 2025 ಗಮನಸೆಳೆದಿದೆ. ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತಕೋಟಿಯನ್ನು ಭವ್ಯ ಆಧ್ಯಾತ್ಮಿಕ ಕೈಂಕರ್ಯಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಭಕ್ತರು, ಸಂತರು ಮತ್ತು ಕಲ್ಪವಾಸಿಗಳನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸುತ್ತಿರುವ ಸನ್ನಿವೇಶ ಗಮನಸೆಳೆದಿದೆ. ಮಹಾಕುಂಭವು ನಂಬಿಕೆ ಮತ್ತು ಆಧುನಿಕತೆಯ ಸಂಗಮ ಎಂದು ಸಾಧು ಸಂತರು ಸಂತಸ ವ್ಯಕ್ತಪಡಿಸಿದ್ದಾರೆ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ಇದಾಗಿದ್ದು, ಈ ‘ಮಹಾಕುಂಭ’ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಅನುಭವಿಸಲು, ಧ್ಯಾನ ಮಾಡಲು ಮತ್ತು ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿರುವ ಸಂತರು, ಕಲ್ಪವಾಸಿಗಳು ಮತ್ತು ಭಕ್ತರ ಕೈಂಕರ್ಯ ಗಮನಸೆಳೆದಿದೆ. ಇದು ‘ಸನಾತನ ಹೆಮ್ಮೆ-ಮಹಾ ಕುಂಭ ಉತ್ಸವ” ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ. ಸಂಗಮ ತ್ರಿವೇಣಿಯಲ್ಲಿ ಪವಿತ್ರ ಸ್ನಾನ: ಮೊದಲ ಸ್ನಾನೋತ್ಸವವಾದ ಪೌಷ ಪೂರ್ಣಿಮೆಗೆ ಮುಂಚಿತವಾಗಿ ಭಾನುವಾರ ಸಂಗಮ ತ್ರಿವೇಣಿಯಲ್ಲಿ…
Category: ವೈವಿದ್ಯ
Traumatic Brain Injury (TBI): ಮಹಿಳೆಯರಿಗಿಂತ ಮೂರು ಪಟ್ಟು ಪುರುಷರ ಸಾವು
ನವದೆಹಲಿ: ಆಘಾತಕಾರಿ ಮಿದುಳಿನ ಗಾಯದಿಂದ (TBI) ಪುರುಷರು ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಸಾಯುತ್ತಾರೆ ಎಂಬ ಕಹಿ ಸತ್ಯವೊಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 2021 ರಲ್ಲಿ US ಮರಣ ದತ್ತಾಂಶವನ್ನು ಆಧರಿಸಿದ ಅಧ್ಯಯನವು ವಯಸ್ಸಾದ ವಯಸ್ಕರು, ಪುರುಷರು ಮತ್ತು ಕೆಲವು ಜನಾಂಗೀಯ ಮತ್ತು ಜನಾಂಗೀಯ ಗುಂಪುಗಳ ಮೇಲೆ ಆಘಾತಕಾರಿ ಮಿದುಳಿನ ಗಾಯಗಳ (TBI) ಅಸಮಾನ ಪರಿಣಾಮವನ್ನು ಬಹಿರಂಗಪಡಿಸಿದೆ. ಪೀರ್-ರಿವ್ಯೂಡ್ ಜರ್ನಲ್ ಬ್ರೈನ್ ಇಂಜುರಿಯಲ್ಲಿ ಪ್ರಕಟವಾದ ಸಂಶೋಧನೆಗಳು, ಆತ್ಮಹತ್ಯೆಗಳು ಟಿಬಿಐ-ಸಂಬಂಧಿತ ಸಾವುಗಳಿಗೆ ಸಾಮಾನ್ಯ ಕಾರಣವಾಗಿ ಉಳಿದಿವೆ ಎಂದು ಸೂಚಿಸುತ್ತವೆ. ಇದರ ನಂತರ ಉದ್ದೇಶಪೂರ್ವಕವಲ್ಲದ ಬೀಳುವಿಕೆಗಳು ಸಂಭವಿಸಿದವು ಮತ್ತು ನಿರ್ದಿಷ್ಟ ಗುಂಪುಗಳು ಈ ದುರಂತಗಳಿಂದ ಅಸಮಾನವಾಗಿ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪುರುಷರು ಟಿಬಿಐನಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ಕಂಡುಬಂದಿದೆ – ಮಹಿಳೆಯರ ದರಕ್ಕಿಂತ ಮೂರು ಪಟ್ಟು ಹೆಚ್ಚು (30.5 vs 9.4). ಪುರುಷರ ಜೊತೆಗೆ, ವಯಸ್ಸಾದ…
ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ
📝 ಡಾ.ನೀರಜ್ ಪಾಟೀಲ್, ಯುನೈಟೆಡ್ ಕಿಂಗ್‌ಡಮ್ ಸಾಗರೋತ್ತರ ರಾಷ್ಟ್ರ, ಆಂಗ್ಲರ ನಾಡಿನಲ್ಲೂ ಕನ್ನಡದ ಕಂಪು ಆವರಿಸಿದೆ. ಲಂಡನ್‌ಗೂ ಕರುನಾಡಿನ ಆರಾಧ್ಯ ದೈವ ವಿಶ್ವಗುರು ಬಸವೇಶ್ವರರನ್ನು ಕೊಂಡೊಯ್ದಿರುವ ಕನ್ನಡಿಗರು, ಇದೀಗ ಕನ್ನಡ ರಾಜ್ಯೋತ್ಸವವನ್ನೂ ನಾಡಭಕ್ತಿಯ ವೈಭವದೊಂದಿಗೆ ಆಚರಿಸಿದ್ದಾರೆ. ಕನ್ನಡ ರಾಜೋತ್ಸವದ ಮುನ್ನಾದಿನದಂದು, ಲಂಡನ್‌ನಲ್ಲಿರುವ ಕನ್ನಡಿಗರು ಕರುನಾಡಿನ ಶ್ರೀಮಂತ ಪರಂಪರೆ, ಭಾಷೆ ಮತ್ತು ಸಂಸ್ಕೃತಿ ವೈಭವದ ಪ್ರತೀಕವಾಗಿ ಆಚರಿಸಿದರು. ಪ್ರತೀ ವರ್ಷ ನವೆಂಬರ್ 1 ರಂದು ಲಂಡನ್‌ನಲ್ಲೂ ಅನಿವಾಸಿ ಕನ್ನಡಿಗರು ಕನ್ನಡ ರಾಜೋತ್ಸವ ಆಚರಿಸಿ ಕರ್ನಾಟಕ ರಚನೆಯನ್ನು ಸ್ಮರಿಸುತ್ತಾರೆ. ಇದು ವಿಶ್ವಾದ್ಯಂತ ಕನ್ನಡಿಗರಿಗೆ ಹೆಮ್ಮೆ ಮತ್ತು ಏಕತೆಯ ದಿನವಾಗಿದೆ. ಈ ಸಂದರ್ಭವು ಕರ್ನಾಟಕ ಮತ್ತು ಭಾರತವನ್ನು ತಮ್ಮ ಮನೆ ಎಂದು ಕರೆಯುವ ಪ್ರತಿಯೊಬ್ಬರ ಏಕತೆ, ಹೆಮ್ಮೆ ಮತ್ತು ಹಂಚಿಕೆಯ ಹೆಗ್ಗುರುತನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ವೈವಿಧ್ಯಮಯ ಸಂಪ್ರದಾಯಗಳು, ಕಲಾ ಪ್ರಕಾರಗಳು ಮತ್ತು ಭಾಷಾ ಪರಂಪರೆಗೆ ಗೌರವವಾಗಿ, ನಾವು ಕನ್ನಡ ಭಾಷೆ ಮತ್ತು…
ದೆಹಲಿಯಲ್ಲಿ ಕನ್ನಡದ ಕಂಪು; ರಾಜ್ಯೋತ್ಸವ ಸಮಾರಂಭ
ನವದೆಹಲಿ: ೬೯ನೇ ಕನ್ನಡ ರಾಜ್ಯೋತ್ಸವವನ್ನು ನವದೆಹಲಿಯಲ್ಲಿ ಆಚರಿಸಲಾಯಿತು. ನವದೆಹಲಿಯ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೇಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ದ್ವಜಾರೋಹಣ ನಡೆಸಿದರು. ಭಾರತ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸದ ನಿಮಿತ್ತ ದೆಹಲಿಯಲ್ಲಿ ತಂಗಿದ್ದೆ, ದೆಹಲಿಯಲ್ಲಿ ತಾಯಿ ಕನ್ನಡಾಂಭೆಯ ಪೂಜೆ ಮಾಡುವ ಮತ್ತು ಧ್ವಜಾರೋಹಣ ಮಾಡುವ ಸದಾವಕಾಶ ನನಗೆ ಲಭ್ಯವಾಗಿದೆಯೆಂದು ಸಚಿವ ವಿ. ಸೋಮಣ್ಣ ಅತ್ಯಂತ ಹರ್ಷ ವ್ಯಕ್ತ ಪಡೆಸಿದರು. ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಾಂಬೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಇನ್ನು ಮುಂದೆಯು ಕನ್ನಡ ಪರ ಹತ್ತಾರು ಕಾರ್ಯಕ್ರಮಗಳನ್ನು ವಿಶೇಷ ರೀತಿಯಿಂದ ಆಯೋಜಿಸುವಂತೆ ಸಲಹೆ ನೀಡಿದರು ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನಿಯರ ವ್ಯಕ್ತಿತ್ವವನ್ನು ರಾಷ್ಟ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ…
KSRTCಯಲ್ಲಿ ಪ್ರಯಾಣ ಮತ್ತಷ್ಟು ಅಹ್ಲಾದಕರ.. ‘ಐರಾವತ ಕ್ಲಬ್ ಕ್ಲಾಸ್ 2.0’ ವೋಲ್ವೋ ಬಸ್ಸುಗಳಿಗೆ ಚಾಲನೆ
ಬೆಂಗಳೂರು. ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಕ್ಕೆ ಆಧುನಿಕ ಸ್ಪರ್ಷ ಸಿಕ್ಕಿದೆ. ನಿಗಮದ ‘ಐರಾವತ ಕ್ಲಬ್ ಕ್ಲಾಸ್ 2.0’ ವೋಲ್ವೋ ಬಸ್ಸುಗಳಿಗೆ ಚಾಲನೆ ನೋಡಲಾಯಿತು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್ (ವಾಸು) ಹಾಗೂ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಉಪಸ್ಥಿತಿಯಲ್ಲಿ, ನೂತನ ಬಸ್ಸುಗಳನ್ನು ಸೇವೆಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್‌ನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ…
ತೆಲುಗು ಬಿಗ್ಬಾಸ್ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿದ ಜೂ.ಎನ್ಟಿಆರ್
View this post on Instagram A post shared by Memes Rajadhani™ (@memes.rajadhani)
ಹೇರ್ ಡೈ ಮಾಡುವವರು ಹುಷಾರ್..! ಕ್ಯಾನ್ಸರ್ನಿಂದ ಪಾರಾಗಲು ಈ ರೀತಿ ಮಾಡಿ..
ಅಕ್ಟೋಬರ್ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು
ಮೈಸೂರು: ಮೈಸೂರು ದಸರಾ ಮಹೋತ್ಸವ-2024 ಅಕ್ಟೋಬರ್ 3 ರಂದು ಉದ್ಘಾಟನೆಯಾಗಲಿದೆ. ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದ್ದು ನಾಡಹಬ್ಬದ ತಯಾರಿಗೆ ಮುನ್ನುಡಿ ಬರೆಯಲಾಗಿದೆ. ದಸರಾ ಜಂಬೂಸವಾರಿಯಲ್ಲಿ 13 ಗಂಡು ಮತ್ತು 05 ಹೆಣ್ಣು ಆನೆಗಳು ಭಾಗಿಯಾಗಲಿದ್ದು, ಗಜಪಡೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರಲಿದ್ದು, ಸೇರಿ 14 ಆನೆಗಳು ಭಾಗಿಯಾಗಲಿವೆ. ಈ ಗಜಪಡೆಗಳು ಎರಡು ಹಂತಗಳಲ್ಲಿ ಸಾಂಸ್ಕೃತಿಕ ನಾಗರಿಗೆ ಆಗಮಿಸಲಿದ್ದು, ಮೊದಲನೇ ತಂಡದಲ್ಲಿ ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಗೋಪಿ, ಭೀಮ, ಲಕ್ಷ್ಮೀ, ಕಂಜನ್, ರೋಹಿತ್, ಏಕಲವ್ಯ ಬರಲಿವೆ. ಎರಡನೇಯ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮೀ, ಹಿರಣ್ಯ, ಮೀಸಲು, ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲದೇವಿ ಆನೆಗಳ ಆಗಮನವಾಗಲಿದೆ. ಆಗಸ್ಟ್ 21ಕ್ಕೆ ಗಜಪಯಣ ನಿಗದಿ ಆಗಿದ್ದು, ದಸರಾ ಮಹೋತ್ಸವದ ಸುಮಾರು 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿವೆ.
‘ಯಕ್ಷಗಾನ ಉತ್ಸವ-2024’: ತಾಳಮದ್ದಳೆಯಲ್ಲಿ ಆಂಜನೇಯ ಪಾತ್ರಧಾರಿಯಾಗಿ ಗಮನಸೆಳೆದ IPS ಅಧಿಕಾರಿ ಧರಣೀದೇವಿ
ಬೆಂಗಳೂರು: ಯಕ್ಷಗಾನ ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಈ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಹಂತಹಂತವಾಗಿ ಪಾಲ್ಗೊಂಡು ಪುರುಷರಂತೆಯೇ ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಯಕ್ಷಗಾನ ಉತ್ಸವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಯಕ್ಷಗಾನದಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕಿದೆ ಎಂದು ಪ್ರತಿಪಾದಿಸಿದರು. ಸ್ವತಃ “ಶರಸೇತು ಬಂಧ” ಎಂಬ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿದ ಧರಣೀದೇವಿ ಅವರು, ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಬಹಳ ಹಿಂದಿನಿಂದಲೂ ಮಹಿಳೆಯರು ಅವರದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸಿದ ನಿದರ್ಶನಗಳು ಇವೆ…
ಕೃಷಿಯಲ್ಲಿ ಕ್ರಾಂತಿಗೆ ಮೋದಿ ಮುನ್ನುಡಿ; ಬರೋಬ್ಬರಿ 109 ತಳಿಗಳ ಬಿಡುಗಡೆ
ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂಗಾರು ಆರಂಭದಲ್ಲಿ ಅವರು, ರೈತರಿಗೆ ಅಧಿಕ ಆದಾಯ ತರಬಲ್ಲ ಹೊಸ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ. 27 ತೋಟಗಾರಿಕಾ ಬೆಳೆಗಳು, 34 ಕ್ಷೇತ್ರ ಬೆಳೆಗಳು ಮತ್ತು 61 ಬೆಳೆಗಳು ಸೇರಿ ಒಟ್ಟು 109 ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ. ಅಧಿಕ ಇಳುವರಿ, ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಿ ಭಾನುವಾರ ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯಲ್ಲಿ ಭಾನುವಾರ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಮುಖ ಕ್ಷೇತ್ರ ಬೆಳೆಗಳು (ಸಿರಿಧಾನ್ಯ ಹಾಗೂ ವಿವಿಧ ಧಾನ್ಯಗಳು): ಎಣ್ಣೆ ಬೀಜಗಳು, ದ್ವಿದಳ ಧಾನ್ಯ, ಗೋಧಿ, ಭತ್ತ, ಕಬ್ಬು, ಹತ್ತಿ, ಮೇವು ಬೆಳೆ, ಹಾಗೂ ಇತರ ಬೆಳೆಗಳು ಪ್ರಮುಖ ತೋಟಗಾರಿಕಾ ಬೆಳೆಗಳು: ವಿವಿಧ ಹಣ್ಣುಗಳು,…