ಶಹಬ್ಬಾಸ್ ರೂಪ.. ಪ್ರಭಾವಿಗಳಲ್ಲೇ ನಡುಕ ಹುಟ್ಟಿಸಿದ ಐಜಿಪಿಗೆ ಅಭಿನಂದನೆಗಳ ಮಹಾಪೂರ
ಬೆಂಗಳೂರು: ರಾಜ್ಯದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿದೆ. ಈ ಸಂಕಟ ಕಾಲದಲ್ಲಿ ಜನರ ನೆರವಿಗೆ ಧಾವಿಸಿರುವ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಹೀಗಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ವೆಚ್ಚವನ್ನು ಪಾವತಿಸುವಂತೆ ರೋಗಿಗಳಿಗೆ ಒತ್ತಾಯಿಸುವ ದೂರುಗಳೂ ಕೇಳಿಬರುತ್ತಿವೆ. ಈ ಪೈಕಿ ಬೆಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆ 20 ಕ್ಕೂ ಹೆಚ್ಚು ಕೋವಿಡ್-19 ಸೋಂಕಿತರಿಂದ ಹೆಚ್ಚುವರಿ ಶುಲ್ಕ ಪಡೆದಿರುವ ದೂರುಗಳು ಸರ್ಕಾರದ ಗಮನಸೆಳೆದಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಮಹಾ ನಿರೀಕ್ಷಕಿ ಡಿ.ರೂಪಾ ಅವರು ಕಾರ್ಯಾಚಣೆಯ ಅಖಾಡಕ್ಕೆ ಧುಮುಕಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು, ಖಾಸಗಿ ಆಸ್ಪತ್ರೆಗಳ ಅಕ್ರಮಗಳ ವಿರುದ್ಧ ಸಮರಕ್ಕೆ ಮುಂದಾದರು. ಅಧಿಕಾರಿಗಳ ತಂಡವನ್ನು ಆಸ್ಪತ್ರೆಗಳಿಗೆ ಕಳುಹಿಸಿ ಸತ್ಯಾಸತ್ಯತೆಗಳನ್ನು ಪರಾಮರ್ಶೆ ನಡೆಸಿದರು. ಅಕ್ರಮ ಮೇಲ್ನೋಟಕ್ಕೆ ತಿಳಿದಿದ್ದೇ ತಡ, ಸಿಡಿಮಿಡಿಗೊಂಡ ಐಜಿಪಿ ಡಿ.ರೂಪಾ ಅವರು … Continue reading ಶಹಬ್ಬಾಸ್ ರೂಪ.. ಪ್ರಭಾವಿಗಳಲ್ಲೇ ನಡುಕ ಹುಟ್ಟಿಸಿದ ಐಜಿಪಿಗೆ ಅಭಿನಂದನೆಗಳ ಮಹಾಪೂರ
Copy and paste this URL into your WordPress site to embed
Copy and paste this code into your site to embed