ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾದ ನಂತರ ರಾಜ್ಯದ ಸಾರಿಗೆ ನಿಗಮದ ಪಾಲಿಗೆ ಅದೇನೋ ಅದೃಷ್ಟ. ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಯಿಂದಾಗಿ ಸಾರಿಗೆ ನಿಗಮ ಭಾರೀ ಲಾಭ ಪಡೆದುಕೊಂಡಿದ್ದರೆ, ನಿಗಮಗಳ ನೌಕರರಿಗೂ ಬಂಪರ್ ಕೊಡುಗೆಗಳು ಸಿಗುತ್ತಿವೆ. ಇದೀಗ ‘ವಿದ್ಯಾಚೇತನ’ ಯೋಜನೆಯಲ್ಲಿ ಕೂಡ KSRTC ಯಶೋಗಾಥೆ ಬರೆದಿದೆ. ನೌಕರರಷ್ಟೇ ಅಲ್ಲ, ಇಡೀ KSRTC ಪರಿವಾರದವರ ಮೊಗದಲ್ಲಿ ಮಂದಹಾಸ ಮೂಡಿದೆ..
ಬೆಂಗಳೂರು: ಸಾರಿಗೆ ನಿಗಮ KSRTCಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ರೂಪಿಸಲಾಗಿರುವ ‘ವಿದ್ಯಾಚೇತನ ಯೋಜನೆ’ಯು ಯಶೋಗಾಥೆ ಬರೆದಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ನೀಡುವ ಮೊತ್ತ ನಾಲೈದು ಪಟ್ಟು ಏರಿಕೆಯಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಸಿಕ್ಕರುವುದರಿಂದಾಗಿ KSRTC ನೌಕರರ ಕುಟುಂಬದಲ್ಲಿ ಉತ್ಸಾಹ ಕಂಡುಬಂದಿದೆ. ಪ್ರತಿ ವರ್ಷ ನೂರರ ಗಡಿ ಮುಟ್ಟದ ‘ವಿದ್ಯಾಚೇತನ’ ಅರ್ಜಿಗಳ ಸಂಖ್ಯೆ, ಈ ವರ್ಷ 4 ಸಾವಿರದ ಹತ್ತಿರ ತಲುಪಿರುವುದು ನಿಗಮದ ಅಧಿಕಾರಿಗಳಲ್ಲೇ ಅಚ್ಚರಿ ಮೂಡಿಸಿದೆ.
ಪ್ರತಿ ವರ್ಷ 70ರಿಂದ 80 ಅರ್ಜಿಗಳು ಸಕ್ಲಿಕೆಯಾಗುತ್ತಿದ್ದವು. ಆದರೆ, ಈ ಬಾರಿ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಸಂಶೋಧನಾ ವಿದ್ಯಾರ್ಥಿಗಳು ಮಕ್ಕಳ ಪರವಾಗಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು KSRTC ಮೂಲಗಳು ತಿಳಿಸಿವೆ. ಈ ವರ್ಷ PUC, BA, Bcom, Ph.D, Foreign study ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಸಲ್ಲಿಕೆಯಾಗಿರುವ ಅರ್ಜಿಗಳು:
-
ಉನ್ನತ ಶಿಕ್ಷಣ- 72
-
.ಎಂಬಿಬಿಎಸ್- 55,
-
ಐಐಟಿ – 3,
-
ಪಿ.ಎಚ್‌ಡಿ – 3,
-
ವಿದೇಶದಲ್ಲಿ ವ್ಯಾಸಂಗ – _4
-
ಒಟ್ಟು 3,979 ಅರ್ಜಿಗಳು
ಏನಿದು ‘ವಿದ್ಯಾಚೇತನ..?
ಸಾರಿಗೆ ನಿಗಮದ ನೌಕರರಿಗಾಗಿ ಸರ್ಕಾರ ವಿಮಾ ಸೌಲಭ್ಯ ಸಹಿತ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಜೊತೆಯಲ್ಲೇ ನೌಕರರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ‘ವಿದ್ಯಾಚೇತನ’ ಹೆಸರಲ್ಲಿ ಸಹಾಯಧನ ನೀಡಲಾಗುತ್ತಿದೆ. ನೌಕರರ ಪಾಲಿಗೆ ಈ ಯೋಜನೆ ಅತ್ಯಂತ ಪ್ರಿಯ ಎನಿಸಿದೆ.
ಐಟಿಐ, ಜೆಒಸಿ, ಬಿಇ, ಬಿವಿಎಸ್‌ಸಿ, ಬಿಎಚ್‌ಎಸ್‌ಸಿ, ಬಿಎಸ್‌ಸಿ ಸೇರಿದಂತೆ ವಿವಿಧ ಪದವಿ ವ್ಯಾಸಾಂಗ ಮಾಡುವವರಿಗೆ 7900, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 3880 ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು.. ಈ ವರ್ಷ 75,000ಕ್ಕೆ ಏರಿಸಲಾಗಿದೆ. ಈ ವರ್ಷ PUC, BA, Bcom, Ph.D, Foreign study ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ವೈದ್ಯಕೀಯ ಪದವಿಯ ನಾಲ್ಕೂವರೆ ವರ್ಷಕ್ಕೆ ನೀಡಲಾಗುತ್ತಿದ್ದ 10,350 ಮೊತ್ತವನ್ನು 33,750ಕ್ಕೆ ಏರಿಸಲಾಗಿದೆ. 2 ವರ್ಷದ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ 73,500 ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. 3 ವರ್ಷದ ಉನ್ನತ ಪದವಿಗೆ ನೀಡುತ್ತಿದ್ದ 5,400 ಮೊತ್ತವನ್ನು 21,000ಕ್ಕೆ ಹೆಚ್ಚಿಸಲಾಗಿದೆ..
ಈ ಯೋಜನೆಯಡಿ ವರ್ಷಕ್ಕೆ 72 ಲಕ್ಷದಿಂದ 13 ಲಕ್ಷವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಈ ವರ್ಷ ಇಲ್ಲಿವರೆಗೆ 1 1.02 ಕೋಟಿ ನೀಡಲಾಗಿದೆ. ಮಾತ್ರವಲ್ಲ ಇನ್ನೂ ಬಹಳಷ್ಟು ಅರ್ಜಿಗಳು ಪರಿಶೀಲನಾ ಹಂತದಲ್ಕಿದ್ದು, ಎಲ್ಲಾ ಅರ್ಹರಿಗೆ ವಿದ್ಯಾರ್ಥಿವೇತನ ನೀಡದಲ್ಲಿ ಈ ಮೊತ್ತ ಮತ್ತಷ್ಟು ಹೆಚ್ಚಬಹುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಅರ್ಜಿ ಸಲ್ಲಿಸಲು ಅಲೆದಾಟ ಇಲ್ಲ:
ಈ ವರ್ಷ PUC, BA, Bcom, Ph.D, Foreign Study ಗಳನ್ನೂ ‘ವಿದ್ಯಾಚೇತನ’ ಯೋಜನೆಗೆ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಆನ್‌ಲೈನ್ ವ್ಯವಸ್ಥೆ ಇರಲಿಲ್ಲ. ಫಲಾನುಭವಿಗಳು ಘಟಕ ವಿಭಾಗ ಅಂತ ಸುತ್ತಾಡಬೇಕಿತ್ತು, ವಿದ್ಯಾರ್ಥಿವೇತನ ಮೊತ್ತ ಕೂಡ ತುಂಬಾ ಕಡಿಮೆ ಇತ್ತು, ಈಗ 900 ಇದ್ದದ್ದು Rs.5000 ಮಾಡಿದ್ದೀವಿ 5 ಪಟ್ಟು ಹೆಚ್ಚಳ, ಮನೆಯಲ್ಲೇ ಕೂತು ಕಾರ್ಮಿಕರ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದು, ಹಾಗಾಗಿ 70 ರಿಂದ 80 ಅರ್ಜಿ ಸಲ್ಲಿಕೆಯಾಗುತ್ತಿದ್ದ ಜಾಗದಲ್ಲಿ, ಈಗ 3000 ಕ್ಕೂ ಹಚ್ಚು ಸಿಬ್ಬಂದಿ ತಮ್ಮ ಮಕ್ಕಳ ಪರವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಯೊಜನೆ ಜಾರಿಗೆ ಬಂದಿದ್ದು ಆಗಸ್ಟ್ 1 2023, ಕಳೆದ ನಾಲ್ಕು ತಿಂಗಳಲ್ಲೇ 1 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಮಂತ್ರಿ ಸಂತಸ
‘ವಿದ್ಯಾಚೇತನ” ಯಶೋಗಾಥೆ ಕಂಡು ಸ್ವತಃ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ ಅಚ್ಚರಿಗೊಂಡಿದ್ದಾರೆ. ‘ಶಕ್ತಿ’ ಯೋಜನೆ ಅನುಷ್ಠಾನದ ನಂತರ KSRTC ಶಕ್ತಿಯೂ ಹೆಚ್ಚಿದೆ. ಇದಕ್ಕೆ ಬಲ ತುಂಬುವವರಲ್ಲಿ ನೌಕರರ ಪಾಲೂ ಹೆಚ್ಚಿದೆ. ಹಾಗಾಗಿ ನೌಕರರ ಹಿತ ಕಾಪಾಡುವಲ್ಲಿ ಆದ್ಯತೆ ನೀಡುತ್ತಿದ್ದೇವೆ ಎಂದು ಸಚಿವರು ಹೇಳುತ್ತಾರೆ. ಈ ವರ್ಷ ಈವರೆಗೆ 2,069 ಮಂದಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಸುಮಾರು 1.02 ಕೋಟಿ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದವರು ತಿಳಿಸಿದ್ದಾರೆ.