‘ಪವರ್ ಸ್ಟಾರ್’ ಮುಂದಿನ ಸಿಎಂ..? ರಾಜ್ಯ ರಾಜಕಾರಣದಲ್ಲಿ ‘ಕೈ ಸೂತ್ರ’ದ ಕೌತುಕ

ರಾಜ್ಯ ರಾಜಕಾರಣ ದಿನಕ್ಕೊಂದು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೆ ಇನ್ನೊಂದೆಡೆ ಪ್ರತಿಪಕ್ಷಗಳ ಪಾಳಯದಲ್ಲಿ ‘ಡಿಕೆಶಿ ಮನ್ವಂತರ’ದ ಸಂಚಲನ. ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಗುರುತಾಗಿರುವ ಕೈ ನಾಯಕ “ಹಿಂದಿನ ಸರ್ಕಾರದಲ್ಲಿ ಪವರ್ ಮಿನಿಸ್ಟರ್.. ಇದೀಗ ಅವರೇ ಕಾಂಗ್ರೆಸ್ಸಲ್ಲಿ ಪವರ್ ಸ್ಟಾರ್” ಎಂದು ಸ್ವತಃ ರಾಹುಲ್ ಗಾಂಧಿಯವರೇ ಬಣ್ಣಿಸಿದ್ದಾರೆ. ಹಾಗಾಗಿಯೇ ಪ್ರದೇಶ ಕೈ ಪಟ್ಟವನ್ನು ಡಿಕೆಶಿ ಕೈಗೆ ಕೊಟ್ಟಿದ್ದು, ಈಗೀಗ ರಾಜ್ಯ ರಾಜಕಾರಣ ಕ್ರಮಿಸುತ್ತಿರುವ ಎಲ್ಲಾ ಮಜಲುಗಳೂ ಕದನ ಕೌತುಕ ಸೃಷ್ಟಿಸುತ್ತಲೇ ಇವೆ. ಕೆಲ ತಿಂಗಳ ಹಿಂದೆ ED ಕೇಸ್’ನಲ್ಲಿ ಹಲವು ದಿನಗಳ ಕಾಲ ಬಂಧಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚರಿತ್ರೆ ಕಮರಿ ಹೋಯಿತೆಂದೇ ಅನೇಕ ಪಂಡಿತರು ಬಣ್ಣಿಸಿದ್ದರು. ಆದರೆ ಈ ಛಲಗಾರನ ಪಾಲಿಗೆ ಅದುವೇ ವರದಾನವಾಯಿತು. ಕೈ ಪಾಳಯದಲ್ಲಿ ಬದಲಿ ಸಮರ್ಥರು ಇಲ್ಲ ಎನ್ನುವ ರೀತಿಯಲ್ಲಿ ಈ ದಂಡನಾಯಕ ತನ್ನದೇ ಶೈಲಿಯಲ್ಲಿ … Continue reading ‘ಪವರ್ ಸ್ಟಾರ್’ ಮುಂದಿನ ಸಿಎಂ..? ರಾಜ್ಯ ರಾಜಕಾರಣದಲ್ಲಿ ‘ಕೈ ಸೂತ್ರ’ದ ಕೌತುಕ