“ನಾನು ಧನ್ಯ”; ವೈದ್ಯೆ ಜೊತೆ ಡಾಲಿ ಮದುವೆ..! ಮನಮೋಹಕ ವೀಡಿಯೋ.. ಸುಂದರ ಸಾಲು..

ನಟ ಡಾಲಿ ಧನಂಜಯ್ ಅವರು ವೈದ್ಯೆಯನ್ನು ವಿವಾಹವಾಗಲಿದ್ದಾರೆ. ತಾವು ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಎಂಬವರೊಂದಿಗೆ ವಿವಾಹವಾಗುವ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ. ಪ್ರೀತಿಯ ಕರುನಾಡಿಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯ ಕೋರಿ ಪೋಸ್ಟ್ ಹಾಕಿರುವ ಧನಂಜಯ್, ‘ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ’ ಎಂದು ಕೋರಿದ್ದಾರೆ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗೋಕು ಎಂದೂ ಬರೆದುಕೊಂಡಿದ್ದಾರೆ. ಸ್ತ್ರೀರೋಗ ತಜ್ಞೆಯಾಗಿರುವ ಧನ್ಯತಾ ಜೊತೆ ಡಾಲಿ ಧನಂಜಯ ಅವರು ಅನೇಕ ವರ್ಷಗಳ ಪರಿಚಯ ಹೊಂದಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ.   View this post on Instagram   A post shared by Daali Dhananjaya (@dhananjaya_ka)…

ಚನ್ನಪಟ್ಟಣ ರಣಾಂಗಣ; ಹೆಚ್‌ಡಿಕೆ ಪೂಜೆಯ ವೇಳೆ ಅಚ್ಚರಿಯ ಸನ್ನಿವೇಶ; ನಿಖಿಲ್ ಗೆಲುವಿನ ಶುಭ ಸೂಚನೆ ಎಂದ ಜೆಡಿಎಸ್ ನಾಯಕರು

ಹಾಸನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜಕೀಯ ಪ್ರತಿಷ್ಠೆಯ ಕಣ ಮಾತ್ರವಲ್ಲ, ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯದ ನಿರ್ಣಯವೂ ಹೌದು. ಹಾಗಾಗಿ ಎನ್‌ಡಿಎ ಮಿತ್ರ ಪಕ್ಷಗಳು ಈ ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ನಡುವೆ ನೇರ ಹಣಾಹಣಿ ಎರ್ಪಟ್ಟಿದ್ದು ಕದನ ಕೌತುಕ ಸೃಷ್ಟಿಸಿದೆ. ಈ ನಡುವೆ ಎಚ್.ಡಿ.ಕುಮಾರಸ್ವಾಮಿ ಕುಟುಂಬ ತಮ್ಮ ಪುತ್ರನ ಗೆಲುವಿಗಾಗಿ ಟೆಂಪಲ್ ರನ್ ಕೈಗೊಂಡಿದ್ದು, ಪೂಜೆಯ ವೇಳೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ. ದೇವರ ವಿಗ್ರಹದ ಬಲಗಡೆಯಿಂದ ಹೂವು ಬಿದ್ದಿದ್ದು, ಈ ಬಗ್ಗೆ ಬಗೆಬಗೆಯ ಚರ್ಚೆ ಶುರುವಾಗಿದೆ. ಕುಮಾರಸ್ವಾಮಿಯವರು ಭಾನುವಾರ ಪತ್ನಿ ಅನಿತಾ ಹಾಗೂ ಸೊಸೆ, ಮೊಮ್ಮಗು ಜೊತೆಗೆ ಹಾಸನಾಂಬೆ ಜಾತ್ರೆಯಲ್ಲಿ ಭಾಗವಹಿಸಿದರು. ಬಳಿಕ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪೂಜೆ ನೆರವೇರಿತ್ತಿರುವಾಗಲೇ ವಿಗ್ರಹದ ಬಲಗಡೆಯಿಂದ ಹೂ…

ತಲಕಾವೇರಿಯಲ್ಲಿ ‘ತೀರ್ಥೋದ್ಭವ’; ‘ತೀರ್ಥಸ್ವರೂಪಿಣಿ’ ದರ್ಶನದ ಅನನ್ಯ ಕ್ಷಣ ಕಣ್ತುಂಬಿಕೊಂಡ ಭಕ್ತ ಸಮೂಹ

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವವಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿ ಕ್ಷೇತ್ರ ಈ ಕ್ಷಣಕ್ಕೆ ಸಾಕ್ಷಿಯಾಯಿತು. ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣದ ಪವಿತ್ರ ಕಾಲದಲ್ಲಿ ‘ಬ್ರಹ್ಮಕುಂಡಿಕೆ’ಯು ಕಾವೇರಿ ಮಾತೆಯು ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡಿದ ಅನನ್ಯ ಸನ್ನಿವೇಶವನ್ನು ಅಪಾರ ಸಂಖ್ಯೆಯ ಭಕ್ತರು ಕಣ್ತುಂಬಿಕೊಂಡರು. ತೀರ್ಥೋದ್ಭವ ಸಂದರ್ಭದಲ್ಲಿ ಬ್ರಹ್ಮಕುಂಡಿಕೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಬೆಳಗಿ ಕಾವೇರಿ ಮಾತೆಯನ್ನು ಸ್ವಾಗತಿಸಿದ ಕ್ಷಣವೂ ಗಮನಸೆಳೆಯಿತು. ಕೊಡಗು ಜಿಲ್ಲೆಯ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವ ಸಾವಿರಾರು ಭಕ್ತರ ಭಾವೋದ್ವೇಗದ ನಡುವೆ ನಡುರಾತ್ರಿ 12 ಗಂಟೆ 57 ನಿಮಿಷಕ್ಕೆ ನಿಗಧಿತ ಮುಹೂರ್ತಕ್ಕಿಂತ ಎರಡು ನಿಮಿಷ ಮುನ್ನವೇ ನೆರವೇರಿತು. VC: @mysuruonline pic.twitter.com/RM3UUFEKb3 — Prathap Simha (@mepratap) October 18,…

‘ಸಿಂಗಂ ಅಗೈನ್’; ಬಹು ತಾರಾಂಗಣವೇ ಬಂಡವಾಳ

ಸಿಂಗಂ ಚಿತ್ರದ ಮುಂದಿನ ಆವೃತ್ತಿ ನಿರ್ಮಾಣವಾಗಿದ್ದು ‘ಸಿಂಗಂ ಅಗೈನ್’ ಹೆಸರಿನಲ್ಲಿ ಈ ಸಿನಿಮಾ ಕುತೂಹಲ ಕೆರಳಿಸಿದೆ. ಅಜೇಯ್ ದೇವಗನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಸಹಿತ ಹಲವರು ‘ಸಿಂಗಂ ಅಗೈನ್’ ಚಿತ್ರದಲ್ಲಿ ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಜೇಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಟ್ರೈಲರ್ ಬಗ್ಗೆ ನೆಟ್ಟಿಗರು ಸಕತ್ ಲೈಕ್ಸ್ ನೀಡಿದ್ದಾರೆ.

ಮಹಾ ಸಚಿವಾಲಯ ಕಟ್ಟಡ 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್.. ವೀಡಿಯೋ ವೈರಲ್

ಮುಂಬೈ: ಮಹಾರಾಷ್ಟ್ರ ಸರ್ಕಾರದ ಆಡಳಿತ ಶಕ್ತಿಕೇಂದ್ರ ಮಂತ್ರಾಲಯ ಇಂದು ಕೋಲಾಹಲದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಂತ್ರಾಲಯ ಕಟ್ಟಡದಿಂದ ಮೂರನೇ ಮಹಡಿಯಿಂದ ಜಿಗಿದ ಪ್ರಸಂಗ ಆತಂಕ ಸೃಷ್ಟಿಸಿತು. Maharashtra state assembly deputy speaker & DCM Ajit Pawar led NCP factions MLA Narhari Zirwal & other ST reserved seats elected MLAs breached police security & jumped at the safety net at Mantralaya in protest against state govt for not recruiting tribal youths under PESA act. pic.twitter.com/6kHwp8PGIv — Sudhir Suryawanshi (@ss_suryawanshi) October 4, 2024   ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಣದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ…

ವೀರ ಸಾವರ್ಕರ್ ಬಗ್ಗೆ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ; ಬಿಜೆಪಿ ಆಕ್ರೋಶ

ಬೆಂಗಳೂರು: ವೀರ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆಯಿಂದಾಗಿ ಸಚಿವ ದಿನೇಶ್ ಗುಂಡೂರಾವ್ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಚಿವ ದಿನೇಶ್ ಗುಂಡೂರಾವ್, ವೀರ್ ಸಾವರ್ಕರ್ ಅವರ ಸಿದ್ಧಾಂತದ ಕುರಿತು ಹೇಳಿಕೆ ನೀಡಿದ್ದರು. ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಗೋಮಾಂಸ ಸೇವಿಸುತ್ತಿದ್ದರು ಎಂದು ಸಚಿವರು ಹೇಳಿಕೆ ನೀಡಿದ್ದರು. ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ‘Savarkar was a beef eater’?! 😡 Shocking to see Congress leaders like @dineshgrao spreading lies about Veer Savarkar ! His sacrifices for India’s freedom cannot be tarnished by cheap political narratives. Congress’s hatred for Marathas and Maharashtra is clearly visible!… pic.twitter.com/8Q2yNYY5Pb — BJP Karnataka (@BJP4Karnataka) October…

ನಟಿ ರಾಧಿಕಾ ಕುಮಾರಸ್ವಾಮಿಯಾ ‘ಭೈರಾದೇವಿ’ ಅವತಾರಕ್ಕೆ ವೀಕ್ಷಕರು ಫಿದಾ

ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಭೈರಾದೇವಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಬಿಡುಗಡೆಯಾಗಿದ್ದು ಸಿನಿಲೋಕದಲ್ಲಿ ವಿಶೇಷ ಪ್ರಯೋಗ ಎಂದೇ ವೀಕ್ಷಕರು ಪ್ರತಿಪಾದಿಸಿದ್ದಾರೆ. ‘ಭೈರಾದೇವಿ’ ಟ್ರೈಲರ್ ಕೂಡಾ ನೆಟ್ಟಿಗರ ಕುತೂಹಲದ ಕೇಂದ್ರಬಿಂದುವಾಗಿದೆ. ಶ್ರೀಜೈ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ರಮೇಶ್ ಅರವಿಂದ್ ಕೂಡಾ ಅಭಿನಯಿಸಿದ್ದಾರೆ.

ಅರ್ಷದ್ ವಾರ್ಸಿ, ಮೆಹರ್ ವಿಜ್ ನಟನೆಯ ‘ಬಂದಾ ಸಿಂಗ್ ಚೌಧರಿ’ ಬಗ್ಗೆ ವೀಕ್ಷಕರ ಲೈಕ್ಸ್ ಹೀಗಿದೆ

ನಟ ಅರ್ಷದ್ ವಾರ್ಸಿ ಮತ್ತು ಮೆಹರ್ ವಿಜ್ ನಟನೆಯ ಬಂದಾ ಸಿಂಗ್ ‘ಚೌಧರಿ’ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ವೀಕ್ಷಕರು ಕೂಡಾ ಸಿನಿಮಾ ಬಗ್ಗೆ ಫಿದಾ ಆಗಿದ್ದಾರಂತೆ. ಈ ಸಿನಿಮಾದ ಟ್ರೈಲರ್ ಕೂಡಾ ಭಾರೀ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಲೈಕ್ಸ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಅದರಂತೆ ಸಿನಿಮಾ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವನ್ನು ಅಭಿಷೇಕ್ ಸಕ್ಸೆನಾ ನಿರ್ದೇಶಿಸಿದ್ದಾರೆ.

ಜೈಲರ್ ನಂತರ ʼವೆಟ್ಟೈಯನ್‌ʼ; ರಜನಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ

ʼಜೈಲರ್‌ʼ ಬಳಿಕ ರಜಿನಿಕಾಂತ್‌ ಖಾಕಿ ತೊಟ್ಟು ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಪಾತ್ರದ ʼವೆಟ್ಟೈಯನ್‌ʼ ಚಿತ್ರ ಸಿನಿ ಲೋಕದಲ್ಲಿ ಕುತೂಹಲ ಕೆರಳಿಸಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ʼವೆಟ್ಟೈಯನ್‌ʼ ಟ್ರೇಲರ್ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಮಿತಾಭ್ ಬಚ್ಚನ್ ಕೂಡಾ ವಿಶೇಷ ಪಾತ್ರದಲ್ಲಿ ಗಮನಸೆಳೆದಿದ್ದಾರೆ.