ಶ್ರೀರಾಮುಲು ಧರಿಸಿರುವ ಮಾಸ್ಕ್ ಯಾವುದು ಗೊತ್ತಾ? ಸ್ನೇಹಿತ ಕೊಟ್ಟ ಗಿಫ್ಟ್..

ಬೆಂಗಳೂರು: ನಾಡಿಗೆ ಕೊರೊರೊನಾ ವಕ್ಕರಿಸಿರುವ ಈ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಧರಿಸಲೇಬೇಕು. ಲಾಕ್’ಡೌನ್ ಮೂರನೇ ಅವಧಿಗೆ ವಿಸ್ತಾರವಾಗಿದ್ದೇ ತಡ ಮಾಸ್ಕ್ ಬಗ್ಗೆ ಕಠಿಣ ನಿಲುವು ತಾಳಲಾಗಿದೆ. ಮಾಸ್ಕ್ ಧರಿಸದೇ ಇದ್ದವರಿಗೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನಡುವೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಧರಿಸುತ್ತಿರುವ ಮಾಸ್ಕ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ವಿಭಿನ್ನತೆಯಿಂದ ಕೂಡಿರುವ, ವೈಶಿಷ್ಟ್ಯಪೂರ್ಣ ಈ ಮಾಸ್ಕ್ ಒಂದು ರೀತಿಯಲ್ಲಿ ಹೈಟೆಕ್ ಎಂಬಂತಿದೆ. ಗ್ಯಾಸ್ ಮಾಸ್ಕ್ ರೀತಿ ಕಂಡು ಬರುತ್ತಿದ್ದು, ರಾಮುಲು ಓಡಾಡಿದ ಕಡೆಯೆಲ್ಲಾ ಜನ ಸಚಿವರನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇವರೇನು ವೆಂಟಿಲೇಟರ್ ಹಾಕೊಂಡು ಹೋಗ್ತಿದ್ದಾರಾ? ಎಂದೂ ಹಲವರು ಗುಣುಗುತ್ತಿದ್ದುದೂ ಉಂಟು. ಇದನ್ನೂ ಓದಿ.. ಕೊರೋನಾ ಸಂಕಷ್ಟಕ್ಕೆ ಸಿದ್ದು ಶಿಷ್ಯರಂಥವರೇ ಕಾರಣ ಈ ವಿಶಿಷ್ಟ ಮಾಸ್ಕನ್ನು ರಾಮುಲು ಅವರಿಗೆ ಮಿತ್ರರೊಬ್ಬರು ಗಿಫ್ಟ್ ಮಾಡಿರೋದಂತೆ. ಸಿಂಥೆಟಿಕ್ ವಸ್ತುವಿನಿಂದ ತಯಾಯಿರಿಸಲಾದ ಈ ಮಾಸ್ಕನ್ನು ಅಮೆರಿಕಾದಲ್ಲಿರುವ ಸ್ನೇಹಿತರೊಬ್ಬರು ಲಾಕ್’ಡೌನ್ ಘೋಷಣೆಯಾಗುವುದಕ್ಕೂ … Continue reading ಶ್ರೀರಾಮುಲು ಧರಿಸಿರುವ ಮಾಸ್ಕ್ ಯಾವುದು ಗೊತ್ತಾ? ಸ್ನೇಹಿತ ಕೊಟ್ಟ ಗಿಫ್ಟ್..