ಶ್ರೀರಾಮುಲು ಧರಿಸಿರುವ ಮಾಸ್ಕ್ ಯಾವುದು ಗೊತ್ತಾ? ಸ್ನೇಹಿತ ಕೊಟ್ಟ ಗಿಫ್ಟ್..

ಬೆಂಗಳೂರು: ನಾಡಿಗೆ ಕೊರೊರೊನಾ ವಕ್ಕರಿಸಿರುವ ಈ ಕಾಲದಲ್ಲಿ ಮುಖಕ್ಕೆ ಮಾಸ್ಕ್ ಧರಿಸಲೇಬೇಕು. ಲಾಕ್’ಡೌನ್ ಮೂರನೇ ಅವಧಿಗೆ ವಿಸ್ತಾರವಾಗಿದ್ದೇ ತಡ ಮಾಸ್ಕ್ ಬಗ್ಗೆ ಕಠಿಣ ನಿಲುವು ತಾಳಲಾಗಿದೆ. ಮಾಸ್ಕ್ ಧರಿಸದೇ ಇದ್ದವರಿಗೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆಯೂ ಆರಂಭವಾಗಿದೆ.

ಈ ನಡುವೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಧರಿಸುತ್ತಿರುವ ಮಾಸ್ಕ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ವಿಭಿನ್ನತೆಯಿಂದ ಕೂಡಿರುವ, ವೈಶಿಷ್ಟ್ಯಪೂರ್ಣ ಈ ಮಾಸ್ಕ್ ಒಂದು ರೀತಿಯಲ್ಲಿ ಹೈಟೆಕ್ ಎಂಬಂತಿದೆ. ಗ್ಯಾಸ್ ಮಾಸ್ಕ್ ರೀತಿ ಕಂಡು ಬರುತ್ತಿದ್ದು, ರಾಮುಲು ಓಡಾಡಿದ ಕಡೆಯೆಲ್ಲಾ ಜನ ಸಚಿವರನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇವರೇನು ವೆಂಟಿಲೇಟರ್ ಹಾಕೊಂಡು ಹೋಗ್ತಿದ್ದಾರಾ? ಎಂದೂ ಹಲವರು ಗುಣುಗುತ್ತಿದ್ದುದೂ ಉಂಟು.

ಇದನ್ನೂ ಓದಿ.. ಕೊರೋನಾ ಸಂಕಷ್ಟಕ್ಕೆ ಸಿದ್ದು ಶಿಷ್ಯರಂಥವರೇ ಕಾರಣ

ಈ ವಿಶಿಷ್ಟ ಮಾಸ್ಕನ್ನು ರಾಮುಲು ಅವರಿಗೆ ಮಿತ್ರರೊಬ್ಬರು ಗಿಫ್ಟ್ ಮಾಡಿರೋದಂತೆ. ಸಿಂಥೆಟಿಕ್ ವಸ್ತುವಿನಿಂದ ತಯಾಯಿರಿಸಲಾದ ಈ ಮಾಸ್ಕನ್ನು ಅಮೆರಿಕಾದಲ್ಲಿರುವ ಸ್ನೇಹಿತರೊಬ್ಬರು ಲಾಕ್’ಡೌನ್ ಘೋಷಣೆಯಾಗುವುದಕ್ಕೂ ಮುಂಚೆಯೇ ಶ್ರೀರಾಮುಲು ಅವರಿಗೆ ನೀಡಿದ್ದರಂತೆ.

ಈ ಗ್ಯಾಸ್ ಮಾಸ್ಕ್’ನ ವಿಶೇಷ ಗೊತ್ತಾ?

  • ಮಾಸ್ಕ್’ನ ಎರಡೂ ಬದಿಯಲ್ಲೂ ಸಾಧನಗಳಿವೆ
  • ಮಧ್ಯದಲ್ಲಿ ಮೈಕ್ರೋಫೋನ್ ಇದೆ
  • ಒಂದು ಬದಿಯಲ್ಲಿ ಆಮ್ಲಜನಕ ಬರಲು ಅವಕಾಶ ಇದೆ
  • ಮತ್ತೊಂದು ಬದಿಯಲ್ಲಿ 3 ಎಂ.ಏರ್.ಫಿಲ್ಟರ್ ವ್ಯವಸ್ಥೆ ಇದೆ
  • ಸ್ವಚ್ಥಗೊಳಿಸಿ ಮತ್ತೆ ಮತ್ತೆ ಇದನ್ನು ಧರಿಸಬಹುದಾಗಿದೆ
  • 6 ತಿಂಗಳ ಕಾಲ ಈ ಗ್ಯಾಸ್ ಮಾಸ್ಕ್ ಉಪಯೋಗಿಸಬಹುದು 

ಇದನ್ನೂ ಓದಿ.. ಕೆಲವೆಡೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ 

 

Related posts