ವಾಜಪೇಯಿ ಪುಣ್ಯತಿಥಿ; ರಾಷ್ಟ್ರಪತಿ, ಪ್ರಧಾನಿ ನಮನ

ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯತಿಥಿ ಯನ್ನು ಇಂದು ಆಚರಿಸಲಾಯಿತು. ಅಜಾತ ಶತ್ರು ಎಂದೇ ಜನಜನಿತರಾಗಿದ್ದ ವಾಜಪೇಯಿ ಅವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತರು. ದೆಹಲಿಯಲ್ಲಿರುವ ಅಟಲ್ ಜಿ ಯವರ ಸ್ಮಾರಕ ‘ಸದೈವ್ ಅಟಲ್’ನಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರೂ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ಸಮರ್ಪಿಸಿದರು.

ರಾಕಿಂಗ್ ಸ್ಟಾರ್ ಯಶ್ ಮತ್ತು ‘ವಿಲನ್’; ಇದು ಸಿನಿ ರಂಗದ ಅಚ್ಚರಿ.

ಬೆಂಗಳೂರು: ಕೆಜಿಎಫ್ ಮೂಲಕ ಸದಾ ಸುದ್ದಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ‘ವಿಲನ್’ ಆಗಿ ಪ್ರತ್ಯಕ್ಷವಾಗಲಿದ್ದಾರೆಯೇ? ಈ ರೀತಿಯ ಕುತೂಹಲಕಾರಿ ಪ್ರಶ್ನೆಯೊಂದು ಕನ್ನಡ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಇನ್’ಸ್ಟಾಗ್ರಾಮ್’ನಲ್ಲಿ ಮಾಡಲಾಗಿರುವ ಪೋಸ್ಟ್. ಕೆಜಿಎಫ್ ಚಿತ್ರದ ಚಾಪ್ಟರ್-2 ವಿಚಾರದಲ್ಲಿ ಸಿನಿ ರಸಿಕರು ತೀವ್ರ ನಿರೀಕ್ಷೆಯಲ್ಲಿದ್ದಾರೆ. ಈ ಹೊತ್ತಿಗಾಗಲೇ ಯಶ್ ಅವರು ಇನ್’ಸ್ಟಾಗ್ರಾಮ್’ನಲ್ಲಿ ಪೊಷ್ಟೊಂದನ್ನು ಹರಿಬಿಟ್ಟಿದ್ದಾರೆ. ‘ವಿಲನ್’ ಈಸ್ ಕಮ್ಮಿಂಗ್’ ಎಂಬ ಈ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದೆ. ಈ ಕುರೂಹಾಳ ಆಗಸ್ಟ್ 17ರಂದು ತಣಿಯಲಿದೆ. View this post on Instagram A post shared by Yash (@thenameisyash)

ಅಂತಾರಾಷ್ಟ್ರೀಯ ಕ್ರಿಕೆಟ್ ಎಂಎಸ್ ಧೋನಿ ವಿದಾಯ; ಐಪಿಎಲ್ ನಲ್ಲಿ ಮಾತ್ರ ಆಟ

ದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ ನಲ್ಲಿ ಮಾತ್ರ ಆಡಲಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಧೋನಿ ಟಿ -20, ಏಕದಿನ ತಂಡಗಳಲ್ಲಿ ಆಡುತ್ತಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್’ ಗೂ ಅವರು ನಿವೃತ್ತಿ ಪ್ರಕಟಿಸಿ ಅವರು ಇಡೀ ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ. ಈ ಕುರಿತಂತೆ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವರೆಗೂ ತಮಗೆ ಬೆಂಬಲ ನೀಡಿದ ಅಭಿಮಾನಿಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. View this post on Instagram A post shared by M S Dhoni (@mahi7781)

ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ

ಬೆಂಗಳೂರು: ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ರಾಜ್ಯವೇ ಮೊದಲು ಎಂಬ ಪ್ರಶಂಸೆಗೆ ಪಾತ್ರವಾಗಲು ರಾಜ್ಯ ಸರ್ಕಾರ ಕಸರತ್ತು ನಡೆಸುತ್ತಿದೆ. ಈ ಸಂಬಂಧ ಕಸರತ್ತಿನಲ್ಲಿ ತೊಡಗಿದ್ದು ಕೇಂದ್ರದ ಮಾರ್ಗಸೂಚಿ ಜಾರಿಗೊಳಿಸಲು ಅಧಿಕಾರಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಕುರಿತಂತೆ ರಾಮನಗರದಲ್ಲಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ. ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು. ನೀತಿಯ ಜಾರಿ ಸಂಬಂಧ ಈ ಕಾರ್ಯಪಡೆ ಆದಷ್ಟು ಬೇಗ ವರದಿ ನೀಡಲಿದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.

ಕರ್ನಾಟಕದಲ್ಲೂ ಕೊರೋನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಳ

ಬೆಂಗಳೂರು: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಕರ್ನಾಟಕದ ಜನರನ್ನು ಆತಂಕಕ್ಕೀಡುಮಾಡಿದೆ. ಶನಿವಾರ ಒಂದೇ ದಿನ 114 ಮಂದಿ ಕೋವಿಡ್-19 ವೈರಾಣು ಸೋಂಕಿನಿಂದಾಗಿ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಕೊರೋನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚತ್ತಲೇ ಇದ್ದು ಶನಿವಾರದವರೆಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,831ಕ್ಕೆ ಏರಿಕೆಯಾಗಿದೆ. ಈ ನಡುವೆ ರಾಜ್ಯದಲ್ಲಿ ಶನಿವಾರ 8,818 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2,19,926ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಾಂಗ್ರೆಸ್ ಇತಿಹಾಸ ಕುರಿತ ವೆಬ್ ಸೀರೀಸ್ ‘ಧರೋಹರ್’ ಅನಾವರಣ

ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಇತಿಹಾಸ ಕುರಿತ ವೆಬ್ ಸೀರೀಸ್ ಅನಾವರಣಗೊಂಡಿದೆ. ಈ ವೆಬ್ ಸೀರೀಸ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೆಬ್ ಸೀರೀಸ್’ನ ಮೊದಲ ಸಂಚಿಕೆಗೆ ‘ಧರೋಹರ್’ ಎಂದು ಹೆಸರಿಸಲಾಗಿದೆ. ದೇಶಕ್ಕೆ ಕಾಂಗ್ರೆಸ್ ತಂದುಕೊಡುವಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್, ಇದೀಗ ಈ ವೆಬ್ ಸೀರೀಸ್ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ನ ಪಯಣ ಹಾಗೂ ಪಾತ್ರವನ್ನು ತಿಳಿಸಲು ಪ್ರಾಯಂಟಿಸಿದೆ. https://twitter.com/RahulGandhi/status/1294567141270671360?ref_src=twsrc%5Etfw

ಭಾರತದಲ್ಲಿ ಕೊರೋನಾ ಸೋಂಕಿಗೆ ಒಟ್ಟು 49,980 ಮಂದಿ ಬಲಿ

ದೆಹಲಿ: ಅನೇಕ ತಿಂಗಳುಗಳು ಕಳೆದರೂ, ಜಾಗೃತಿ ಕಹಳೆ ಮೊಳಗುತ್ತಿದ್ದರೂ ಕೊರೋನಾ ಸೋಂಕಿನಿಂದ ಉಡೂರ ಉಳಿಯುವಲ್ಲಿ ದೇಶ ಸಫಲವಾಗುತ್ತಿಲ್ಲ. ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ವರೆಗೆ 24 ತಾಸುಗಳಲ್ಲಿ 63,489 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ದಿನೇದಿನೇ ಸೋಂಕಿನ ಪ್ರಮಾಣ ಏರುತ್ತಲೇ ಇದ್ದು ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಹಿರಂಗಪಡಿಸಿದೆ, ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ವರೆಗೆ ಒಂದೇ ದಿನ 944 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕೂಡ 49,980ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಮಾಡಿದೆ.

ಭಾರತ-ಚೀನಾ ಗಡಿ ಭಾಗ ಲಡಾಖ್’ನ ಪ೦ಗ್ಯಾ೦ಗ್ ಟಿಸೋದಲ್ಲಿ ಭಾರತೀಯ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ ಫೋಟೋಗಳು

ಭಾರತ-ಚೀನಾ ಗಡಿ ಭಾಗ ಲಡಾಖ್’ನ ಪ೦ಗ್ಯಾ೦ಗ್ ಟಿಸೋದಲ್ಲಿ ಭಾರತೀಯ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ ಫೋಟೋಗಳು