ನಟ ನಾನಾ ಪಾಟೇಕರ್ ನಿಧನ: ಅಸ್ವಾಭಾವಿಕ ಸಾವು ಪ್ರಕರಣ ದಾಖಲು

ಗೋವಾ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 8ರಂದು ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ತಂಡ ಸಿಪಿಆರ್ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿತ್ತು. ಆದರೆ, ಬೆಳಿಗ್ಗೆ 5.20ಕ್ಕೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸುಮಾರು 45 ನಿಮಿಷಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ. ಪಿಎಸ್‌ಐ ನಿತಿನ್ ನಾಯಕ್ ನೇತೃತ್ವದಲ್ಲಿ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಕಾನೂನು ಪ್ರಕ್ರಿಯೆಯ ಭಾಗವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದೇ ದಿನ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು…

‘ಇಂಡಿಯನ್ 3’: ಯಾವುದೇ ರಾಜಿ ಮಾಡಿಕೊಳ್ಳದ ಮನಸ್ಥಿತಿಯೊಂದಿಗೆ ಮರಳಿದ ಸೇನಾಪತಿ

ಚೆನ್ನೈ: ನಟ ಕಮಲ್ ಹಾಸನ್ ಅಭಿನಯದ ಜನಪ್ರಿಯ ‘ಇಂಡಿಯನ್’ ಸರಣಿಯ ಮೂರನೇ ಭಾಗ ‘ಇಂಡಿಯನ್ 3’ ಚಿತ್ರದ ಹೊಸ ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಈ ಚಿತ್ರದ ಪೋಸ್ಟರ್‌ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ (Lyca Productions) ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟರ್ ಹಂಚಿಕೊಂಡಿದೆ. “ಸೇನಾಪತಿ ಯಾವುದೇ ರಾಜಿ ಮಾಡಿಕೊಳ್ಳದ ಮನಸ್ಥಿತಿಯೊಂದಿಗೆ ಮರಳಿದ್ದಾರೆ. ‘ಇಂಡಿಯನ್ 3’ ಯುದ್ಧದ ಸನ್ನದ್ಧತೆಯೊಂದಿಗೆ ಮತ್ತೆ ಆರಂಭವಾಗುತ್ತಿದೆ” ಎಂಬ ಸಂದೇಶದೊಂದಿಗೆ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ‘ಇಂಡಿಯನ್’ ಸರಣಿಯಲ್ಲಿ ಕಮಲ್ ಹಾಸನ್ ನಿರ್ವಹಿಸಿರುವ ಸೇನಾಪತಿ ಪಾತ್ರವು ಪ್ರೇಕ್ಷಕರ ಗಮನ ಸೆಳೆದಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ವ್ಯಕ್ತಿಯ ಕಥೆಯನ್ನು ಒಳಗೊಂಡ ಮೊದಲ ಚಿತ್ರ 1996ರಲ್ಲಿ ಬಿಡುಗಡೆಯಾಗಿತ್ತು. ಕಮಲ್ ಹಾಸನ್ ಜೊತೆಗೆ ಮನೀಶಾ ಕೊಯಿರಾಲಾ ಮತ್ತು ಊರ್ಮಿಳಾ ಮಾತೋಂಡ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದಾದ…

ಸೂರ್ಯ ಅಭಿನಯದ ‘ಸೀನ್’ ಚಿತ್ರದ ಮೊದಲ ಹಾಡು ಬಿಡುಗಡೆ

ಚೆನ್ನೈ: ನಟ ಸೂರ್ಯ ಅಭಿನಯದ, ನಿರ್ದೇಶಕ ಜಿತು ಮಾಧವನ್ ಅವರ ಬಹುನಿರೀಕ್ಷಿತ ಚಿತ್ರ ‘ಸೀನ್’ ಚಿತ್ರದ ಮೊದಲ ಹಾಡು ‘ಆಥಿ ಇವ ಯಾರಾ’ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರದ ನಿರ್ಮಾಣ ಸಂಸ್ಥೆ ‘ಝಗರಂ ಸ್ಟುಡಿಯೋಸ್’ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಾಡಿನ ಬಿಡುಗಡೆಯನ್ನು ಪ್ರಕಟಿಸಿದೆ. “ಸಂಭ್ರಮಿಸುವ ಸಮಯ ಬಂದಿದೆ! ‘ಸೀನ್’ ಚಿತ್ರದ ಮೊದಲ ಹಾಡು ಈಗ ಬಿಡುಗಡೆಯಾಗಿದೆ” ಎಂದು ತಿಳಿಸಿರುವ ಸಂಸ್ಥೆ, ತಮಿಳಿನಲ್ಲಿ ‘ಆಥಿ ಇವ ಯಾರಾ’ ಹಾಗೂ ತೆಲುಗಿನಲ್ಲಿ ‘ಅಮ್ಮೋ ಇದಿ ಎವರ್ರಾ’ ಶೀರ್ಷಿಕೆಯಲ್ಲಿ ಹಾಡು ಬಿಡುಗಡೆಯಾಗಿರುವುದನ್ನು ಉಲ್ಲೇಖಿಸಿದೆ. ಕೆಲವು ದಿನಗಳ ಹಿಂದಷ್ಟೇ ಚಿತ್ರತಂಡವು ಸಿನಿಮಾದ ಶೀರ್ಷಿಕೆ ಟೀಸರ್ ಬಿಡುಗಡೆ ಮಾಡಿತ್ತು. ಇದೀಗ ಮೊದಲ ಹಾಡನ್ನು ಹೊರತರುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದೆ. ಹಾಡಿಗೆ ಸುಶಿನ್ ಶ್ಯಾಮ್ ಸಂಗೀತ ಸಂಯೋಜಿಸಿದ್ದು, ರಾಜ್‌ಪ್ರಿಯಾನ್ ಸಾಹಿತ್ಯ ರಚಿಸಿದ್ದಾರೆ. ವಿಶೇಷವೆಂದರೆ, ಅವರೇ…

ಪದ್ಮಶ್ರೀ ಪುರಸ್ಕೃತ ನಟ ನಾನಾ ಪಾಟೇಕರ್ ನಿಧನಕ್ಕೆ ಶ್ರದ್ದಾಂಜಲಿಯ ಮಹಾಪೂರ

ಬೆಂಗಳೂರು: ಹಿರಿಯ ನಟ, ಪದ್ಮಶ್ರೀ ಪುರಸ್ಕೃತ ನಾನಾ ಪಾಟೇಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ವ್ಯಕ್ತಪಡಿಸಿ, ನಾನಾ ಪಾಟೇಕರ್ ಅವರ ವಿಶಿಷ್ಟ ಅಭಿನಯ ಸಾಮರ್ಥ್ಯ ಹಾಗೂ ವಿಭಿನ್ನ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. “ತೀವ್ರತೆ, ವೈಯಕ್ತಿಕ ಶೈಲಿ ಹಾಗೂ ವಿಶಿಷ್ಟ ಉಪಸ್ಥಿತಿಯನ್ನು ಹೊಂದಿದ್ದ ಕೆಲವೇ ನಟರಲ್ಲಿ ನಾನಾ ಪಾಟೇಕರ್ ಅವರೂ ಒಬ್ಬರು. ಪ್ರತಿಯೊಂದು ಪಾತ್ರಕ್ಕೂ ಅವರು ಅಪಾರ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ತಂದಿದ್ದರು. ಅವರು ನಿರ್ವಹಿಸಿದ ಪಾತ್ರಗಳು ಹಲವು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯಲಿವೆ. ತಮ್ಮ ನಂಬಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ನೇರ ನಡೆಗೂ ಅವರು ಹೆಸರಾಗಿದ್ದರು” ಎಂದು ಮೋದಿ ಹೇಳಿದ್ದಾರೆ. ಹಿಂದಿ ಹಾಗೂ ಮರಾಠಿ ಚಿತ್ರರಂಗಕ್ಕೆ ನಾನಾ ಪಾಟೇಕರ್ ನೀಡಿದ ಕೊಡುಗೆ ಅಪಾರ.…

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿಧಿವಶ; ಗಣ್ಯರ ಕಂಬನಿ

ಗೋವಾ: ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗಿನ ಜಾವ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ. ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬೆಳಿಗ್ಗೆ 5.20ಕ್ಕೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಶೇಖರ್ ಸಾಳ್ಕರ್ ಅವರ ಪ್ರಕಾರ, ನಾನಾ ಪಾಟೇಕರ್ ಅವರನ್ನು ಉಳಿಸಲು ವೈದ್ಯಕೀಯ ತಂಡ ಸುಮಾರು 45 ನಿಮಿಷಗಳ ಕಾಲ ನಿರಂತರ ಸಿಪಿಆರ್ ನೀಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪ್ರಕರಣದಲ್ಲಿ ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ. ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದೆ. ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದ ಅವರು ವಿಶಿಷ್ಟ ಅಭಿನಯ, ಗಂಭೀರ ಸಂಭಾಷಣೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.…

‘ಒರಿಜಿನಲ್’: ಶ್ರೀನಾಥ್ ಭಾಸಿ ಅಭಿನಯದ ಟೈಮ್-ಟ್ರಾವೆಲ್ ಥ್ರಿಲ್ಲರ್

ಚೆನ್ನೈ: ನಟ ಶ್ರೀನಾಥ್ ಭಾಸಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿರ್ದೇಶಕ ರಮೀಸ್ ಅವರ ಬಹುನಿರೀಕ್ಷಿತ ‘ಟೈಮ್-ಟ್ರಾವೆಲ್’ ಥ್ರಿಲ್ಲರ್ ಚಿತ್ರ ‘ಒರಿಜಿನಲ್’ (Orijinal) ಅಕ್ಟೋಬರ್ 23ರಂದು ತೆರೆಗೆ ಬರಲಿದೆ. ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪೋಸ್ಟರ್ ಮೂಲಕ ಘೋಷಿಸಿದೆ. ನಟ ಶ್ರೀನಾಥ್ ಭಾಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡು, “ಅಂತಿಮವಾಗಿ, ಆ ಸಮಯ ಬಂದಿದೆ. #Orijinal ಅಕ್ಟೋಬರ್ 23ರಂದು ದೊಡ್ಡ ಪರದೆಯ ಮೇಲೆ ಬರಲಿದೆ” ಎಂದು ತಿಳಿಸಿದ್ದಾರೆ. ಚಿತ್ರದ ವಿಭಿನ್ನ ಶೀರ್ಷಿಕೆಯೇ ಈಗಾಗಲೇ ಕುತೂಹಲಕ್ಕೆ ಕಾರಣವಾಗಿದೆ. ‘Original’ ಅಥವಾ ‘Orijinal’ ಎಂಬ ಪ್ರಶ್ನೆಯೊಂದಿಗೆ ಚಿತ್ರತಂಡ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸಿದ್ದು, ಕಥಾಹಂದರದ ಕುರಿತೂ ನಿರೀಕ್ಷೆ ಹೆಚ್ಚಾಗಿದೆ. ಹರ್ಷದ್ ಸಹ-ನಿರ್ಮಾಪಕರಾಗಿ, MAZ ಮೀಡಿಯಾ ಮತ್ತು ಜಿಕು ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ರಮೀಸ್ ಅವರೇ ಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಭಿರಾಮ್ ರಾಧಾಕೃಷ್ಣನ್, ರಾಜೇಶ್ ಮಾಧವನ್, ಶ್ರೀಕಾಂತ್ ವೆಟ್ಟಿಯಾರ್,…

‘ಡ್ರೋನ್ಸ್’: ಸರ್ರಿಯಲಿಸ್ಟ್ ಫ್ಯಾಂಟಸಿ ಕಥೆ.. ಅಕ್ಟೋಬರ್ 16ರಂದು ತೆರೆಗೆ

ಚೆನ್ನೈ: ನಿರ್ದೇಶಕ ರಾಘವ್ ಮಿರ್ದಾತ್ ನಿರ್ದೇಶನದ, ಸಿದ್ಧಿ ಇದ್ನಾನಿ ಮತ್ತು ಅಂಜಲಿ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಡ್ರೋನ್ಸ್’ (Drones) ಚಿತ್ರ ಅಕ್ಟೋಬರ್ 16ರಂದು ತೆರೆಗೆ ಬರಲಿದೆ. ‘ಸರ್ರಿಯಲಿಸ್ಟ್ ಫ್ಯಾಂಟಸಿ’ ಕಥಾಹಂದರ ಹೊಂದಿರುವ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕ ರಾಘವ್ ಮಿರ್ದಾತ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನ್ನೂ ಹಂಚಿಕೊಂಡಿದ್ದಾರೆ. “ಒಂದು ಹುಚ್ಚು ಸಾಹಸಿಗಳ ತಂಡ. ಒಂದು ವಿಚಿತ್ರ ಹಾಗೂ ಅದ್ಭುತ ಲೋಕ. ಅಪಾರ ಮನರಂಜನೆ! #DRONES. ಅಕ್ಟೋಬರ್ 16ರಂದು ಚಿತ್ರಮಂದಿರಗಳಲ್ಲಿ,” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಜಿಎಂ ಮೋರ್ಗನ್ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಡ್ರೋನ್ಸ್’ ವಿಭಿನ್ನ ಶೈಲಿಯ ಫ್ಯಾಂಟಸಿ ಮನರಂಜನಾ ಚಿತ್ರವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಮೂರು ಫಸ್ಟ್‌ಲುಕ್ ಪೋಸ್ಟರ್‌ಗಳು ಕಥೆಯಲ್ಲಿ ಫ್ಯಾಂಟಸಿ ಜೊತೆಗೆ ಭಯಾನಕ ಅಂಶಗಳೂ ಇರಲಿವೆ ಎಂಬ ಸುಳಿವು ನೀಡಿದ್ದವು.…

ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಪ್ರಸ್ತಾವನೆ

ಬೆಂಗಳೂರು: ಕನ್ನಡ ಚಿತ್ರರಂಗ, ನಾಡು-ನುಡಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ಡಾ. ಅಂಬರೀಶ್ ನೀಡಿದ ಕೊಡುಗೆಯನ್ನು ಪರಿಗಣಿಸಿ, ಮುಂಬರುವ ರಾಜ್ಯೋತ್ಸವದ ಸಂದರ್ಭದಲ್ಲಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಾಮಲಿಂಗಾ ರೆಡ್ಡಿ, ಬೆಳ್ಳಿ ತೆರೆಯ ‘ರೆಬೆಲ್ ಸ್ಟಾರ್’ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಚ್ಚುಮೆಚ್ಚಿನ ‘ಮಂಡ್ಯದ ಗಂಡು’ ಡಾ. ಅಂಬರೀಶ್ ಅವರು ಜನರ ನೆನಪಿನಲ್ಲಿ ಸದಾ ಅಮರರಾಗಿದ್ದಾರೆ ಎಂದು ಹೇಳಿದ್ದಾರೆ. ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅಂಬರೀಶ್ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಂಬರೀಶ್ ಅವರ ಅಭಿಮಾನಿಗಳ ಆಶಯ ಹಾಗೂ ಅವರ ಜನಪ್ರಿಯತೆಯನ್ನು ಪರಿಗಣಿಸಿ, ಮುಂಬರುವ ರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ…

;ಪುಷ್ಪಕ ವಿಮಾನ’ ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ವಿಧಿವಶ

ಬೆಂಗಳೂರು: ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30ಕ್ಕೆ ಕೊನೆಯುಸಿರೆಳೆದಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಯಲ್ಲಿಯೂ ಅವರು ಸಿನಿಮಾ ನಿರ್ದೇಶಿಸಿದ್ದರು. 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನಂದಿ ಪ್ರಶಸ್ತಿ ಮತ್ತು ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು. 1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು ಯಶಸ್ವೀ ನಿರ್ದೇಶಕರಾಗಿದ್ದರು. ಡಾ.ರಾಜ್​ಕುಮಾರ್ ಅವರ ಹಲವು ಸಿನಿಮಾ ನಿರ್ದೇಶಿಸಿದ್ದರು. ಶ್ರಾವಣ ಬಂತು ಚಲಿಸುವ ಮೋಡಗಳು, ಹಾಲು ಜೇನು, ಶ್ರುತಿ ಸೇರಿದಾಗ, ಭಾಗ್ಯದ ಲಕ್ಷ್ಮೀ ಬಾರಮ್ಮ, 2 ನಕ್ಷತ್ರಗಳು, ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ‘ಆನಂದ್’ ಸಿನಿಮಾ ಮೂಲಕ ಶಿವರಾಜ್​ಕುಮಾರ್​ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಇವರು. ಮೂಖಿ,…

ಚುಟ್ಟಮಲ್ಲೆ’ ವಿಡಿಯೋ ತಿರುಚಿದವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜೂನಿಯರ್ ಎನ್‌ಟಿಆರ್

ಹೈದರಾಬಾದ್: ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರು AI ತಂತ್ರಜ್ಞಾನದ ದುರ್ಬಳಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ಜಾನ್ವಿ ಕಪೂರ್ ಅವರೊಂದಿಗೆ ಅಭಿನಯಿಸಿರುವ ‘ದೇವರ’ ಚಿತ್ರದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡಿನ ದೃಶ್ಯಗಳನ್ನು AI ಮೂಲಕ ತಿರುಚಿ ಅಶ್ಲೀಲ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಮೂಲ ಹಾಡಿನ ದೃಶ್ಯಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಫ್ ಮಾಡಿ, ಇಲ್ಲದ ಲೈಂಗಿಕ ದೃಶ್ಯಗಳಂತೆ ಬಿಂಬಿಸಲಾಗಿದೆ ಎನ್ನಲಾಗಿದ್ದು, ಈ ಕೃತ್ಯಕ್ಕೆ ಜೂನಿಯರ್ ಎನ್‌ಟಿಆರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಂತಹ ವಿಡಿಯೋಗಳನ್ನು ಸೃಷ್ಟಿಸುವವರು ಹಾಗೂ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ‘ಅಸಹ್ಯ, ವಿಕೃತ ಮತ್ತು ನಾಚಿಕೆಗೇಡು’ ಎಂದು ಕಿಡಿಕಾರಿರುವ ಜೂನಿಯರ್ ಎನ್‌ಟಿಆರ್, ಮಹಿಳೆಯರನ್ನು ಗೌರವಿಸುವ…