ರಾಗಿ ಮಣ್ಣಿ

ರಾಗಿ ಮಣ್ಣಿ, ರಾಗಿಯಿಂದ ತಯಾರಿಸಿದ ಜನಪ್ರಿಯ ಭಕ್ಷ್ಯವಾಗಿದೆ, ಇದನ್ನು ಫಿಂಗರ್ ಮಿಲ್ಲೆಟ್ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಸೇವಿಸುವ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವಾಗಿದೆ. ನನ್ನ ಪ್ರೀತಿಯ ಅಮ್ಮಂದಿರೇ, ಇದು ನಿಮಗಾಗಿ ನಾನು ನನ್ನ ಅಂಬೆಗಾಲಿಡುವ ಮಗುವಿಗೆ ನೀಡಿದ ಆರೋಗ್ಯಕರ ಗಂಜಿ ಪುಡಿ ಮತ್ತು ಪಾಕವಿಧಾನವಾಗಿದೆ. ರಾಗಿ ಮಣ್ಣಿ ಪುಡಿ ಮಾಡಲು ಯಾವ ಪದಾರ್ಥಗಳನ್ನು ಸೇರಿಸಲಾಗುತ್ತದೆ ಮತ್ತು ನಾನು ಗಂಜಿ ಹೇಗೆ ಮಾಡಿದ್ದೇನೆ ಎಂದು ನೋಡೋಣ. Detailed Recipe in TrendyAngel Kitchen Website: https://trendyangel.in/recipes/raagi-porriadge/ Other porridge recipe:  Oats Almond Powder & Porridge | Best Meal Option for Toddlers : https://youtu.be/8qmkztFBvjw TrendyAngel Kitchen | Vegetarian Food | Healthy, Traditional, Modern, Regional & More. Like TrendyAngel Kitchen on Facebook: https://www.facebook.com/trendyangelkitchen Follow…

ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆತಾಗಿದೆ. ರಾಜ್ಯದ ಇತಿಹಾಸದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರಾಂಡ್‌ ಸ್ಟೆಪ್ಸ್‌ ಮುಂಭಾಗ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆ ಉದ್ಘಾಟಿಸಿದರು. ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹಿತ ಸಚಿವರನೇಕರು ಉಪಸ್ಥಿತರಿದ್ದರು. ರಾಜಧಾನಿಯಲ್ಲಷ್ಟೇ ಅಲ್ಲ, ವಿವಿಧ ಜಿಲ್ಲಾ ಕೇಂದ್ರಗಳಲ್ಲೂ. ಶಕ್ತಿ ಯೋಜನೆಯನ್ನು ಉದ್ಘಾಟಿಸಲಾಯಿತು. ‘ಶಕ್ತಿ’ ಯೋಜನೆಯ ಪ್ರಮುಖ ಅಂಶಗಳು : ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು. ʼ ಶಕ್ತಿ ಯೋಜನೆʼಯ ಸೌಲಭ್ಯವು…

ಬೆಲ್ಲ ಮತ್ತು ಪುದಿನಾ ಶರಬತ್

ಬೆಲ್ಲ ಮತ್ತು ಪುದಿನಾ ಶರಬತ್ ಆರೋಗ್ಯಕರ ಬೇಸಿಗೆ ಪಾನೀಯಗಳಲ್ಲಿ ಒಂದಾಗಿದೆ. ಇದು ಬೇಸಿಗೆಯಲ್ಲಿ ಅಥವಾ ಯಾವುದೇ ಸಮಯದಲ್ಲಿ ಪರಿಪೂರ್ಣವಾಗಿದೆ. ಬೆಲ್ಲದಿಂದ ತಯಾರಿಸಿದ ಈ ರಸವನ್ನು ಎಲ್ಲರೂ ಸಂತೋಷದಿಂದ ಕುಡಿಯುತ್ತಾರೆ. ಈ ಶರಬತ್ ಕಬ್ಬಿನ ರಸವನ್ನು ಹೋಲುತ್ತದೆ ಎಂದು ಹಲವರು ಹೇಳುತ್ತಾರೆ. ಇದು ಸಂಪೂರ್ಣವಾಗಿ ವಿಭಿನ್ನ ಶರಬತ್. ಇದು ವಿಭಿನ್ನ ಮತ್ತು ರುಚಿಕರವಾದ ಶರಬತ್. ಈ ಶರಬತ್ ರುಚಿ ಕಬ್ಬಿನ ರಸವನ್ನು ಹೋಲುತ್ತದೆ ಆದ್ದರಿಂದ ಹೆಚ್ಚಿನ ಜನರು ಈ ರಸದ ಬಗ್ಗೆ ತಪ್ಪು ಮಾಹಿತಿ ಮತ್ತು ಆಲೋಚನೆಗಳನ್ನು ನೀಡುತ್ತಿದ್ದಾರೆ. ಈ ಪಾನೀಯಕ್ಕೆ ಹೆಚ್ಚಿನ ಪದಾರ್ಥಗಳು ಅಗತ್ಯವಿಲ್ಲ. ಮನೆಗೆ ಇದ್ದಕ್ಕಿದ್ದಂತೆ ಅತಿಥಿಗಳು ಬಂದಾಗ, ಅವರಿಗೆ ಆ ಸಮಯದಲ್ಲಿ ಜ್ಯೂಸ್ ಬೇಕು, ನಿಂಬೆ ಇಲ್ಲ. ಈ ಜ್ಯೂಸ್ ಸುಲಭವಾಗಿ ಮಾಡಬಹುದು. ಪುದೀನಾ ಎಲೆಗಳು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇರುತ್ತವೆ. ಈ ಜ್ಯೂಸ್ ರೆಸಿಪಿಯನ್ನು ತಯಾರಿಸಲು ನಮಗೆ ಯಾವುದೇ ಕೃತಕ ಸುವಾಸನೆ ಅಥವಾ…

ಆನೆಗಳಿಗೆ ಕಬ್ಬು-ಬೆಲ್ಲ ತಿನ್ನಿಸಿದ ಮೋದಿ.‌. ವೀಡಿಯೋ ವೈರಲ್

ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ‌ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ಕೈಗೊಂಡು ಗಮನಸೆಳೆದಿದ್ದಾರೆ. ಇದೇ ವೇಳೆ ಅವರು ಆನೆಗಳಿಗೆ ಕಬ್ಬು-ಬೆಲ್ಲ ತಿಣಿಸಿದ ವೀಡಿಯೋ ವೈರಲ್ ಆಗಿದೆ. Prime Minister @narendramodi ji visits Theppakadu Elephant camp in #MudumalaiTigerReserve pic.twitter.com/F0ooWubBcn — Pratap Simha (@mepratap) April 9, 2023

ಪುರಾಣದ ಸನ್ನಿವೇಶ: ‘ಪೊಳಲಿ’ ಎಂಬ ಭಕ್ತಿ-ಶಕ್ತಿಯ ಅಖಾಡ

ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ. ಪ್ರತೀ ವರ್ಷದಂತೆ, ಮಾರ್ಚ್ 14ರ ತಡ ರಾತ್ರಿ ದಕ್ಷಿಣಕನ್ನಡದ ಪೊಳಲಿ ಕ್ಷೇತ್ರದಲ್ಲಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗಿದೆ. ಇದೀಗ ಜಾತ್ರೆಯ ಅಂತಿಮ ಘಟ್ಟದಲ್ಲಿ ‘ಚೆಂಡು ಉತ್ಸವ’ ನೆರವೇರುತ್ತಿದ್ದು ಇದು ‘ಭಕ್ತಿ-ಶಕ್ತಿ ಜೊತೆಗಿನ ಕಾದಾಟದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಬೇರೆ ದೇಗುಲಗಳ ಜಾತ್ರೆಗಿಂತ ‘ಪೊಳಲಿ’ ವಿಭಿನ್ನ..! ಜಗತ್ತಿನಲ್ಲೇ ನಿತ್ಯ ಪೂಜಿತ ಅತೀ ದೊಡ್ಡ ಮೃಣ್ಮಯಿ ಮೂರ್ತಿಯ ಏಕೈಕ ದೇಗುಲ ಪೊಳಲಿಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ. ಅರಸರಿಗೆಲ್ಲಾ ಈ ದೇವಿಯೇ ರಾಜೆ ಎಂಬುದು ಪುರಾಣದಿಂದಲೇ ತಿಳಿಯುತ್ತಿದೆ. ಸುರಥ ಮಹಾರಾಜ ತನ್ನ ಕಿರೀಟವನ್ನೇ ದೇವಿಯ ಮೂರ್ತಿಗೆ ಇಟ್ಟು ದೇವಿಯನ್ನೇ ರಾಜಳೆಂದು ಘೋಷಿಸಿದ ಈ ನೆಲದಲ್ಲಿ, ರಾಜರಾಜೇಶ್ವರಿಗೇ ಮೊದಲ ಗೌರವ.…

ಯುಗದ ಆದಿಯಲ್ಲಿ ಸಂಭ್ರಮ. ‌ ಹೊಸತನಕ್ಕೆ ‘ಯುಗಾದಿ’ ಮುನ್ನುಡಿ..

ಭಾರತೀಯ ಪರಂಪರೆಯಲ್ಲಿ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಅದರಲ್ಲೂ ವರ್ಷಾರಂಭಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಭಾರತೀಯ ಪರಂಪರೆಯಲ್ಲಿ ಯುಗಾದಿಯೇ ಹೊಸವರ್ಷಾರಂಭ. ಯುಗದ ಆದಿಯೇ ಯುಗಾದಿ ಎಂಬ ಅರ್ಥದಲ್ಲಿ ಒಂದು ವರ್ಷದ ಅವಧಿಯ ಆದಿ ಇಂದು. ಹಾಗಾಗಿಯೇ ವ್ಯವಹಾರಿಕ ವರ್ಷಕ್ಕೆ ಕ್ಯಾಲೆಂಡರ್ ಆಧಾರವಾಗಿದ್ದರೆ, ಸಂಪ್ರದಾಯ, ಧಾರ್ಮಿಕ ಆಚರಣೆಗೆ ಸಂವತ್ಸರವೇ ಆಧಾರ. ಹಾಗಾಗಿ ಸಂವತ್ಸರದ ಮೊದಲ ದಿನ (ಆದ್ಯ ದಿನ) ಈ ‘ಯುಗಾದಿ’ಗೆ ಧಾರ್ಮಿಕ ಮಹತ್ವ ಇದೆ. ಪ್ರಕೃತಿಯೂ ಸಹ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಈ ಸಮಯದಲ್ಲಿ ವೃಕ್ಷಗಳೂ ಹಳೇ ಎಲೆಗಳನ್ನು ಕಳೆದುಕೊಂಡು ಹೊಸ ಎಲೆಗಳೊಂದಿಗೆ ಚಿಗುರಿ ತನ್ನ ಯೌವ್ವನವನ್ನು ಮತ್ತೆ ಹೊಸದಾಗಿ ಆರಂಭಿಸುತ್ತದೆ. ಯುಗಾದಿಯ ದಿನದಂದೇ ಬ್ರಹ್ಮ ದೇವರು ಈ ಭೂಮಿಯನ್ನು ಸೃಷ್ಟಿಸಲು ಪ್ರಾರಂಭಿಸಿದರೆಂಬ ನಂಬಿಕೆಗೆ ಪ್ರಕೃತಿಯ ಈ ಬದಲವಣೆಯೂ ಉದಾಹರಣೆ ಅಂತಿದ್ದಾರೆ ಪಾಂಡಿತ್ಯವುಳ್ಳವರು. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಚೈತ್ರ ಮಾಸದ ಈ ದಿನವು…

ವಿಶ್ವ ಮಹಿಳಾ ದಿನ.. ‘ವನಿತಾ ಪಾರ್ಕ್’ನಲ್ಲಿ ಅನನ್ಯ ವಿಶೇಷ..

ಮಂಗಳೂರು; ಮಂಗಳೂರು ನಗರದ ವನಿತಾ ಪಾರ್ಕ್ ನಲ್ಲಿ ಬುಧವಾರ ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಗಮನಸೆಳೆಯಿತು. ಉದ್ಯಾನವನದಲ್ಲಿ ಗಿಡನೆಡುವ ಮೂಲಕ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹಿಂದುಸ್ತಾನಿ ಸಂಗೀತ ವಿದುಷಿ ವಿಭಾಶ್ರೀ ನಿವಾಸ್ ನಾಯಕ್ ಅವರನ್ನು ಗೌರವಿಸಲಾಯಿತು. ವಿಶ್ವ ಮಹಿಳಾ ದಿನದ ಮಹತ್ವದ ಬಗ್ಗೆ ಮಾತನಾಡಿದ ವಿಭಾ ಶ್ರೀನಿವಾಸ ನಾಯಕ್, ಸಮಾಜದಲ್ಲಿ ಮಹಿಳೆ ಒಂದು ಶಕ್ತಿ. ಆ ಶಕ್ತಿ ಆಕೆಗೆ ಪ್ರಕೃತಿಯ ಕೊಡುಗೆ. ಆದುದರಿಂದ ಮಹಿಳೆ ಮನೆ ಇರಲಿ ಯಾವುದೇ ಕ್ಷೇತ್ರದಲ್ಲಿ ಯೂ ಯಾವ ಅಡೆ ತಡೆ ಬಂದರೂ ಅವುಗಳನ್ನು ಮೀರಿ ತನ್ನ ತಾಳ್ಮೆ,ಮಮತೆ, ಸಹನೆ,ಹೊಣೆಗಾರಿಕೆ ಯೊಂದಿಗೆ ಕರ್ತವ್ಯ ನಿರ್ವಹಿಸುತ್ತಾಳೆ. ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಅವರ ಜೊತೆ ಇರುವ ಪುರುಷರು ಮುಖ್ಯರಾಗುತ್ತಾರೆ. ತಾನು ಮತ್ತು ತನ್ನ ಸುತ್ತಲಿನ…

ಮಾ.7ರಂದು ‘ಫಲಾನುಭವಿಗಳ ಉತ್ಸವ’: ಎಸ್.ಟಿ.ಸೋಮಶೇಖರ್ ಸಾರಥ್ಯದಲ್ಲಿ ವಿನೂತನ ಕಾರ್ಯಕ್ರಮ

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಉತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾ. 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಫಲಾನುಭವಿಗಳ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಮುಖ್ಯ ಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವರು. ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಜನ ಪ್ರತಿನಿಧಿಗಳು ಸಹಕರಿಸಬೇಕು. ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 27 ಸಾವಿರ ಫಲಾನುಭವಿಗಳು, ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ 10 ಸಾವಿರ ಫಲಾನುಭವಿಗಳು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 5 ಸಾವಿರ ಫಲಾನುಭವಿಗಳು, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 4…

ಏಕೈಕ ‘ತುಳು ಪತ್ರಿಕೆಯ ಧೀರ’ ವಿಜಯಕುಮಾರ್ ಹೆಬ್ಬಾರಬೈಲು ಸಾಧನೆಯ ಕಿರೀಟಕ್ಕೆ ಪ್ರಶಸ್ತಿಯ ಗರಿ.. 

‘ಗಡಿನಾಡ ಧ್ವನಿ’ಯಾದ ಏಕೈಕ ‘ತುಳು ಪತ್ರಿಕೆಯ ಧೀರ”ನಿಗೆ ರಾಜ್ಯ ಪ್ರಶಸ್ತಿ.. ವಿಜಯಕುಮಾರ್ ಹೆಬ್ಬಾರಬೈಲು ಅವರಿಗೆ ಪುರಸ್ಕಾರ.. ಮಂಗಳೂರು: ಕವಿ, ಪತ್ರಕರ್ತ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರ ಸಂಪಾದಕತ್ವದ ‘ಪೂವರಿ’ ಪತ್ರಿಕೆಯು ತುಳು ಪತ್ರಿಕಾ ಕ್ಷೇತ್ರದಲ್ಲಿ ನಾಡಿಗೆ ಸಲ್ಲಿಸಿದ ಅನುಪಮ ಸಾಧನೆಗಾಗಿ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನ – 2023ರ “ಗಡಿನಾಡ ಧ್ವನಿ ಮಾಧ್ಯಮ ರಾಜ್ಯ ಪ್ರಶಸ್ತಿ”ಯನ್ನು ಪಡೆದುಕೊಂಡಿದೆ. ಪುತ್ತೂರು ಸಮೀಪದ ಒಡ್ಯ ಸರಕಾರಿ ಶಾಲಾ ವಠಾರದಲ್ಲಿ ನಡೆದ ಈ ಪ್ರಶಸ್ತಿಯನ್ನು ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ವಾರಬೈಲು ಅವರಿಗೆ ಪ್ರಧಾನ ಮಾಡಲಾಗಿದೆ. ತುಳುನಾಡಿನಲ್ಲಿ ಕಳೆದ ಎಂಟು ವರ್ಷಗಳಿಂದ ಸದ್ದು ಮಾಡುತ್ತಿರುವ ತುಳು ಭಾಷೆಯ ಏಕೈಕ ತುಳು ಮಾಸಿಕ ‘ಪೂವರಿ’ ಇತ್ತೀಚೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಒಡಿಯೂರು ತುಳು ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸಹಿತ ಅನೇಕ ಮಾಧ್ಯಮ ಪ್ರಶಸ್ತಿಗಳ ಪಡೆದುಕೊಂಡಿದೆ. ಇದೀಗ ಈ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಪುರಸ್ಕಾರದ…