ಮಂಗಳೂರು ಸಮೀಪ ಕಂಗೊಳಿಸಲಿದೆ ಸೃಷ್ಟಿಕರ್ತನ ಸನ್ನಿಧಿ; ಇದು ‘ಬ್ರಹ್ಮ’ನ ಅನನ್ಯ ಕ್ಷೇತ್ರ..

ಇಡೀ ವಿಶ್ವದಲ್ಲಿ 2 ಕಡೆಗಳಲ್ಲಿ ಮಾತ್ರ ಇರುವ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ದೇವರ ಸನ್ನಿಧಿ ಮಂಗಳೂರು ಸಮೀಪದ ಕಳ್ಳಿಗೆ ಗ್ರಾಮದ ಪುಣ್ಯಭೂಮಿಯಲ್ಲೆ ಶೀಘ್ರದಲ್ಲೇ ನೂತನ ದೇವಾಲಯವಾಗಿ ಕಂಗೊಳಿಸಲಿದೆ. ಅಸ್ಸಾಂ ರಾಜ್ಯದ ನದಿಕಿನಾರೆಯಲ್ಲಿ ಹೊರತುಪಡಿಸಿ ಮತ್ತೊಂದು ಬ್ರಹ್ಮ ದೇವರ ಗುಡಿ ಇರುವುದು ಕರ್ನಾಟಕ ರಾಜ್ಯದ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನಲ್ಲಿ ಮಾತ್ರ. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಆರಂಭವಾದಾಗ ಬ್ರಹ್ಮ ಸನ್ನಿಧಿ ತೆರವುಗೊಳಿಸಲು ಹೆದ್ದಾರಿ ಇಲಾಖೆ ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ಗುತ್ತಿಗೆ ವಹಿಸಿಕೊಂಡಿದ್ದ ಇರ್ಕಾನ್ ಸಂಸ್ಥೆ ಗ್ರಾಮಸ್ಥರಿಗೆ ಮುನ್ಸೂಚನೆ ನೀಡದೆ, ಸನ್ನಿಧಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಜೆಸಿಬಿ ನುಗ್ಗಿಸಿ ಸನ್ನಿಧಿ ಕೆಡವಲು ಮುಂದಾಗಿತ್ತು ಎಂಬ ಅಸಮಾಧಾನ ಸ್ಥಳೀಯರದ್ದು. ಆ ವೇಳೆ, ಪವಾಡವೊಂದು ನಡೆದಿತ್ತು. ಸನ್ನಿಧಿ ಕೆಡವಲು ಪ್ರಯತ್ನ ನಡೆದ ಸಂದರ್ಭದಲ್ಲಿ ಯಂತ್ರವು ಹಠತ್ತಾಗಿ ಕೆಟ್ಟುಹೋಗಿ ಕಾಮಗಾರಿಗೆ ತಡೆಯಾಯಿತು. ಮರುದಿನ 2009 ನವೆಂಬರ್ 8ರಂದು…

ದೇವಾಲಯಗಳಿಗೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ; ‘ಮಸೀದಿಗೂ ಅನ್ವಯವಾಗುತ್ತಾ?’ ಎಂದು ಸರ್ಕಾರಕ್ಕೆ ಪ್ರಶ್ನೆಗಳ ಸರಮಾಲೆ

ಬೆಂಗಳೂರು: ರಾಜ್ಯದ ಮುಜರಾಯಿ  ದೇವಸ್ಥಾನಗಳಲ್ಲಿ ಇನ್ನು ಮುಂದೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ ಇರಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಔರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಆಡಳಿತ ಪಕ್ಷ ಕಾಂಗ್ರೆಸ್, ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇನ್ಮುಂದೆ ಜಾತಿ ಹಾಗೂ ಲಿಂಗಭೇಧವಿಲ್ಲದೆ ಸರ್ವರಿಗೂ ಮುಕ್ತ ಪ್ರವೇಶ ಎಂಬ ಫಲಕವನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆಂದು ಹೇಳಿದೆ. . ಯಾವುದೇ ದೇವಸ್ಥಾನಗಳಲ್ಲಿ ದಲಿತರು, ಸ್ತ್ರೀಯರು ಎಂಬ ತಾರತಮ್ಯ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಧಾರ್ಮಿಕ ಸ್ವತಂತ್ರದ ವಾತಾವರಣ ನಿರ್ಮಿಸುವುದೇ ನಿಜವಾದ ಧರ್ಮರಕ್ಷಣೆ ಎಂದು ಕಾಂಗ್ರೆಸ್ ಸರ್ಕಾರ ನಂಬಿದೆ ಎಂದು ಹೇಳಿಕೊಂಡಿದೆ. . ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಸೀದಿಗಳಿಗೆ ಈ ನಿಯಮ ಅನ್ವಯ ಇಲ್ವಾ? ಎಂಬ ಪ್ರಶ್ನೆಯನ್ನು ಕೆಲವರು ಸರ್ಕಾರದ ಮುಂದಿಟ್ಟಿದ್ದಾರೆ. ‘ನಾವು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಇದು…

ಕಾರ್‌ಸ್ಟ್ರೀಟ್ ವೆಂಕಟರಮಣ ದೇವಳಕ್ಕೆ ಗೋಕರ್ಣ ಮಠಾಧೀಶರ ಭೇಟಿ; ವೈಭವದ ಸ್ವಾಗತ

ಮಂಗಳೂರು : ಬಂದರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೆರ್ ಸ್ವಾಮೀಜಿಯವರು ಭೇಟಿ ನೀಡಿದ ಸನ್ನಿವೇಶ ಜಾತ್ರೆಯ ವೈಭವಕ್ಕೆ ಸಾಕ್ಷಿಯಾಯಿತು. ಶ್ರೀ ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಶ್ರೀಗಳು ಶನಿವಾರ ಸಾಯಂಕಾಲ 6 ಗಂಟೆ ಸುಮಾರಿಗೆ ಆಗಮಿಸಿದರು. ಸಮಸ್ತ ಮಂಗಳೂರಿನ ಜಿಯಸ್‌ಬಿ ಸಮಾಜ ಭಾಂದವರ ಪರವಾಗಿ ಶ್ರೀ ಗಳವರಿಗೆ ಸಕಲ ಬಿರುದಾವಳಿ ಹಾಗೂ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀಗಳ ಆಗಮನ ಬಳಿಕ ಶ್ರೀ ದೇವಳದ ವಸಂತ ಮಂಟಪದಲ್ಲಿ ಹತ್ತು ಸಮಸ್ತರ ಪರವಾಗಿ ದೇವಳದ ಮೊಕ್ತೇಸರರಿಂದ ಶ್ರೀಗಳವರ ಪಾದ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀಗಳವರಿಂದ ಆಶೀರ್ವಚನ – ಪ್ರವಚನ ಕೈಂಕರ್ಯ ನೆರವೇರಿತು. ಶ್ರೀ ವೀರ ವೆಂಕಟೇಶ ದೇವರ ರಾತ್ರಿ ಪೂಜೆ ಶ್ರೀ ದೇವರಿಗೆ ಶ್ರೀಗಳವರ ಕರಕಮಲಗಳಿಂದ ಮಹಾ ಮಂಗಳಾರತಿ ನೆರವೇರಿತು ಎಂದು…

ಪುರಾಣದ ಸನ್ನಿವೇಶ: ‘ಪೊಳಲಿ’ ಎಂಬ ಭಕ್ತಿ-ಶಕ್ತಿಯ ಅಖಾಡ

ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರುತ್ತಿದೆ. ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ ‘ಪೊಳಲಿ ಚೆಂಡು’ ಎಂದೇ ಇದು ಪ್ರತೀತಿ. ಪ್ರತೀ ವರ್ಷದಂತೆ, ಮಾರ್ಚ್ 14ರ ತಡ ರಾತ್ರಿ ದಕ್ಷಿಣಕನ್ನಡದ ಪೊಳಲಿ ಕ್ಷೇತ್ರದಲ್ಲಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗಿದೆ. ಇದೀಗ ಜಾತ್ರೆಯ ಅಂತಿಮ ಘಟ್ಟದಲ್ಲಿ ‘ಚೆಂಡು ಉತ್ಸವ’ ನೆರವೇರುತ್ತಿದ್ದು ಇದು ‘ಭಕ್ತಿ-ಶಕ್ತಿ ಜೊತೆಗಿನ ಕಾದಾಟದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಬೇರೆ ದೇಗುಲಗಳ ಜಾತ್ರೆಗಿಂತ ‘ಪೊಳಲಿ’ ವಿಭಿನ್ನ..! ಜಗತ್ತಿನಲ್ಲೇ ನಿತ್ಯ ಪೂಜಿತ ಅತೀ ದೊಡ್ಡ ಮೃಣ್ಮಯಿ ಮೂರ್ತಿಯ ಏಕೈಕ ದೇಗುಲ ಪೊಳಲಿಯ ಶ್ರೀ ರಾಜರಾಜೇಶ್ವರಿ ಕ್ಷೇತ್ರ. ಅರಸರಿಗೆಲ್ಲಾ ಈ ದೇವಿಯೇ ರಾಜೆ ಎಂಬುದು ಪುರಾಣದಿಂದಲೇ ತಿಳಿಯುತ್ತಿದೆ. ಸುರಥ ಮಹಾರಾಜ ತನ್ನ ಕಿರೀಟವನ್ನೇ ದೇವಿಯ ಮೂರ್ತಿಗೆ ಇಟ್ಟು ದೇವಿಯನ್ನೇ ರಾಜಳೆಂದು ಘೋಷಿಸಿದ ಈ ನೆಲದಲ್ಲಿ, ರಾಜರಾಜೇಶ್ವರಿಗೇ ಮೊದಲ ಗೌರವ.…

‘ಬನವಾಸಿ’ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ

ಶಿರಸಿ: ಐತಿಹಾಸಿಕ ಮಹತ್ವವುಳ್ಳ ಬನವಾಸಿಯ ಸಮಗ್ರ ಅಭಿವೃದ್ಧಿಯ ಮೂಲಕ ಯಾತ್ರಾ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ “ಕಂದಬೋತ್ಸವ-2023” ಉದ್ಘಾಟಿಸಿದ ಸಿಎಂ, ಪುರಾತನ ದೇವಾಲಯಗಳ ವಿಶೇಷ ಕಾರಿಡಾರ್ ನಿರ್ಮಾಣ ಕುರಿತು ಮಾತನಾಡಿದರು‌. ಮುಂಡಗೋಡ ಮತ್ತು ಬನವಾಸಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ನೀರಾವರಿಗೆ ಕೊರತೆಯಾಗದಂತೆ ಬನವಾಸಿ ಏತ ನೀರಾವರಿ ಯೋಜನೆಯ ಮೂಲಕ , 62 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯವನ್ನಾಳಿದ ಶ್ರೇಷ್ಠ ಆಡಳಿತಗಾರರ ಕದಂಬರು,ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರ ಸಾಮ್ರಾಜ್ಯದ ಗತವೈಭವವನ್ನು ಪರಿಚಯಿಸುವ ಯೋಜನೆಗೆ ವಿಶೇಷ ಅನುದಾನವನ್ನು ಮೀಸಲಿರಿಸಿದೆ. ಆ ಕಾಲದ ಐತಿಹಾಸಿಕ ಮಹತ್ವವುಳ್ಳ ಪುರಾತನ ದೇವಾಲಯಗಳ ವಿಶೇಷವಾದ ಕಾರಿಡಾರ್ ನ್ನು…

‘ಅಂಬಲಿ ಹಲಸಿತು, ಕಂಬಳಿ ಬಿಸಿತು’: ಹೀಗಿದೆ ಮೈಲಾರಲಿಂಗೇಶ್ವರ ಕಾರಣಿಕ ನುಡಿ

ಉತ್ತರ ಕರ್ನಾಟಕದ ಐತಿಹಾಸಿಕ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆ 2023ರ ಕಾಣಿಕೋತ್ಸವ#ಅಂಬಲಿ_ಹಳಸಿತು_ಕಂಬಳಿ_ಬೀಸುತ್ತಲೇ_ಪರಾಕ್ pic.twitter.com/A4lK1PcXax — P C ಗಾಣಿಗೇರ (@prashantganige6) February 7, 2023

ಜಾತ್ರೆಗಳಲ್ಲಿ ‘ಅರಗ’ ಬೆಂಬಲಿಗರ ವಿಶೇಷ ಹರಕೆ.. ದೇವರಿಗೆ ಈ ರೀತಿ ಫಲ ಬೀರುತ್ತಿದ್ದಾರೆ ಭಕ್ತರು

ಶಿವಮೊಗ್ಗ: ಗೃಹ ಸಚಿವ ಅರಗ ಜ್ಞಾನೇಂದ್ರರ ತವರು ಇದೀಗ ಅಚ್ಚರಿಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿವೆ. ಜಾತ್ರಾ ಮಹೋತ್ಸವಗಳಲ್ಲಿ ಸ್ಥಳೀಯ ಜನನಾಯಕ ಅರಗ ಜ್ಞಾನೇಂದ್ರರ ಹೆಸರಲ್ಲಿ ದೇವರಿಗೆ ಫಲ-ಪುಷ್ಪ ಸಮರ್ಪಣೆಯ ಕೈಂಕರ್ಯವು ವಿಶೇಷ ಎಂಬಂತೆ ಕಂಡುಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ಜಾತ್ರಾ ಮಹೋತ್ಸವ ವೇಳೆ ಹಣ್ಣುಗಳ ಮೇಲೆ ಅರಗ ಜ್ಞಾನೇಂದ್ರರ ಹೆಸರನ್ನು ಬರೆದು ದೇವರಿಗೆ ಸಮರ್ಪಿಸುವ ಬೆಂಬಲಿಗರ ನಡೆ ಅಚ್ಚರಿಗೆ ಕಾರಣವಾಗಿದೆ. ಹುರುಳಿ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಆರಗ ಜ್ಞಾನೇಂದ್ರರವರ ಬೆಂಬಲಿಗರ ಪರವಾಗಿ ಕ್ಷೇತ್ರದ ವ್ಯಕ್ತಿಯೊಬ್ಬರು ರಥದ ಕಲಶಕ್ಕೆ ಫಲ ಬೀರುವ ಮೂಲಕ ಅಪರೂಪದ ಸನ್ನಿವೇಶಕ್ಕೆ ಕಾರಣರಾದರು. ಇನ್ನೊಂದೆಡೆ, ಮೇಳಿಗೆಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲೂ ಅಂಥದ್ದೇ ಪ್ರಸಂಗ ಕಂಡುಬಂತು. ಸಚಿವ ಆರಗ ಜ್ಞಾನೇಂದ್ರರ ಹೆಸರನ್ನು ಬಾಳೆಹಣ್ಣಿನಲ್ಲಿ ಬರೆದು, ಅದನ್ನು ರಥಕ್ಕೆ ಸಮರ್ಪಿಸುವ ಮೂಲಕ ಸಚಿವ ಬೆಂಬಲಿಗರೊಬ್ಬ ಕುತೂಹಲದ ಕೇಂದ್ರಬಿಂದುವಾದರು. ಈ ಬಗ್ಗೆ ಪ್ರತಿಕ್ರಿಯಿಸಿರುವ…

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಜನಸಾಗರ.. ಲಕ್ಷಾಂತರ ಭಕ್ತರು ಭಾಗಿ..

ಇಂದು ಸಂಜೆ ನೇರವೇರಿದ ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ..🙏.🚩 pic.twitter.com/zrVLlJQ8ow — Namo Mahantesh Maganur 🇮🇳🚩 (@MahanteshMagan2) January 8, 2023

ಮೋಡಗಳ ನಡುವೆ ‘ಕಾರಿಂಜೆ ಕ್ಷೇತ್ರ’ ಹೇಗಿದೆ ಗೊತ್ತಾ?

ಮಂಗಳೂರು: ಕರಾವಳಿಯಲ್ಲಿರುವ ಆಸ್ತಿಕರ ಪಾಲಿಗೆ ದಕ್ಷಿಣ ಕಾಶಿ ಎಂದೇ ಗುರುತಾಗಿರುವ ಕಾರಿಂಜೇಶ್ವರ ಕ್ಷೇತ್ರ ಪ್ರಕೃತಿಯ ಸುಂದರ ಉಡುಗೊರೆಯಲ್ಲದೆ ಬೇರೇನೂ ಅಲ್ಲ. ಮುಗಿಲೆತ್ತರದ ಈ ಏಕಶಿಲಾ ಬೆಟ್ಟದ ಮೇಲೆ ಪರಮೇಶ್ವರ ಸಾನ್ನಿಧ್ಯವಹಿಸಿದ್ದು ಈ ಪುಣ್ಯಕ್ಷೇತ್ರ ಭಕ್ತರ ಪಾಲಿನ ಸ್ವರ್ಗ. ಬೆಟ್ಟಹತ್ತಿ ದೇಗುಲಕ್ಕೆ ತೆರಳುವುದೇ ಸಾಹಸ. ಗರ್ಭಗುಡಿಯೊಳಗಿನ ಕಾರಿಂಜೇಶ್ವರನನ್ನು ಕಂಡಾಗ ಅದೇನೋ ಪುನೀತ ಭಾವ. ಈ ಅನುಭವ ಇತರೆಡೆಗಳಿಗಿಂತ ವಿಭಿನ್ನ ಎಂಬುದು ಹಲವರ ಅಭಿಪ್ರಾಯ. ಶ್ರೀ ಕಾರಿಂಜೇಶ್ವರ ಕ್ಷೇತ್ರವು ‘ಬೆಟ್ಟ ಒಂದು: ಹಲವು ಜಗತ್ತು’ ಎಂಬಂತಿದೆ. ರಾಮಾಯಣ ಮಹಾಭಾರತ ಕಾಲದ ಹಲವು ಪುರಾಣ ಪ್ರಸಂಗಗಳಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ ಎಂಬುದು ಹಲವರ ನಂಬಿಕೆ. ಬೇಸಿಗೆಯ ಬಿರುಬಿಸಿಲ ಕಾಲದಲ್ಲೂ ‘ಉಂಗುಷ್ಠ ತೀರ್ಥ’ದ ಪುಟ್ಟ ಗುಂಡಿಯಲ್ಲಿ ಜೀವಜಲ ಸಿಗುವ ಮಹಿಮೆಯೂ ಭಕ್ತರ ಕುತೂಹಲದ ಕೇಂದ್ರಬಿಂದು. ಅದರಲ್ಲೂ ಮಳೆಗಾಲ ಕಳೆದಾಕ್ಷಣದ ಚುಮುಚುಮು ಚಳಿಯ ಕಾಲದಲ್ಲಿ, ಬೆಳ್ಳಂಬೆಳಿಗ್ಗೆ ಬೆಟ್ಟದೆತ್ತರದಲ್ಲಿ ಸಾಗುವ ಮೋಡಗಳ ಸಾಲನ್ನು ನೋಡುವುದೇ ಚೆಂದ.…

ಸಂತಶ್ರೇಷ್ಠ ಕನಕದಾಸರು: ಈ ಕೀರ್ತನಾಕಾರನ ಬದುಕೇ ಆಸ್ತಿಕರಿಗೆ ಸೂತ್ರ

📝 ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಇಙದು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆಸ್ತಿಕರ ಪಾಲಿಗೆ ಗುರು ಸ್ಥಾನದಲ್ಲಿರುವ ಈ ಕೀರ್ತನಾ ಹರಿಕಾರ ಕನಕದಾಸರ ಜಯಂತಿ ಈಗಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ದಾಸ ಸಾಹಿತ್ಯದ ಮೂಲಕ ಜೀವನದ ಪಾಠ ಸಾರಿದ ಕನಕದಾಸರು ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನ ಗಳಿಸಿ ಚಿರಸ್ಮರಣೀಯರಾಗಿದ್ದಾರೆ. ಕವಿ, ಜ್ಞಾನಿ, ದಾರ್ಶನಿಕರಾಗಿ ನೀಡಿದ ಕೊಡುಗೆ ಅಪಾರ. ವ್ಯಾಸರಾಯರ ಮೆಚ್ಚಿನ ಶಿಷ್ಯರಾದ ಕನಕದಾಸರು ಕೃಷ್ಣನ ಪರಮಭಕ್ತರಾಗಿದ್ದರು. ಸರಳ ಭಾಷೆಯಲ್ಲಿ, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳ ಮೂಲಕ ಸಮಾಜದ ಒಳಿತು ಕೆಡುಕುಗಳನ್ನು ವಿಶ್ಲೇಷಿಸಿದವರು. ಕನಕದಾಸರ ಜೀವನವೇ ಒಂದು ಪವಾಡ. ದಂಡನಾಯಕರಾಗಿದ್ದ ಅವರು ಮನಪರಿವರ್ತನೆ ಮಾಡಿಕೊಂಡು ಕವಿಯಾಗಿ, ದಾಸರಾಗುತ್ತಾರೆ. ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಶ್ರೇಷ್ಠ ವ್ಯಕ್ತಿಯಾಗುತ್ತಾರೆ.   ಕನಕದಾಸರು ಬಹುಮುಖಿ ಸಮಾಜದ ಚಿಂತಕರಾಗಿ ಹೊಸ ಹೊಸ ಚಿಂತನೆಗಳನ್ನು ಮಾಡಿ ಅದಕ್ಕೆ ತಕ್ಕಂತಹ ಕೀರ್ತನೆಗಳನ್ನು…