ಮೈಸೂರು: ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದ ಕೋಳಿ ಫಾರ್ಮ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 600 ಬ್ಯಾಗ್ ಯೂರಿಯಾ ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಲಾದ ರಸಗೊಬ್ಬರದ ಅಂದಾಜು ಮೌಲ್ಯ ಸುಮಾರು ₹14.40 ಲಕ್ಷ ಎಂದು ತಿಳಿದುಬಂದಿದೆ. ರೈತರಿಗೆ ವಿತರಿಸಬೇಕಾದ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿದರು. ಜಂಟಿ ಕೃಷಿ ನಿರ್ದೇಶಕರು (ಜಾಗೃತ ಕೋಶ) ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರು, ಟಿ. ನರಸೀಪುರದ ಸಹಾಯಕ ನಿರ್ದೇಶಕರು ಹಾಗೂ ಬನ್ನೂರು ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮವನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈತರ ಹಿತಾಸಕ್ತಿಗೆ ಧಕ್ಕೆ…
Author: NavaKarnataka
AI ನಕಲಿ ಬಿಕಿನಿ ಫೋಟೋ ಅವಾಂತರ: ಸೈಬರ್ ಪೊಲೀಸ್ ಮೊರೆ ಹೋದ ನಟಿ ರುಕ್ಮಿಣಿ ವಸಂತ್
ಬೆಂಗಳೂರು: ತಮ್ಮ ಬಗ್ಗೆ AI ತಂತ್ರಜ್ಞಾನ ಬಳಸಿ ನಕಲಿ ಬಿಕಿನಿ ಫೋಟೋಗಳು ಹಾಗೂ ವೀಡಿಯೊಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವವರ ವಿರುದ್ಧ ನಟಿ ರುಕ್ಮಿಣಿ ವಸಂತ್ (Rukmini Vasanth) ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಂತಾರ ಅಧ್ಯಾಯ-2” ಚಿತ್ರದ ಮೂಲಕ ಗಮನ ಸೆಳೆದಿರುವ ರುಕ್ಮಿಣಿ ವಸಂತ್, ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ X ನಲ್ಲಿ ಪ್ರತಿಕ್ರಿಯಿಸಿರುವ ಅವರು, “ನನ್ನದು ಎಂದು ಹೇಳಿಕೊಂಡು ಕೆಲವು AI-ರಚಿತ ಚಿತ್ರಗಳು ಪ್ರಸಾರವಾಗುತ್ತಿವೆ. ಅವು ಸಂಪೂರ್ಣ ನಕಲಿ ಮತ್ತು ಕೃತಕ. ಇಂತಹ ವಿಷಯ ಸೃಷ್ಟಿಸಿ ಹಂಚುವುದು ಗೌಪ್ಯತೆಯ ಗಂಭೀರ ಉಲ್ಲಂಘನೆ” ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ ನಟಿ, ನಕಲಿ ಫೋಟೋ ಮತ್ತು ವೀಡಿಯೊಗಳನ್ನು ಸೃಷ್ಟಿಸಿ ಹರಡುತ್ತಿರುವವರ ವಿರುದ್ಧ ಕಾನೂನು ಹಾಗೂ ಸೈಬರ್ ಅಪರಾಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ. “ನಾನು ಮತ್ತು…
ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾದ ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಷಾ (48), ಮೈಬೂಬ್ ಅಲಿ (45), ರಸೂಲ್ ಬೀ (42) ಹಾಗೂ ಫಾತೀಮಾ ಅಲಿ (38) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೆಲಸ ಮುಗಿಸಿಕೊಂಡು ಕ್ರೂಸರ್ ವಾಹನದಲ್ಲಿ ತಮ್ಮ ಊರಾದ ಇಂಗಳಗಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಲಾಡ್ಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯೊಂದು ಕ್ರೂಸರ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಒಂದೇ ಕುಟುಂಬದ ಐವರು ಒಂದೇ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಂಗಳಗಿ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ…
ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ
ಹೈದರಾಬಾದ್: ನಿರ್ದೇಶಕ ಅಜಯ್ ನಾಗ್ ವಿ ಅವರ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ‘ಸಮವರ್ತಿ’ ಎಂದು ಶೀರ್ಷಿಕೆ ಇಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ನಟ ಸತ್ಯದೇವ್ ಕಾಂಚರಣ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಪೋಸ್ಟರ್ ಹಂಚಿಕೊಂಡಿರುವ ಸತ್ಯದೇವ್, “ಈ ಬಾರಿ ಭರವಸೆಯನ್ನು ತಲುಪಿಸಲಾಗುವುದು. ಅಜಯ್ ನಾಗ್ ವಿ ಅವರೊಂದಿಗೆ ಕೆಲಸ ಮಾಡುವುದು ವಿಶೇಷ ಅನುಭವ” ಎಂದು ಬರೆದುಕೊಂಡಿದ್ದಾರೆ. This time the promise will be DELIVERED !!#Samavarthi @AjayNagV Love you for everything. Watching him direct is poetry in motion. A tiger hug to my beloved producers @JakkidiShivaIYC @Shashidhar1909@Rudra_Pictures @PanchabhutaOffl pic.twitter.com/LsUCZc9ZIQ — Satya Dev (@ActorSatyaDev) May 22, 2026 ‘ಸಮವರ್ತಿ’…
ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ವಿಕಾಸ ವರ್ಗ ಸಮಾರೋಪ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ 21 ದಿನಗಳ ‘ಕಾರ್ಯಕರ್ತ ವಿಕಾಸ ವರ್ಗ ಪ್ರಥಮ (ಸಾಮಾನ್ಯ)’ ಶಿಬಿರದ ಸಮಾರೋಪ ಸಮಾರಂಭವು ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಬಿ.ಎಸ್. ರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್ ಸಮಾರೋಪ ಭಾಷಣ ಮಾಡಿದರು. ಶಿಬಿರದ ವರ್ಗಾಧಿಕಾರಿ ಗಿರೀಶ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಕಾರ್ಯಕರ್ತ ವಿಕಾಸ ವರ್ಗ ಪ್ರಥಮ’ವು ಸಂಘದ ಕಾರ್ಯಕರ್ತರಿಗೆ ನೀಡಲಾಗುವ ಮೂಲಭೂತ ಹಾಗೂ ಪ್ರಮುಖ ತರಬೇತಿ ಶಿಬಿರವಾಗಿದೆ. ಸ್ವಯಂಸೇವಕರಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ, ಬೌದ್ಧಿಕ ಜಾಗೃತಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ತರಬೇತಿ ನಡೆಸಲಾಗುತ್ತದೆ. ಸಾಮಾನ್ಯವಾಗಿ 21 ದಿನಗಳ ಕಾಲ ನಡೆಯುವ ಈ ವಸತಿ ಶಿಬಿರದಲ್ಲಿ ದೈಹಿಕ ವ್ಯಾಯಾಮ, ಯೋಗ, ದಂಡ ತರಬೇತಿ,…
ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ರಾಜ್ಯ ಸಂಪುಟ ಅಸ್ತು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ, ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಎನ್‌ಜಿಇಎಫ್ (ಹುಬ್ಬಳ್ಳಿ) ಸಂಸ್ಥೆಗೆ ನೀಡಲಾಗಿದ್ದ 2 ಕೋಟಿ ರೂ. ದುಡಿಯುವ ಬಂಡವಾಳ ಸಾಲ ಹಾಗೂ ಅದರ ಮೇಲಿನ 4 ಕೋಟಿ ರೂ. ಬಡ್ಡಿ ಸೇರಿ ಒಟ್ಟು 6 ಕೋಟಿ ರೂ. ಮತ್ತು 10 ಕೋಟಿ ರೂ. ಬಡ್ಡಿರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ತಾಯಿ-ಮಗು ಆರೈಕೆ (MCH) ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 38 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ನಗರ ಪ್ರಾಥಮಿಕ…
ಅಡಿಕೆ ಬೆಲೆ ಭಾರೀ ಏರಿಕೆ; ಶಿವಮೊಗ್ಗದಲ್ಲಿ 94 ಸಾವಿರ ಗಡಿ ದಾಟಿದ ಸರಕು ಅಡಿಕೆ
ಶಿವಮೊಗ್ಗ: ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಬುಧವಾರ ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ವಿಶೇಷವಾಗಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ಬೆಲೆ 94 ಸಾವಿರ ರೂ. ಗಡಿ ದಾಟಿರುವುದು ವ್ಯಾಪಾರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಗರಿಷ್ಠ ದರ 94,000 ರೂ. ದಾಖಲಾಗಿದ್ದು, ಮಾದರಿ ಬೆಲೆ 83,000 ರೂ. ಆಗಿದೆ. ಬೆಟ್ಟೆ ಅಡಿಕೆ 65,300 ರೂ., ರಾಶಿ ಅಡಿಕೆ 54,309 ರೂ. ಹಾಗೂ ಗೊರಬಲು 43,111 ರೂ. ದರ ಕಂಡಿದೆ. ಇವುಗಳ ಮಾದರಿ ಬೆಲೆಗಳು ಕ್ರಮವಾಗಿ 63,600 ರೂ., 52,500 ರೂ. ಮತ್ತು 39,300 ರೂ. ಆಗಿವೆ. ಇನ್ನೊಂದೆಡೆ, ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲೂ ಉತ್ತಮ ವಹಿವಾಟು ಕಂಡುಬಂದಿದೆ. ಇಲ್ಲಿ ರಾಶಿ ಅಡಿಕೆಯ ಗರಿಷ್ಠ ದರ 53,099 ರೂ. ಆಗಿದ್ದು, ಮಾದರಿ ಬೆಲೆ 48,599 ರೂ. ದಾಖಲಾಗಿದೆ.…
‘ಹೊಸ ಪೀಠ ಸ್ಥಾಪನೆ ಉದ್ದೇಶ ಇಲ್ಲ’; ಹರಿಹರ ಪೀಠ ವಿವಾದಕ್ಕೆ ಪರಿಹಾರ ದಿಕ್ಕಿನಲ್ಲಿ ಹೆಜ್ಜೆ: ಯತ್ನಾಳ್
ಹುಬ್ಬಳ್ಳಿ: ಯಾವುದೇ ಹೊಸ ಪೀಠ ಸ್ಥಾಪನೆ ಅಥವಾ ಮರುಸ್ಥಾಪನೆಯ ಉದ್ದೇಶ ಇಲ್ಲ. ಈಗಿರುವ ಮಠಗಳನ್ನು ಸುಧಾರಿಸುವುದೇ ನಮ್ಮ ಗುರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಹರಿಹರ ಪೀಠದ ವಿವಾದ ಬಗೆಹರಿಸಲು ಎರಡೂ ಕಡೆಯವರನ್ನು ಸೇರಿಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಸಮಾಜಕ್ಕೆ ಧಕ್ಕೆ ಉಂಟುಮಾಡುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಾಳಯಗಳ ನಡುವೆ ಸಮನ್ವಯ ಸಾಧಿಸಿ ಸಮಸ್ಯೆ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು. “ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ. ಹರಿಹರ ಪೀಠದ ಜೊತೆಗೆ ಕೂಡಲಸಂಗಮ ಪೀಠದ ವಿವಾದವನ್ನೂ ಬಗೆಹರಿಸಲಾಗುವುದು” ಎಂದು ಯತ್ನಾಳ್ ಹೇಳಿದರು. ಸಭೆಯ ಬಳಿಕ ಮಾತನಾಡಿದ ಅವರು, ಎರಡೂ ಕಡೆಯವರ ಮನಸ್ತಾಪ ನಿವಾರಿಸಲು ಪ್ರಯತ್ನ ಮುಂದುವರಿದಿದೆ. ಸಮಾಜದಲ್ಲಿ ಉಂಟಾಗಿರುವ…
ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ
ಚೆನ್ನೈ: ನಿರ್ದೇಶಕ ಅಭಿನವ್ ಸುಂದರ್ ನಾಯಕ್ ನಿರ್ದೇಶನದ ಬಹುನಿರೀಕ್ಷಿತ ಮಲಯಾಳಂ ಮನರಂಜನಾ ಚಿತ್ರ ‘ಮೊಲಿವುಡ್ ಟೈಮ್ಸ್’ ಇದೇ ವರ್ಷದ ಜೂನ್ 5ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಚಿತ್ರ ಮೊದಲು ಮೇ 14ರಂದು ಬಿಡುಗಡೆಯಾಗಬೇಕಿತ್ತು. ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ನಟ ನಸ್ಲೆನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದು, “ನಾವು ಬರುತ್ತಿದ್ದೇವೆ. 2026 ಜೂನ್ 5ರಂದು ‘ಮೊಲಿವುಡ್ ಟೈಮ್ಸ್’ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದಾರೆ. ಅಶಿಕ್ ಉಸ್ಮಾನ್ ನಿರ್ಮಿಸಿರುವ ಈ ಚಿತ್ರದ ಕಥೆಯನ್ನು ರಾಮು ಸುನೀಲ್ ಬರೆದಿದ್ದಾರೆ. ವಿಶ್ವಜಿತ್ ಒಡುಕ್ಕತ್ತಿಲ್ ಛಾಯಾಗ್ರಹಣ ಮಾಡಿದ್ದು, ಜೇಕ್ಸ್ ಬಿಜೋಯ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿಧಿನ್ ರಾಜ್ ಅರೋಲ್ ಸಂಕಲನ, ವಿಷ್ಣು ಗೋವಿಂದ್ ಧ್ವನಿ ವಿನ್ಯಾಸ, ಆಶಿಕ್ ಎಸ್ ಕಲಾ ನಿರ್ದೇಶನ, ಮಶರ್ ಹಂಸಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶೋಬಿ…
‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷವಾಗಿದೆ. ರಾಜ್ಯಕ್ಕೆ ಕೊಡುಗೆ ಶೂನ್ಯ’: ಸಲೀಂ ಅಹ್ಮದ್
ತುಮಕೂರು: ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ . ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳ ಮೂಲಕ ಕೋಟ್ಯಾಂತರ ಕುಟುಂಬಗಳ ಬದುಕಿಗೆ ಆಶಾಕಿರಣವಾಗಿದ್ದೇವೆ. ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಹೇಳಿದ್ದಾರೆ. ತುಮಕೂರಿನಲ್ಲಿ ಹಮ್ಮಿಕೊಂಡಿದ್ದ “3 ವರ್ಷಗಳ ಸಾಧನೆಯ ಸೇವೆಯ ಸಮರ್ಪಣೆ” ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು, “ಸರ್ವ ಜನಾಂಗದ ಅಭಿವೃದ್ಧಿಯ ಸರ್ಕಾರ ಕಾಂಗ್ರೆಸ್ ಸರ್ಕಾರ” ಎಂದು ಅವರು ಹೇಳಿದರು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿಯೂ ರಾಜ್ಯ…
