ಶಿವಮೊಗ್ಗ ಕಲ್ಲು ಕ್ವಾರಿ ಘಟನೆ ದುರಂತ: ಕಂದಾಯ ಇಲಾಖೆ ಆಯುಕ್ತರಿಂದ ತನಿಖೆ

ಬೆಂಗಳೂರು-ಶಿವಮೊಗ್ಗದ ಹುಣಸೋಡಿನ ಕಲ್ಲು ಕ್ವಾರಿ ಬಳಿ ಸಂಭವಿಸಿದ ಘಟನೆಯನ್ನು ಕಂದಾಯ ಇಲಾಖೆಯ ಆಯುಕ್ತರಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಪರಿಷತನಲ್ಲಿ ಪ್ರಕಟಿಸಿದರು. ನಿಯಮ 68ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಸ್ಟೋನ್ ಕ್ರಷರ್ ಮಾಲೀಕ ಡಿ.ವಿ.ಸುಧಾಕರ್ ಮತ್ತು ಜಮೀನು ಮಾಲೀಕ ಕುಲಕರ್ಣಿ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಕ್ರಷರ್ ಘಟಕದ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದು ಹೇಳಿದರು. ಘಟನೆಗೆ ಕಾರಣವಾದ 65 ಸಾವಿರ ಡಿಟೋನೇಟರ್ಸ್,1275 ಕೆಜಿ ಜಿಲೆಟಿನ್, 17500 ಮೀಟರ್ ಸೇಫ್ಟಿ ಫ್ಯೂಸ್ ವಶಪಡಿಸಿಕೊಳ್ಳಲಾಗಿದೆ. ಹೊಸದಾಗಿ ಕ್ರಷರ್ ಘಟಕಗಳಿಗೆ ಲೈಸೆನ್ಸ್ ಮಂಜೂರು ಮತ್ತು ನವೀಕರಣ ಮಾಡದಂತೆ ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಘಟನೆ ನಡೆದ ಪ್ರದೇಶದಲ್ಲಿ ಮಂಜೂರಾಗಿರುವ ಜಮೀನುಗಳ ಗ್ರಾಂಟ್‍ಗಳನ್ನು ರದ್ದುಪಡಿಸಲಾಗಿದ್ದು, ಸೋಟದಲ್ಲಿ ಮೃತಪಟ್ಟ 6…

‘ಎಂಬಿಎ’ ಪ್ರಯತ್ನದಲ್ಲಿ ಪುನೀತ್ ಮತ್ತು ಕಾವ್ಯ

ಕನ್ನಡ ಸಿನಿಮಾ ರಂಗ ಚೇತರಿಸಿಕೊಂಡಿದ್ದು ಒಂದೊಂದೇ ಚಿತ್ರಗಳು ಸದ್ದು ಮಾಡುತ್ತಿದೆ. ಇದೀಗ ‘ಎಂಬಿಎ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಈ ಚಿತ್ರವದಲ್ಲಿ ಪುನೀತ್ ಗೌಡ ಮತ್ತು ಕಾವ್ಯ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.