ದೇಶ ರಕ್ಷಕ ಯೋಧರಿಂದಲೂ ಯೋಗ ತಾಲೀಮು

ದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾಡಿನೆಲ್ಲೆಡೆ ಯೋಗ ಕಾರ್ಯಕ್ರಮಗಳು ಗಮನಸೆಳೆದವು.

ವಿವಿಧ ಸಂಘ ಸಂಸ್ಥೆಗಳು ಯೋಗ ದಿನಾಚಾರಣೆ ಅಂಗವಾಗಿ ಯೋಗ ಪ್ರದರ್ಶನಗಳನ್ನು ನಡೆದಿಸಿದರೆ ಗಡಿ ಭಾಗಗಳಲ್ಲಿ ಸೈನಿಕರ ಯೋಗ ಕಾರ್ಯಕ್ರಮಗಳೂ ಗಮನ ಸೆಳೆದವು.

ಭಾರತ ಪಾಕ್ ಗಡಿ ಭಾಗ, ಸಿಕ್ಕಿಂ ಗಡಿ ಪ್ರದೇಶ, ಟಿಬೆಟ್ ಗಡಿ ಕಾಯುತ್ತಿರುವ ಯೋಧರು ತಮ್ಮ ಕಾಯಕದ ನಡುವೆಯೂ ಈ ಯೋಗ ದಿನ ಆಚರಿಸಿ ದೇಶದ ಜನರಿಗೆ ಯೋಗ ದಿನದ ಮಹತ್ವ ಸಾರಿದರು.

ಮಂಜು ಆವರಿಸಿದ ಪ್ರದೇಶದಲ್ಲೂ ಕಠಿಣ ಕಾಯಕದ ನಡುವೆ ಯೋಧರು ನಡೆಸಿದ ಯೋಗ ತಾಲೀಮು ಕೂಡಾ ಜನರ ಗಮನ ಕೇಂದ್ರೀಕರಿಸಿತು.

Related posts