ಬೆಳೆ ವಿಮಾ ಯೋಜನೆ; ತ್ವರಿತ ಪರಿಹಾರ ಸೂತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯಡಿ ಬಾಕಿ ಉಳಿದಿರುವ ನಷ್ಟ ಪರಿಹಾರ ಇತ್ಯರ್ಥ ಕುರಿತು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಸಣ್ಣಪುಟ್ಟ ಸಹಕಾರ ಸಮಸ್ಯೆಗಳಿದ್ದು, ಬೆಳೆವಿಮೆ ಕಂಪೆನಿಗಳ ಜೊತೆ ಕೃಷಿ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಕಂಪೆನಿಗಳು ಹಾಗೂ ಕೃಷಿ ಇಲಾಖೆ ನಡುವೆ ಸಹಕಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರ ಖಾತೆ ಬೆಳೆ ಸಮೀಕ್ಷೆ ಸೇರಿದಂತೆ ಯೋಜನೆಯಡಿಯಲ್ಲಿನ ತಾಂತ್ರಿಕ ವಿಚಾರದಲ್ಲಿ ಕಂಡುಬರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕೆಂದು ಚರ್ಚಿಸಲಾಯಿತು.

ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿ, ಇನ್ಸೂರೆನ್ಸ್ ಕಂಪೆನಿಗಳು ಪ್ರತಿ ತಾಲೂಕಿನ ಕೇಂದ್ರ ಕಚೇರಿಯಲ್ಲಿ ಕಚೇರಿಯನ್ನು ತೆರೆಯಬೇಕು.ಇನ್ಸೂರೆನ್ಸ್ ಕಂಪೆನಿಯ ಹಿರಿಯ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಆಯುಕ್ತರು ಜಿಲ್ಲಾವಾರು ಭೇಟಿ ನೀಡಿ ಅಲ್ಲಿನ ಜನಪ್ರತಿನಿಧಿಗಳ ಜೊತೆ ವಿಮಾ ಯೋಜನೆ ಹಾಗೂ ನಷ್ಟಪರಿಹಾರ ಪರಿಹಾರದ ಕುರಿತು ಚರ್ಚಿಸಬೇಕು.ಧಾರವಾಡ ಜಿಲ್ಲೆಯ ಮಧ್ಯಂತರ ಬೆಳೆ ಪರಿಹಾರ ನೀಡಲು ಎದುರಾಗಿರುವ ಕುಂದುಕೊರತೆ ಬಗ್ಗೆ ವಿವರ ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸಂಸದರ ನಿರ್ದೇಶನದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ನೀಡಲಾಗುವುದು ಎಂದರು.

Related posts