ಕೆಲವೇ ದಿನಗಳಲ್ಲಿ ಬೆಳೆ ವಿಮೆ ಸಂಪೂರ್ಣ ಬಿಡುಗಡೆ: ಕೃಷಿ ಸಚಿವರ ಭರವಸೆ

ಧಾರವಾಡ: ಬೆಳೆ ವಿಮೆ 2019-20ರವರೆಗೆ ಬಿಡುಗಡೆಯಾಗಿದೆ. ಕೆಲವು ಕಡೆ ಅಕೌಂಟ್ ನಂಬರ್ ತಾಳೆಯಾಗದೆ ಮಿಸ್ ಮ್ಯಾಚಿಂಗ್ ತಾಂತ್ರಿಕಕಾರಣದಿಂದ ವಿಳಂಬವಾಗಿದೆ. ಇನ್ನು ಕೆಲವು ದಿನಗಳಲ್ಲಿಯೇ 2015-16 ರಿಂದ ಸಂಪೂರ್ಣವಾಗಿ ಎಲ್ಲವೂ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳೆ ವಿಮೆ ಪರಿಪೂರ್ಣ ಬಿಡುಗಡೆಯ ಭರವಸೆ ನೀಡಿದರು.

ಆರ್ಥಿಕ ಮಟ್ಟ ಸುಧಾರಿಸಿದ ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ಕ್ರಮಕೈಗೊಳ್ಳಲಾಗುವುದು ಎಂದೂ ಬಿ.ಸಿ.ಪಾಟೀಲ್ ತಿಳಿಸಿದರು

Related posts