ಮತ್ತೆ ಸುದ್ದಿಗೆ ಗುದ್ದು ಕೊಟ್ಟ ಬೋಜರಾಜ್

ಸಿನಿಮಾ ನಟ ಭೋಜರಾಜ್ ವಾಮಂಜೂರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯ ಜೊತೆಯಲ್ಲೇ ಇಸ್ಮಾಯಿಲ್ ಮೂಡುಶೆಡ್ಡೆ ತನ್ನ ಸಿನಿ ಪಯಣದ ಒಂದು ಮಜಲನ್ನು ಕ್ರಮಿಸುವ ತರಾತುರಿಯಲ್ಲಿದ್ದಾರೆ.

ಕೊರೋನಾ ಸಂಕಟಕಾಲದಲ್ಲಿ ಕೆಲವು ಸಮಯ ಸಿನಿಮಾ ಕ್ಷೇತ್ರ ಸ್ತಬ್ಧವಾಗಿತ್ತು. ಕನ್ನಡ, ತುಳು ಸಿನಿಮಾ ದಿಗ್ಗಜರ ಪಾಲಿಗೂ ಈ ಕೊರೋನಾ ಅವಧಿ ಸಹಿಸಲಾಗದ ಏಟನ್ನೇ ನೀಡಿತ್ತು. ಅಂತೂ ಇಂತು ಇದೀಗ ಮಾರ್ಗಸೂಚಿ ನಿಯಮಗಳು ಸಡಿಲವಾಗಿದ್ದರೂ ಶೂಟಿಂಗ್ ಪ್ರಕ್ರಿಯೆಗೆ ಒಂದಿಲ್ಲೊಂದು ಅಡ್ಡಿ ಎದುರಾಗುತ್ತಲೇ ಇದೆ. ಆದರೂ ಇಲ್ಲಿ ಡಾ.ಬೋಜರಾಜ್ ತನ್ನ ಪಯಣ ಮುಂದುವರಿಸಲು ಬಸ್ ಹತ್ತಿದ್ದಾರೆ.

ಬಣ್ಣ ಬಣ್ಣದ ಬದುಕು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಭೋಜರಾಜ್ ಎಂಬಿಬಿಎಸ್’ ತುಳು ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದರೂ ಪರಿಪೂರ್ಣಗೊಳ್ಳಲು ಇನ್ನೇನು ಒಂದೇ ಗೇಣು ಬಾಕಿಯಿದೆ ಎನ್ನಬಹದು. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೂಡಾ ಮುಗಿದಿದ್ದು ಕ್ಲೈಮ್ಯಾಕ್ಸ್‌ಗಷ್ಟೇ ಅಂತಿಮ ಸ್ಪರ್ಷ ಸಿಗಬೇಕಿರುವುದು.

‘ಭಟ್ಕಳ್…’ ಸಿನಿಮಾದ ಚಿತ್ರೀಕರಣ

ಈ ಕೊನೆಯ ಸಾಲಿನ ಪ್ರಿಸ್ಕ್ರಿಪ್ಷನ್ ಇಸ್ಮಾಯಿಲ್ ಪಾಲಿಗೂ ಟಾನಿಕ್.  ಹೇಳಿ ಕೇಳಿ ಬೇಕಿರುವುದು ಕೇವಲ 4-5 ದಿನಗಳ ಶೂಟಿಂಗ್. ಆದರೆ ಸಿದ್ದತೆ ಸಾಗಿರುವುದು ಸುಮಾರು ಒಂದು ತಿಂಗಳಿನಿಂದ. ಯಾಕೆಂದರೆ ಈ ಡಾ.ಬೋಜರಾಜ್ ತುಂಬಾ ಬ್ಯುಸಿ. ಅಂತೂ ಇಂತೂ ಸಿನಿ ತಂಡದ ಒತ್ತಾಯಕ್ಕೆ ಮಣಿದು ಇದೀಗ ಈ ತಂಡ ಬಸ್ ಹತ್ತಲು ಸಜ್ಜಾಗಿದೆಯಂತೆ. ಅದೇನೇ ಅಗಲಿ ಮುಂದಿನ ವರ್ಷಾರಂಭದಲ್ಲಿ ನಿರೀಕ್ಷೆ ಮೀರಿದ ಸಿನಿಮಾವನ್ನು ಕೊಡುತ್ತೇನೆ ಅಂತಿದ್ದಾರೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ.

Related posts