‘ಭೂ ಸಿರಿ’ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ‘ಭೂಮಿತ್ರ’ ಉಪಕರಣದ ವೈಶಿಷ್ಟ್ಯ

ಹಸಿ ಮತ್ತು ಒಣ ತ್ಯಾಜ್ಯವನ್ನು ತಕ್ಷಣ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಭೂ ಸಿರಿ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ಭೂಮಿತ್ರ ಉಪಕರಣವನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ. ಈ ಉಪಕರಣಗಳ ವೈಶಿಷ್ಟ್ಯ ಹೀಗಿದೆ.

 • ಸಾವಯವ ಬೇಸಾಯ ಪದ್ದತಿಯು ಸಂಪ್ರದಾಯ, ನಾವೀನ್ಯತೆ ಮತ್ತು ವಿಜ್ಞಾನವನ್ನು ಒಳಗೊಂಡು ಪರಿಸರದಲ್ಲಿರುವ ಜೀವಿಗಳೊಂದಿಗೆ ಉತ್ತಮ ಸಂಬಂಧವನ್ನು ಏರ್ಪಡಿಸುತ್ತದೆ.
 • ಜಪಾನಿನ ಸಹಜ ಕೃಷಿಯ ಹರಿಕಾರ ಮಸನೊಬು ಫುಕುವೋಕಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಜ ಕೃಷಿಯನ್ನು ಗಾಂಧಿ ಕೃಷಿ ಎಂದು ಕರೆದಿದ್ದರು.
 • ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಬೇಸಾಯ ಮಾಡುವುದು ಸಾವಯವ ಕೃಷಿಯ ಮೂಲ ಆಶಯವಾಗಿದೆ.
 • ರಾಸಾಯನಿಕಗಳ ಬಳಕೆ, ಅವೈಜ್ಞಾನಿಕ ಸಾಗುವಳಿ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಕೃಷಿ ಭೂಮಿ ಬರಡಾಗುತ್ತಿದೆ.
 • ಮಣ್ಣಿನ ಫಲವತ್ತೆಯನ್ನು ಉಳಿಸಲು ಸಾವಯವ ಕೃಷಿ ಅತ್ಯಂತ ಸಹಕಾರಿಯಾಗಿದೆ.
 • ಕೇಂದ್ರ ಸರ್ಕಾರದ ಆಯವ್ಯಯದಲ್ಲಿಯೂ ಸಾವಯವ ಕೃಷಿಯನ್ನು ದೊಡ್ಡಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ.
 • ರಾಜ್ಯ ಸರ್ಕಾರವೂ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಹಾಗೂ ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಬದ್ಧವಾಗಿದೆ.
 • ಸಾವಯವ ಕೃಷಿ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ ಎನ್ನುವುದು ನಮಗೆ ಹೆಮ್ಮೆಯ ಸಂಗತಿ.
 • ರೈತರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಭೂಸಿರಿ ಮತ್ತು ಭೂಮಿತ್ರ ಯಂತ್ರಗಳು ಸಹಕಾರಿಯಾಗಲಿವೆ.
 • ಇಂತಹ ಉಪಕ್ರಮಗಳಿಂದಾಗಿ ರೈತರ ಕೃಷಿ ಪದ್ದತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ.
 • ನೈಸರ್ಗಿಕವಾಗಿ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಯಾಗಲು ಕನಿಷ್ಠ 2 ತಿಂಗಳು ಬೇಕಾಗುತ್ತದೆ. ಭೂ ಸಿರಿ ಯಂತ್ರದಿಂದ ಸಾವಯವ ಗೊಬ್ಬರವನ್ನು ತ್ವರಿತವಾಗಿ ತಯಾರಿಸಬಹುದಾಗಿದೆ.
 • ಭೂಮಿತ್ರದ ಮೂಲಕ ಮಣ್ಣಿನ ಫಲವತ್ತೆಯನ್ನು ಕೂಡಲೇ ಪರೀಕ್ಷೆ ಮಾಡಬಹುದಾಗಿರುವುದು ಈ ಉಪಕರಣದ ವೈಶಿಷ್ಟ್ಯ,
 • ಕಸದಿಂದ ರಸ ತೆಗೆಯುವ ಇಂತಹ ಅತ್ಯಾಧುನಿಕ ಯಂತ್ರಗಳು ಇಂದಿನ ಅಗತ್ಯವಾಗಿದೆ.
 • ರೈತರ ಮೇಲಿನ ಒತ್ತಡವನ್ನು ನೀಗಿಸಿ ಅವರು ಹೆಚ್ಚಿನ ಇಳುವರಿಯನ್ನು ಪಡೆಯುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳಾಗಬೇಕಿದೆ.
 • ರೈತಸ್ನೇಹಿಯಾದ ಇಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿರುವ ಡಾ: ನಾಗರಾಜ ಹೆಗಡೆ ಅವರ ನೇತೃತ್ವದ ವಿಜ್ಞಾನಿಗಳ ತಂಡದವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
 • ಈ ಸಂಶೋಧನೆಗಳು ಹೆಚ್ಚಿನ ರೈತರನ್ನು ಸಾವಯವ ಕೃಷಿ ಕೈಗೊಳ್ಳಲು ಪ್ರೇರೇಪಿಸಲಿ. ಗ್ರಾಮೀಣ ಭಾಗಗಳಲ್ಲಿ ತ್ಯಾಜ್ಯ ನಿರ್ವಹಣೆಗೂ ಈ ಯಂತ್ರಗಳು ಸಹಕಾರಿಯಾಗಲಿದೆ.

Related posts