ಇನ್ನು ಮುಂದೆ ಈ ಹಣ್ಣಿನ ಹೆಸರು ಡ್ರ್ಯಾಗನ್ ಅಲ್ಲ, ‘ಕಮಲಂ’

ಊರುಗಳ ಹೆಸರನ್ನು, ನಗರಗಳ ಹೆಸರನ್ನು ನಮ್ಮ ಇತಿಹಾಸಗಳಿಗೆ ತಕ್ಕಂತೆ ಮರುನಾಮಕರಣ ಮಾಡಿದ್ದುಂಟು. ಇದೀಗ ಹಣ್ಣುಗಳ ಹೆಸರನ್ನೂ ಬದಲಾಯಿಸುವ ಪ್ರಯತ್ನ ನಡೆದಿದೆ. ಕುತೂಹಲಕಾರಿ ತೀರ್ಮಾನವೊಂದರಲ್ಲಿ ಡ್ರ್ಯಾಗನ್ ಫ್ರೂಟ್ ಹೆಸರನ್ನು ಕಮಲಂ ಎಂದು ಬದಲಾಯಿಸಲಾಗಿದೆ. ಗುಜರಾತ್ ನ ಸರ್ಕಾರ ಈ ಮರುನಾಮಕರಣ ಮಾಡಲು ಮುಂದಾಗಿದೆ. ಡ್ರ್ಯಾಗನ್ ಚೀನಾಕ್ಕೆ ಬಲು ಪ್ರೀಯ ಹೆಸರು. ಇತ್ತೀಚಿನ ದಿನಗಳಲ್ಲಿ ಚೀನಾವನ್ನು ಸಾಂಪ್ರದಾಯಿಕ ಎದುರಾಳಿ ಎಂದೇ ಭಾವಿಸಲಾಗುತ್ತಿದ್ದು ಅನೇಕ ವಿಚಾರಗಳಲ್ಲಿ ಆ ದೇಶವನ್ನು ಭಾರತೀಯರು ವಿರೋಧಿಸುತ್ತಲೇ ಇದ್ದಾರೆ. ಅದೇ ಸಂದರ್ಭದಲ್ಲಿ ಹಣ್ಣಿನ ಹೆಸರನ್ನೂ ಚೀನೀ ಪದದ ಬದಲಾಗಿ ಸ್ವದೇಶಿ ಹೂವಿನ ಹೆಸರನ್ನು ಇಡಲಾಗಿದೆ. ಈ ಹಣ್ಣಿನ ಹೊರ ಭಾಗ ಕಮಲದ ಆಕೃತಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ಕಮಲಮ್ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಲಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದ್ದಾರೆ.

ಮತ್ಸ್ಯವೋದ್ಯಮಕ್ಕೆ ಆಧುನಿಕತೆಯ ಸ್ಪರ್ಷ; ChefTalk ಪೂಜಾರಿಗೆ ಅಭಿನಂದನೆಗಳ ಮಹಾಮಳೆ

ಉದ್ಯೋಗದಾತನ ಬಗ್ಗೆ ಗುಣಗಾನ ಕೇಳಿ ಮುಖ್ಯಮಂತ್ರಿ ಪುತ್ರ ಸಂಸದ ರಾಘವೇಂದ್ರ ಮೂಡ್ನವಿಸ್ಮಿತ.. ಅಭಿಮಾನ ಸೂಚಿಸಿ ಸನ್ಮಾನಿಸಿದ ಕ್ಷಣವೂ ಅನನ್ಯ ಹಾಗೂ ಅಪರೂಪದ ಪ್ರಸಂಗ ಉಡುಪಿ: ಸಾಂಪ್ರದಾಯಿಕ ಮತ್ಸ್ಯವೋದ್ಯಮಕ್ಕೆ ಇದೀಗ ಆಧುನಿಕತೆಯ ಸ್ಪರ್ಷ ಸಿಕ್ಕಿದೆ. ಮತ್ಸ್ಯಶ್ರೀಮಂತಿಕೆಯ ತವರಾಗಿರುವ ರಾಜ್ಯದ ಕರಾವಳಿ ಇನ್ನು ಮುಂದೆ ‘ಫಿಷ್ ವೇಪರ್ಸ್’ ಉತ್ಪನ್ನಗಳಿಂದಲೂ ಹೆಸರುವಾಸಿಯಾಗಲಿದೆ. ಅರಬ್ಬೀ ಸಮುದ್ರದಿಂದ ಹೇರಳವಾಗಿ ಸಿಗುತ್ತಿರುವ ಮತ್ಸ್ಯ ಸಂಪತ್ತನ್ನು ಆಹಾರವಾಗಿ ಬಳಸುತ್ತಿದ್ದ ಜನರಿಗೆ ಇನ್ನು ಮುಂದೆ ಅದರ ಮೌಲ್ಯವರ್ಧಿತ ಖಾದ್ಯಗಳೂ ಸಿಗಲಿವೆ. ಈ ಫಿಷ್ ವೇಪರ್ಸ್ ಹಾಗೂ ಚಿಪ್ಸ್ ಸಹಿತ ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಯಿತು. ದೇಶದ ಪ್ರತಿಷ್ಠಿತ ಆಹಾರೋತ್ಪನ್ನ ಸಂಸ್ಥೆ ChefTalkನ ಮುಖ್ಯಸ್ಥ, ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ, ‘ಮತ್ಸ್ಯಬಂಧನ’ ಎಂಬ ಹೆಸರಲ್ಲಿ ಕರಾವಳಿ ಜನರ ಮಹತ್ವಾಕಾಂಕ್ಷೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪನ್ನ ಘಟಕ ತಲೆ ಎತ್ತಲಿದ್ದು ಮಂಗಳವಾರ ಉಡುಪಿ…

ದೇಶದಲ್ಲೇ ಪ್ರಥಮ.. ‘ಫಿಷ್ ವೇಪರ್ಸ್’ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ

ಉಡುಪಿ: ಫಿಶ್ ಕರಿ, ಫಿಶ್ ಫ್ರೈ, ಹೀಗೆ ಮೀನಿನ ವಿವಿಧ ಖಾದ್ಯಗಳನ್ನು ನೀವು ಸವಿದಿರಬಹುದು. ಆದರೆ ಮೀನಿನ ಚಿಪ್ಸ್ ತಿಂದಿದ್ದೀರಾ? ಇದೀಗ ‘ಫಿಷ್ ವೇಪರ್ಸ್’ ಮೇನಿಯಾ ಸೃಷ್ಟಿಸುವ ಪ್ರಯತ್ನಕ್ಕೆ ಕರಾವಳಿ ಮೂಲದ ಉದ್ಯಮಿ ಮುಂದಾಗಿದ್ದಾರೆ. ಈ ಮಹತ್ವಾಕಾಂಕ್ಷೆಯ ಫಿಷ್ ವೇಪರ್ಸ್ ತಯಾರಿಕಾ ಘಟಕ, ಮೀನಿನ ಮೌಲ್ಯವರ್ಧಿತ ಖಾದ್ಯಗಳ ಈ ಉತ್ಪಾದನಾ ಘಟಕಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಲಿದೆ. ಉಡುಪಿ ಜಿಲ್ಲೆ ಬೈಂದೂರು ಸಮೀಪದ ಎಲ್ಲೂರು ಎಂಬಲ್ಲಿ ಫಿಷ್ ವೇಪರ್ಸ್ ಫ್ಯಾಕ್ಟರಿ ಸ್ಥಾಪನೆಯಾಗಲಿದ್ದು ದೇಶದಲ್ಲೇ ವಿಶೇಷ ಎಂಬಂತೆ ಮೀನಿನಿಂದ ವಿವಿಧ ತಿನಿಸುಗಳು ಇಲ್ಲಿ ತಯಾರಾಗಲಿದೆ. ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿ ಈ ಉದ್ಯಮದ ಮೂಲಕ ಮೀನುಗಾರರ ಪಾಲಿಗೆ ಆಶಾವಾದಿಯಾಗಿದ್ದಾರೆ. ಮತ್ಯೋದ್ಯಮ ಉತ್ತೇಜನ ಉದ್ದೇಶದಿಂದ ಈ ವಿನೂತನ ಉದ್ದಿಮೆಗೆ ಮುನ್ನುಡಿ ಬರೆಯಲಾಗುತ್ತಿದ್ದು, ಮೀನಿನಿಂದ ಚಿಪ್ಸ್ ತಯಾರಿಸುವ ಸುಧಾರಿತ ಅವಿಷ್ಕಾರ ಈ…

ಗುರುಪುರದಲ್ಲಿ ‘ಗುತ್ತುದ ವರ್ಸೋದ ಪರ್ಬೋ’; ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಶ

ಮಂಗಳೂರು: ತುಳನಾಡು ಪರಶುರಾಮನಿಂದ ಸೃಷ್ಟಿಯಾದ ತಪೋಭೂಮಿ ಎಂಬ ನಂಬಿಕೆ ಇದೆ. ಸಾಲು ಸಾಲು ದುರ್ಗಾ ದೇವಿಗಳ ತಾಣ ಎಂಬ ಪ್ರತೀತಿಗೆ ಪಾತ್ರವಾಗಿರುವ ಕರಾವಳಿಯಲ್ಲಿ ತುಳು ಪರಂಪರೆಯ ದೈವಾರಾಧನೆಗೂ ಮಹತ್ವವಿದೆ. ಸೀಮೆಗೊಂದು ದೈವಸ್ಥಾನ, ಕುಟುಂಬಕ್ಕೊಂದು ದೈವಸ್ಥಾನ ಹೀಗೆ ಭೂತಾರಾಧನೆಯ ಮಜಲುಗಳು ಅನೇಕ ಇವೆ. ಅದರಲ್ಲೂ ‘ಗುತ್ತು’ ಪರಂಪರೆಯಲ್ಲಿನ ಆಚರಣೆಯ ಗತ್ತು ಗಮ್ಮತ್ತು ತುಳುಪರಂಪರೆಗಷ್ಟೇ ಸೀಮಿತ ಎನ್ನಬಹುದು. ಅಂತಹಾ ಗುತ್ತುಗಳ ವರ್ಷದ ಪರ್ಬೋ ತನ್ಬದೇ ಅದ ಆಕರ್ಷಣೆಯಿಂದ ನಾಡಿನ ಗಮನ ಕೇಂದ್ರೀಕರಿಸುತ್ತದೆ. ಈ ಸೊಗಸು ಸೊಬಗಿಗೆ ಸಾಕ್ಷಿಯಾಗುತ್ತದೆ ಮಂಗಳೂರು ಹೊರವಲಯದ ಗುರುಪುರದ ಗೋಳಿದಡಿ ಗುತ್ತು. ಪ್ರತೀ ವರ್ಷದಂತೆ ಈ ಬಾರಿಯೂ ಇಲ್ಲಿ ‘ಗುತ್ತುದ ವರ್ಸೋದ ಪರ್ಬೋ’ ನಡೆಯಲಿದೆ. ಜನವರಿ 19 ಮತ್ತು 20ರಂದು ನಡೆಯುವ ಅನನ್ಯ ವೈಭವದ ಈ ಕೈಂಕರ್ಯದ ಸಿದ್ದತೆಗೆ ಅಂತಿಮ ಸ್ಪರ್ಷ ಸಿಕ್ಕಿದೆ. ದೇವಾಲಯಗಳಲ್ಲಿ ನೆರವೇರುವ ವರ್ದಂತ್ಯುತ್ಸವದ ರೀತಿಯಲ್ಲೇ ಈ ದೈವಾರಾಧನೆಯ, ನ್ಯಾಯದೇಗುಲ ಸ್ವರೂಪದ ಗದ್ದುಗೆಯಲ್ಲಿ ವಾರ್ಷಿಕ ಜಾತ್ರೆ…

ದರ್ಶನ್ ಸಂಕ್ರಾಂತಿ.. ರೋಮಾಂಚಕ ಸನಿವೇಶದ ಫೋಟೋಗಳು

ಸಿನಿಮಾ ತಾರೆಯರ ಅಂಗಳದಲ್ಲೂ ಮಕರ ಸಂಕ್ರಾಂತಿ ಸಡಗರ ಕಂಡುಬಂದಿದೆ. ತಾರೆಯ ತೋಟಗಳಲ್ಲಿ ನಡೆದ ಹಬ್ಬ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕುದುರೆಯ ಜೊತೆ ಕಿಚ್ಚು ಹಾಯಿಸಿದ್ದಾರೆ. ಈ ಸಂಬಂಧದ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Darshan celebrates Sankranti in his farmhouse @smshashiprasad @sharanuhullur1 pic.twitter.com/P1BDvUoLEb — SSSMovieReviews (@sssmoviereviews) January 14, 2021

ಭಾರತದ ಮೊಟ್ಟ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ನಿರ್ಮಾಣಕ್ಕೆ ಅಡಿಗಲ್ಲು

ಕೊಪ್ಪಳ: ಆಟಿಕೆಗಳ ಕ್ಲಸ್ಟರ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು. ಕೈಗಾರಿಕಾ ಸಚಿವ ಜಗದೀಶ್ ಎಸ್. ಶೆಟ್ಟರ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಅರಣ್ಯ ಸಚಿವ ಆನಂದ್ ಸಿಂಗ್, ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ, ಏಕಸ್ ಕಂಪೆನಿಯ ಚೇರ್ಮನ್ ಅರವಿಂದ ಮೆಳ್ಳಿಗೆರಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಕಸ್ ಟಾಯ್ ಕ್ಲಸ್ಟರ್ ಕರ್ನಾಟಕ ಸರ್ಕಾರದ ‘ನಿರ್ದಿಷ್ಟ ಉತ್ಪನ್ನ ಕೈಗಾರಿ ಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯ ಒಂದು ಪ್ರಮುಖ ಭಾಗವಾಗಿದ್ದು, ಆಟಿಕೆ ಕ್ಲಸ್ಟರ್ ಸ್ಥಾಪನೆ ಮಾಡುವ ಮೂ ಲಕ ನಾವು 1 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ. ಇದಕ್ಕೆ 5 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ವನ್ನು ಆಕರ್ಷಣೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಭಾರತದ ಮೊಟ್ಟ ಮೊದಲ ಆಟಿಕೆ…

ಮಣ್ಣು ಪರೀಕ್ಷಾ ಸಂಚಾರಿ ವಾಹನಗಳಿಗೆ ಸಿಎಂ ಹಸಿರು ನಿಶಾನೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಪ್ಪಳದಲ್ಲಿ ಶನಿವಾರ ಮಣ್ಣು ಪರೀಕ್ಷಾ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು. ಕೈಗಾರಿಕಾ ಸಚಿವ ಜಗದೀಶ್ ಎಸ್. ಶೆಟ್ಟರ, ಕೃಷಿ ಸಚಿವ ಬಿ.ಸಿ. ಪಾಟೀಲ್ ಮೊದಲಾದವರು ಹಾಜರಿದ್ದರು.

‘ಕಲಿಯುತ್ತಾ ನಲಿಯೋಣ’ ಶಾಲೆಗೇ ಹೋಗಲಾಗದ ಮಕ್ಕಳಿಗೆ ಆಕಾಶವಾಣಿ‌ಯಲ್ಲಿ ವಿನೂತನ ಕಾರ್ಯಕ್ರಮ

ಬೆಂಗಳೂರು: ಶಿಕ್ಷಣ ಇಲಾಖೆಯು ಆಕಾಶವಾಣಿ ಮೂಲಕ ಜನವರಿ 11 ರಿಂದ ‘ಕಲಿಯುತ್ತಾ ನಲಿಯೋಣ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಶಾಲೆಗೆ ಹೋಗಲಾರದ ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ‘ಕಲಿನಲಿ ಕಾರ್ಯಕ್ರಮಗಳನ್ನು ಜನವರಿ 11ರಿಂದ ಏಪ್ರಿಲ್ 5 ರ ವರೆಗೆ ಆಕಾಶವಾಣಿ ಪ್ರಸಾರ ಮಾಡಲಿದೆ. ಪ್ರತಿ ವಾರ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ 10.15ರವರೆಗೆ ಒಂದು ಮತ್ತು ಎರಡನೇ ತರಗತಿಗಳಿಗಾಗಿ ಹಾಗೂ 10:15 ರಿಂದ 10.30 ಗಂಟೆಯವರೆಗೂ 3 ಮತ್ತು 4ನೇ ತರಗತಿಗಳಿಗಾಗಿ ಹಾಡು,  ಕಥೆ, ನಾಟಕ, ಸಂಭಾಷಣೆ, ಒಗಟು, ಮತ್ತು ವಿವಿಧ ಆಸಕ್ತಿಕರ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರಿಯುವಂತೆ ಮಾಡಲು ಶಿಕ್ಷಣ‌ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ವಿವರಿಸಿದ್ದಾರೆ. ಈ ಕಾರ್ಯಕ್ರಮಗಳ ಮೂಲಕ ನಲಿ-ಕಲಿಯ ಆಶಯಗಳಾದ ಆಲಿಸುವಿಕೆ,…

ಹೆಲ್ಮೆಟ್ ವಿಷಯ.. ರಸ್ತೆಗಳಲ್ಲಿನ್ನು ಕಳ್ಳ-ಪೊಲೀಸ್ ಆಟವಿಲ್ಲ

ಬೆಂಗಳೂರು: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುವವರನ್ನು , ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುತ್ತಿರುವವರನ್ನು ಕಾಡುತ್ತಿರುವ ಪೊಲೀಸರಿಗೆ ಸದ್ಯಕ್ಕೆ ಬ್ರೇಕ್.. ಸಾರ್ವಜನಿಕರಿಗೂ ರಿಲೀಫ್.. ಆದರೆ ಕಾನೂನು ಉಲ್ಲಂಘಿಸಿದಲ್ಲಿ ನಿಲ್ಲದು ಫೈನ್. ಏನಿದು ಅಚ್ಚರಿ ಅಂತೀರಾ? ಈ ವರೆಗೂ ಬೆಂಗಳೂರಿನ ರಸ್ತೆಗಳು ವಾಹನ ಸವಾರರು ಮತ್ತು ಹಾಗೂ ಸಂಚಾರ ಪೊಲೀಸರ ನಡುವೆ ನಿತ್ಯವೂ ಕಳ್ಳ-ಪೊಲೀಸ್ ಆಟದ ರೀತಿ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದ್ದವು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಕೈಗೊಂಡರೆ ದಂಡ ಕಟ್ಟಿಟ್ಟ ಬುತ್ತಿ. ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೂ ಫೈನ್. ಸಿಗ್ನಲ್ ಜಂಪ್ ಮಾಡಿದರಂತೂ ಜೇಬಿಗೆ ಕತ್ತರಿ ಗ್ಯಾರಂಟಿ. ತಿರುವು ರಸ್ತೆಗಳಲ್ಲಿ, ಮರಗಳ ಮರೆಯಲ್ಲಿ ನಿಂತು ಪೊಲೀಸ್ ಸಿಬ್ಬಂದಿ ಈ ನಿಯಮ ಉಲ್ಲಂಘನೆ ಬಗ್ಗೆ ಹದ್ದಿನ ಕಣ್ಣಿಡುತ್ತಿದ್ದರು. ನಿತ್ಯವೂ ಸಂಚಾರ ನಿಯಮ ಉಲ್ಲಂಘಿಸಿದ ನೂರಾರು ಮಂದಿಯಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದರು. ಆದರೆ ಈ…

2020ನೇ ಸಾಲಿನ ಪ್ರಶಸ್ತಿ ಘೋಷಣೆ; ಪುರಸ್ಕೃತರ ವಿವರ ಇಂತಿದೆ

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ಚಾಮರಾಜನಗರಲ್ಲಿ ಸುದ್ದಿಗೋಷ್ಠಿ ನಡೆಸಿ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಿರುವ ಪಟ್ಟಿ ಪ್ರಕಟಿಸಿದರು. ವಾರ್ಷಿಕ ಗೌರವ ಜಾನಪದ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರು ಡಾ. ಜೀ.ಶಂ. ಪಶಸ್ತಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಬಸವರಾಜ ಸಬರದ ಅವರು ಡಾ. ಗದ್ದಗೀಮಠ ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ: ಬೆಂಗಳೂರು ಜಿಲ್ಲೆ ಎಂ.ಕೆ.ಸಿದ್ದರಾಜು-ಜಾನಪದಗಾಯನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊನ್ನಗಂಗಮ್ಮ-…