ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಡಿ.31ರಂದು ಪ್ರಕಟ

ದೆಹಲಿ: ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಡಿಸೆಂಬರ್ 31ರಂದು ಪ್ರಕಟವಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಡಿ.31ರಂದು ಸಂಜೆ ಆರು ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ‘2021ನೇ ಸಾಲಿನಲ್ಲಿ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವಾಗಿನಿಂದ ಪರೀಕ್ಷೆ ಆರಂಭವಾಗುವುದು ಎನ್ನುವುದನ್ನು ಡಿ.31ರಂದು ಘೋಷಿಸಲಿದ್ದೇನೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Related posts