ಕುರುಬರನ್ನು ಎಸ್’ಟಿ ಪಟ್ಟಿಗೆ ಸೇರಿಸುವವರೆಗೂ ಹೋರಾಟ; ನಿರಂಜನಾನಂದ ಪುರಿ ಸ್ವಾಮೀಜಿ

ಚಿತ್ರದುರ್ಗ: ಕುರುಬರನ್ನು ಎಸ್ ಟಿಗೆ ಸೇರ್ಪಡೆ ಮಾಡುವ ಸಂಬಂಧ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪುರ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಎಸ್.ಟಿ. ಹೋರಾಟ ಸಮಿತಿಯ ಸಭೆಯನ್ನು ಉದ್ದೇಶಿಸಿ ಬಂಡೆಪ್ಪ ಕಾಶಂಪುರ್ ಮಾತನಾಡಿದರು. ಎಸ್’ಟಿ ಪಟ್ಟಿಗೆ ಸೇರ್ಪಡೆ ಕುರುಬರ ಹಕ್ಕು ಎಂದು ಅವರು ಹೇಳಿದರು.

ಪಾದಯಾತ್ರೆಯ ನೇತೃತ್ವವಹಿಸಿರುವ ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕುರುಬರ ಓಟು ಪಡೆದು ಚುನಾಯಿತರಾಗಿರುವ ಎಲ್ಲಾ ಶಾಸಕರು ಬಂಡೆಪ್ಪ ಕಾಶಂಪುರ್ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸೂಚಿಸಿದರು.

ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡು ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ವಾಮಿಜಿ ಎಚ್ವರಿಸಿದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಮಾತನಾಡಿ,ಕುರುಬರು ಎಸ್ ಟಿ ಒಟ್ಟಿಗೆ ಸೇರ್ಪಡೆ ನಮ್ಮ ಹಕ್ಕು, ಅದಕ್ಕೆ ಸಂಘಟಿತ ಹೋರಾಟ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ,ಸಂಘಟಿತ ಹೋರಾಟದಿಂದಷ್ಟೇ ಹಕ್ಕು ಪಡೆಯಲು ಸಾಧ್ಯ ಎಂದು ಕರೆಕೊಟ್ಟರು.
ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಮತ್ತಿತರರು ಪಾಲ್ಗೊಂಡರು.

Related posts