ಪಾತಕ ಸಾಮ್ರಾಜ್ಯದ ವಿರುದ್ಧ ಯೋಗಿ ಸಮರ, ಶಾಸಕನ ಮನೆಯೇ ನೆಲಸಮ

ಲಖನೌ: ಪಾತಕ ಸಾಮ್ರಾಜ್ಯದ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶದ ಯೋಗಿ ಸರ್ಕಾರ ಇದೀಗ ಪಾತಕಿಗಳ ಅಡಿಗಳನ್ನೇ ಕೆಡವಲು ಆರಂಭಿಸಿದೆ. ಸಮಾಜಘಾತುಕ ಶಕ್ತಿಗಳ ದಮನ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಕಾರ್ಯಾಚರಣೆ ಗ್ಯಾಂಗ್ ಸ್ಟರ್ ಹಾಗೂ ಶಾಸಕ ಮುಖ್ತಾರ್ ಅನ್ಸಾರಿ ಸಹಚರರ ನಿದ್ದೆಗೆಡಿಸಿದೆ. ಅನ್ಸಾರಿಗೆ ಸೇರಿದ ಮನೆಯನ್ನು ಪೊಲೀಸರು ಜೆಸಿಬಿ ಮೂಲಕ ನೆಲಸಮ ಮಾಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಲಖೌನ್ ದ ದಾಲಿಭಾಗ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯನ್ನು ಜೆಸಿಬಿ ಬಳಿಸಿ ನೆಮಸಮ ಮಾಡಲಾಗಿದೆ.

2005ರ ನವೆಂಬರ್ 29ರಂದು ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಹತ್ಯೆ ನಡೆದಿತ್ತು. ಈ ಕೃತ್ಯದಲ್ಲಿ ಮುಖ್ತಾರ್ ಅನ್ಸಾರಿ ಪ್ರಮುಖ ಆರೋಪಿಯಾಗಿದ್ದಾರೆ.

Related posts